ಶಿವಮೊಗ್ಗ ತಾಲೂಕಿನ 40 ಗ್ರಾಮ ಪಂಚಾಯಿತಿ, ತೀರ್ಥಹಳ್ಳಿಯ 38 ಮತ್ತು ಭದ್ರಾವತಿಯ 35 ಪಂಚಾಯಿತಿಗಳಿಗೆ ಡಿಸೆಂಬರ್ 22ರಂದು ಚುನಾವಣೆ ನಡೆಯಲಿದೆ. ಅದಕ್ಕಾಗಿ, ಎಲ್ಲ ಪೂರ್ವ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ.
ಶಿವಮೊಗ್ಗ ತಾಲೂಕು ವ್ಯಾಪ್ತಿಯ ಮಸ್ಟರಿಂಗ್ ಅನ್ನು ನಗರದ ಎನ್.ಇ.ಎಸ್.ನಲ್ಲಿ ಮಾಡಲಾಗಿತ್ತು. ಸೋಮವಾರ ಬೆಳಗ್ಗೆಯಿಂದಲೇ ಇಲ್ಲಿ ಚುನಾವಣೆ ವಾತಾವರಣ ಮನೆ ಮಾಡಿತ್ತು. ಚುನಾವಣೆಗಾಗಿ ನಿಯೋಜನೆಗೊಂಡಿರುವ ಸಿಬ್ಬಂದಿ ಮತ್ತು ಅಧಿಕಾರಿಗಳು ಕರ್ತವ್ಯಕ್ಕೆ ಹಾಜರಾದರು.
ಮತದಾರರ ಪಟ್ಟಿಯಲ್ಲಿ ಮತದಾರರ ಚಿತ್ರ ಸರಿಯಾಗಿ ಕಾಣದಿರುವುದು, ಗ್ರಾಪಂ ಚುನಾವಣೆ ಕೆಲಸಕ್ಕೆ ನಿಯೋಜನೆಗೊಂಡ ಕೆಲವರು ವಿಳಂಬವಾಗಿ ಬಂದಿದ್ದು, ಹೀಗೆ ಕೆಲವು ಗೊಂದಲಗಳ ನಡುವೆಯೇ ಮಸ್ಟರಿಂಗ್ ಕಾರ್ಯ ನಡೆಯುತ್ತಿದೆ. 50 ರೂಟ್ಗೆ 47 ಬಸ್, 7 ಜೀಪ್: ಶಿವಮೊಗ್ಗ ತಾಲೂಕಿಗೆ 50 ಮಾರ್ಗಗಳನ್ನು ಗುರುತಿಸಲಾಗಿದೆ. ಅದರಲ್ಲಿ 43 ಬಸ್ ಮಾರ್ಗಗಳಿದ್ದು, 47 ಬಸ್ಗಳನ್ನು ನಿಯೋಜಿಸಲಾಗಿದೆ. ಅದೇ ರೀತಿ, 8 ಮಾರ್ಗಗಳಿಗೆ 7 ಜೀಪ್ ನೀಡಲಾಗಿದೆ. ಅಧಿಕಾರಿಗಳ ಓಡಾಟಕ್ಕೆ ಜೀಪ್ ಸೌಲಭ್ಯ ಕಲ್ಪಿಸಲಾಗಿದೆ. ಬಸ್ನಲ್ಲಿ ಸಿಬ್ಬಂದಿ ಮತ್ತು ಬ್ಯಾಲೆಟ್ ಪೇಪರ್, ಬಾಕ್ಸ್ ಇನ್ನಿತರ ಸೌಲಭ್ಯಗಳನ್ನು ನೀಡಲಾಗಿದೆ.
ಬಿಗಿ ಭದ್ರತೆ: ಮಾಸ್ಟರಿಂಗ್ ಕೇಂದ್ರದಲ್ಲಿ ಪೊಲೀಸ್ ಸಿಬ್ಬಂದಿಯನ್ನು ನಿಯೋಜನೆ ಮಾಡಿದರೆ, ಇಡೀ ರಾತ್ರಿ ಪಂಚಾಯಿತಿಯಲ್ಲೇ ಚುನಾವಣೆ ಸಿಬ್ಬಂದಿ ಇರಬೇಕಾಗಿರುವುದರಿಂದ ಅಲ್ಲಿ ಹೋಂ ಗಾಡ್ರ್ಸ್ ಮತ್ತು ಪೊಲೀಸರನ್ನು ನಿಯೋಜಿಸಲಾಗಿದೆ.
ಸುದ್ದಿ ಕಣಜ.ಕಾಂ ಬೆಂಗಳೂರು BENGALURU: ಗುಲ್ಬರ್ಗ ವಿದ್ಯುತ್ ಸರಬರಾಜು ಕಂಪೆನಿ ನಿಯಮಿತ(Gulbarga Electricity Supply Company Limited-ಜೆಸ್ಕಾಂ)ದಲ್ಲಿ ಅಪ್ರೆಂಟಿಸ್ ಹುದ್ದೆಗಳ ಭರ್ತಿಗೆ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಅರ್ಹರು ಕೂಡಲೇ ಅರ್ಜಿ ಸಲ್ಲಿಸಲು ಜೆಸ್ಕಾಂ ಪ್ರಕಟಣೆ […]
ಸುದ್ದಿ ಕಣಜ.ಕಾಂ ಶಿವಮೊಗ್ಗ: ನಗರದ ಬಿ.ಎಚ್.ರಸ್ತೆಯಲ್ಲಿರುವ ಯೂನಿಯನ್ ಬ್ಯಾಂಕಿನ ಎಟಿಎಂ ಒಡೆದು ಹಣ ಕಳ್ಳತನ ವಿಫಲ ಯತ್ನ ಮಾಡಲಾಗಿದೆ. READ | ಎಸ್ಸೆಸ್ಸೆಲ್ಸಿ ಪರೀಕ್ಷೆ ಬರೆದ ಆರು ಜನ ಕೊರೊನಾ ಸೋಂಕಿತರು, ಅನಾರೋಗ್ಯ […]
ಸುದ್ದಿ ಕಣಜ.ಕಾಂ | KARNTAKA | MARKET TREND ಬೆಂಗಳೂರು: ರಾಜ್ಯದಲ್ಲಿ ನಿರಂತರ ಏರಿಕೆ ಕಾಣುತ್ತಿದ್ದ ಚಿನ್ನದ ಬೆಲೆಯು ಮಂಗಳವಾರ ಸ್ಥಿರವಾಗಿದೆ. ಏಪ್ರಿಲ್ 14ರ ವರೆಗೆ ಬೆಲೆಯಲ್ಲಿ ಏರಿಕೆಯಾಗುತಿತ್ತು. ಅದೇ ಏ.16, 17ರಂದು […]