ಸುದ್ದಿ ಕಣಜ.ಕಾಂ
ಶಂಕರಘಟ್ಟ(ಶಿವಮೊಗ್ಗ): ಕುವೆಂಪು ವಿಶ್ವವಿದ್ಯಾಲಯದ 40ಕ್ಕೂ ಅಧಿಕ ಸ್ನಾತಕೋತ್ತರ ಪದವಿ ಕೋರ್ಸ್ಗಳಿಗೆ ಡಿಸೆಂಬರ್ 18, 19 ಮತ್ತು 21ರಂದು ಪ್ರವೇಶಾತಿ ಕೌನ್ಸೆಲಿಂಗ್ ನಡೆಯಲಿದೆ ಎಂದು ವಿಶ್ವವಿದ್ಯಾಲಯದ ಪ್ರಕಟಣೆ ತಿಳಿಸಿದೆ.
ಶಿವಮೊಗ್ಗದಿಂದ ಸಂಚರಿಸಲಿವೆ Festival express ರೈಲು, ಯಾವಾಗಿಂದ ಸೇವೆ ಲಭ್ಯ, ಯಾವ ರೈಲು? ಇಲ್ಲಿದೆ ಮಾಹಿತಿ
ವಿಶ್ವವಿದ್ಯಾಲಯದ ಮುಖ್ಯ ಆವರಣ, ಕಡೂರು ಪಿ.ಜಿ.ಕೇಂದ್ರ ಮತ್ತು 20ಕ್ಕೂ ಹೆಚ್ಚು ಸ್ನಾತಕೋತ್ತರ ಕಾಲೇಜುಗಳ ಎಲ್ಲ 33 ವಿಭಾಗಗಳ 45 ಕೋರ್ಸ್ಗಳಿಗೆ ಡಿಸೆಂಬರ್ 18 ಮತ್ತು 19ರಂದು ಹಾಗೂ 21ರಂದು ಪ್ರವೇಶಾತಿ ಕೌನ್ಸೆಲಿಂಗ್ ಹಮ್ಮಿಕೊಳ್ಳಲಾಗಿದೆ. ಸಂಪೂರ್ಣ ಪ್ರವೇಶಾತಿಯನ್ನು ಈ ಮೂರು ದಿನಗಳಲ್ಲಿಯೇ ಮಾಡಿ ಮುಗಿಸಲು ವಿವಿ ಯೋಜಿಸಿದೆ.
ಅಭಿವೃದ್ಧಿ ಕಾಮಗಾರಿ ವೇಳೆ ಪತ್ತೆಯಾಯ್ತು 12ನೇ ಶತಮಾನದ ಕಸಪಯ್ಯ ನಾಯಕನ ಶಾಸನ, ಏನಿದರ ವಿಶೇಷ?
ಬೆಳಗ್ಗೆ 9.30ಕ್ಕೆ ಆವರಣಕ್ಕೆ ಬರಲು ಸೂಚನೆ: 18 ಮತ್ತು 19ರಂದು ಮೆರಿಟ್ ಸೀಟುಗಳು ಮತ್ತು ವೆಯ್ಟಿಂಗ್ ಪಟ್ಟಿಯ ಅಭ್ಯರ್ಥಿಗಳಿಗೆ ಪ್ರವೇಶಾತಿ ಪ್ರಕ್ರಿಯೆ ನಡೆಯಲಿದೆ. ಸೋಮವಾರ 21ರಂದು ಉಳಿಕೆ ಸೀಟುಗಳು, ಪೇಮೆಂಟ್ ಮತ್ತು ಇತರೆ ಕೋಟಾಗಳ ಸೀಟುಗಳಿಗೆ ಪ್ರವೇಶಾತಿ ನಡೆಯಲಿದೆ. ವಿವಿಧ ವಿಭಾಗಗಳಿಗೆ ಅರ್ಜಿ ಹಾಕಿರುವ ವಿದ್ಯಾರ್ಥಿಗಳು 18ರಂದು ಬೆಳಿಗ್ಗೆ 9.30ಕ್ಕೆ ಅಗತ್ಯ ದಾಖಲೆಗಳೊಂದಿಗೆ ವಿವಿಯ ಜ್ಞಾನಸಹ್ಯಾದ್ರಿ ಆವರಣಕ್ಕೆ ಆಗಮಿಸಬೇಕು.