ಸುದ್ದಿ ಕಣಜ.ಕಾಂ ಶಂಕರಘಟ್ಟ(ಶಿವಮೊಗ್ಗ): ಕುವೆಂಪು ವಿಶ್ವವಿದ್ಯಾಲಯದ 40ಕ್ಕೂ ಅಧಿಕ ಸ್ನಾತಕೋತ್ತರ ಪದವಿ ಕೋರ್ಸ್ಗಳಿಗೆ ಡಿಸೆಂಬರ್ 18, 19 ಮತ್ತು 21ರಂದು ಪ್ರವೇಶಾತಿ ಕೌನ್ಸೆಲಿಂಗ್ ನಡೆಯಲಿದೆ ಎಂದು ವಿಶ್ವವಿದ್ಯಾಲಯದ ಪ್ರಕಟಣೆ ತಿಳಿಸಿದೆ.
ವಿಶ್ವವಿದ್ಯಾಲಯದ ಮುಖ್ಯ ಆವರಣ, ಕಡೂರು ಪಿ.ಜಿ.ಕೇಂದ್ರ ಮತ್ತು 20ಕ್ಕೂ ಹೆಚ್ಚು ಸ್ನಾತಕೋತ್ತರ ಕಾಲೇಜುಗಳ ಎಲ್ಲ 33 ವಿಭಾಗಗಳ 45 ಕೋರ್ಸ್ಗಳಿಗೆ ಡಿಸೆಂಬರ್ 18 ಮತ್ತು 19ರಂದು ಹಾಗೂ 21ರಂದು ಪ್ರವೇಶಾತಿ ಕೌನ್ಸೆಲಿಂಗ್ ಹಮ್ಮಿಕೊಳ್ಳಲಾಗಿದೆ. ಸಂಪೂರ್ಣ ಪ್ರವೇಶಾತಿಯನ್ನು ಈ ಮೂರು ದಿನಗಳಲ್ಲಿಯೇ ಮಾಡಿ ಮುಗಿಸಲು ವಿವಿ ಯೋಜಿಸಿದೆ.
ಬೆಳಗ್ಗೆ 9.30ಕ್ಕೆ ಆವರಣಕ್ಕೆ ಬರಲು ಸೂಚನೆ: 18 ಮತ್ತು 19ರಂದು ಮೆರಿಟ್ ಸೀಟುಗಳು ಮತ್ತು ವೆಯ್ಟಿಂಗ್ ಪಟ್ಟಿಯ ಅಭ್ಯರ್ಥಿಗಳಿಗೆ ಪ್ರವೇಶಾತಿ ಪ್ರಕ್ರಿಯೆ ನಡೆಯಲಿದೆ. ಸೋಮವಾರ 21ರಂದು ಉಳಿಕೆ ಸೀಟುಗಳು, ಪೇಮೆಂಟ್ ಮತ್ತು ಇತರೆ ಕೋಟಾಗಳ ಸೀಟುಗಳಿಗೆ ಪ್ರವೇಶಾತಿ ನಡೆಯಲಿದೆ. ವಿವಿಧ ವಿಭಾಗಗಳಿಗೆ ಅರ್ಜಿ ಹಾಕಿರುವ ವಿದ್ಯಾರ್ಥಿಗಳು 18ರಂದು ಬೆಳಿಗ್ಗೆ 9.30ಕ್ಕೆ ಅಗತ್ಯ ದಾಖಲೆಗಳೊಂದಿಗೆ ವಿವಿಯ ಜ್ಞಾನಸಹ್ಯಾದ್ರಿ ಆವರಣಕ್ಕೆ ಆಗಮಿಸಬೇಕು.
ಸುದ್ದಿ ಕಣಜ.ಕಾಂ ಶಿವಮೊಗ್ಗ SHIVAMOGGA: ಜಿಲ್ಲೆಯ ವಿವಿಧ ವಿಧಾನಸಭೆ ಕ್ಷೇತ್ರಗಳಲ್ಲಿ 15 ಅಭ್ಯರ್ಥಿಗಳು 26 ನಾಮಪತ್ರಗಳನ್ನು ಸಲ್ಲಿಸಿದ್ದಾರೆ. ಸೋಮವಾರ ಕಾಂಗ್ರೆಸ್, ಬಿಜೆಪಿ ಮತ್ತು ಜೆಡಿಎಸ್ ಅಭ್ಯರ್ಥಿಗಳು ತಮ್ಮ ಉಮೇದುವಾರಿಕೆಯನ್ನು ಚುನಾವಣಾಧಿಕಾರಿಗಳಿಗೆ ಸಲ್ಲಿಸಿದರು. ಯಾರು […]
ಸುದ್ದಿ ಕಣಜ.ಕಾಂ | CITY | CRIME NEWS ಶಿವಮೊಗ್ಗ: ಶುಕ್ರವಾರ ತುಂಗಾ ನದಿಯಲ್ಲಿ ಸ್ನೇಹಿತರೊಂದಿಗೆ ಈಜಲು ಹೋದಾಗ ನೀರಿನಲ್ಲಿ ನಾಪತ್ತೆಯಾಗಿದ್ದ ಬಾಲಕನ ಶವ ಶನಿವಾರ ಪತ್ತೆಯಾಗಿದೆ. READ | ಈಜಲು ಹೋದ […]
ಸುದ್ದಿ ಕಣಜ.ಕಾಂ | KARNATAKA | CRIME NEWS ಸಾಗರ: ಶಿವಮೊಗ್ಗ ಜಿಲ್ಲೆ ಸೇರಿದಂತೆ ಹಲವೆಡೆ ಬೈಕ್ ಗಳನ್ನು ಕಳ್ಳತನ ಮಾಡಿರುವ ಆರೋಪಿಗಳನ್ನು ಮಂಗಳವಾರ ಬಂಧಿಸಲಾಗಿದೆ. ಶಿಕಾರಿಪುರ ತಾಲೂಕಿನ ಅಂಜನಾಪುರದ ಸಮೀರ್ ಅಲಿಯಾಸ್ […]