ಸುದ್ದಿ ಕಣಜ.ಕಾಂ
ಬೆಂಗಳೂರು: ಲಂಡನ್ನಲ್ಲಿ ನಿದ್ದೆಗೆಡಿಸಿರುವ ಕೊರೊನಾ ರೂಪಾಂತರದ ವೈರಸ್ ತಡೆ ದೃಷ್ಟಿಯಿಂದ ರಾಜ್ಯ ಸರ್ಕಾರ ಕಟ್ಟುನಿಟ್ಟಿನ ನಿಯಮಗಳನ್ನು ಜಾರಿಗೆ ತಂದಿದೆ. ಡಿಸೆಂಬರ್ 24ರ ರಾತ್ರಿ 11ರಿಂದ ಜನವರಿ ಮುಂಜಾನೆ 5 ಗಂಟೆಯವರೆಗೆ ನೈಟ್ ಕರ್ಫ್ಯೂ ವಿಧಿಸಿ ಆದೇಶ ಹೊರಡಿಸಲಾಗಿದೆ.
ರಾಜ್ಯ ಸರ್ಕಾರ ನಿಯಮಗಳು ಇಲ್ಲಿವೆ
- ಅಗತ್ಯ ಸೇವೆಗಳ ಹೊರತಾಗಿ ಸಾರ್ವಜನಿಕರು ರಾತ್ರಿ 11ರಿಂದ ಬೆಳಗ್ಗೆ 5 ಗಂಟೆಯವರೆಗೆ ಓಡಾಡುವಂತಿಲ್ಲ.
- ಗೂಡ್ಸ್ ವಾಹನ, ಟ್ರಕ್ಸ್, ಕ್ಯಾರಿಯರ್ ಗಳ ಸಂಚಾರಕ್ಕೆ ಯಾವುದೇ ನಿಷೇಧ ಇರುವುದಿಲ್ಲ.
- ರಾತ್ರಿ ಹೊತ್ತಲ್ಲಿ ಕಾರ್ಯನಿರ್ವಹಿಸಲೇಬೇಕಾದ ಕೈಗಾರಿಕೆ, ಕಂಪೆನಿ, ಸಂಸ್ಥೆಗಳಿಗೆ ನಿಯಮ ಅನ್ವಯ ಆಗುವುದಿಲ್ಲ. ಆದರೆ, ಶೇ.50ರಷ್ಟು ಸಿಬ್ಬಂದಿಗಳ ಮೂಲಕ ಮಾತ್ರ ಉದ್ದಿಮೆಗಳು ಕಾರ್ಯನಿರ್ವಹಿಸತಕ್ಕದ್ದು.
- ಉದ್ದಿಮೆಗಳಲ್ಲಿ ರಾತ್ರಿ ಪಾಳಿಯಲ್ಲಿ ಕೆಲಸ ಮಾಡುವ ನೌಕರರು ಕಡ್ಡಾಯವಾಗಿ ಗುರುತಿನ ಚೀಟಿ ಹೊಂದಿರತಕ್ಕದ್ದು.
- ದಿನದ 24 ಗಂಟೆ ಕಾರ್ಯನಿರ್ವಹಿಸುವ ಕೈಗಾರಿಕೆಗಳಿಗೆ ನೈಟ್ ಕರ್ಫ್ಯೂ ನಿಯಮ ಅನ್ವಯವಾಗುವುದಿಲ್ಲ.
- ದೂರದ ಪ್ರಯಾಣ ಬೆಳೆಸುವ ಬಸ್, ರೈಲುಗಳ ಓಡಾಟಕ್ಕೆ ಯಾವುದೇ ನಿಷೇಧ ಇರುವುದಿಲ್ಲ.
- ರೈಲ್ವೆ ನಿಲ್ದಾಣ, ವಿಮಾನ ನಿಲ್ದಾಣ, ಬಸ್ ನಿಲ್ದಾಣದಿಂದ ಓಡಾಡುವವರ ಓಡಾಟಕ್ಕೆ ಅನುಕೂಲದ ದೃಷ್ಟಿಯಿಂದ ಪಿಕ್ ಅಪ್ ವೆಹಿಕಲ್, ಟ್ಯಾಕ್ಸಿಗಳ ನಿರ್ಬಂಧ ಇರುವುದಿಲ್ಲ. ಆದರೆ, ಅಂತಹ ಪ್ರಯಾಣಿಕರು ಕಡ್ಡಾಯವಾಗಿ ಟಿಕೆಟ್ ಹೊಂದಿರಬೇಕು
- ಕ್ರಿಸ್ಮಸ್ ಮತ್ತು ಹೊಸ ವರ್ಷ ಕೋವಿಡ್ ಮಾರ್ಗಸೂಚಿ ಅನ್ವಯ ಆಚರಣೆ ಮಾಡಬೇಕು.
ಹೊಸ ವರ್ಷ, ಕ್ರಿಸ್ಮಸ್ ಆಚರಣೆಗಿರುವ ನಿಯಮಗಳೇನು | ಹೊಸ ವರ್ಷಕ್ಕೆ ಪಬ್, ಕ್ಲಬ್ಗಿಲ್ಲ ನಿರ್ಬಂಧ, ಡಿಜೆ, ಡ್ಯಾನ್ಸ್ ಗೆ ಪ್ರತಿಬಂಧ, ಏನಿರುತ್ತೆ ಏನಿರಲ್ಲ?, ಕ್ರಿಸ್ಮಸ್ಗೆ ಕೋವಿಡ್ ವಿಘ್ನ, ಆಚರಣೆ ಮಾರ್ಗಸೂಚಿ ಬಿಡುಗಡೆ ಮಾಡಿದ ಸರ್ಕಾರ