ಸುದ್ದಿ ಕಣಜ.ಕಾಂ ಶಿವಮೊಗ್ಗ: ಗುರುಪುರದಲ್ಲಿ ಇದ್ದಕ್ಕಿದ್ದಂತೆ ಮನೆಯ ಸಮೀಪ ನಿಲ್ಲಿಸಿದ್ದ ಬಸ್ ಧಗ ಧಗನೆ ಉರಿದು ಸುಟ್ಟು ಕರಕಲಾದ ಘಟನೆ ಸಂಭವಿಸಿದೆ. ಆದರೆ, ಬಸ್ಗೆ ಬೆಂಕಿ ತಗಲಲು ಕಾರಣವೇನೆಂದು ತಿಳಿದುಬಂದಿಲ್ಲ.
ರವಿಕುಮಾರ್ ಎಂಬಾತ ಮನೆಯ ಸಮೀಪ ತನಗೆ ಸೇರಿದ್ದ ಬಸ್ ನಿಲ್ಲಿಸಿದ್ದ. ಒಳಗಡೆ ಡೀಸೆಲ್ ಮತ್ತು ಬ್ಯಾಟರಿ ಇಲ್ಲದಿದ್ದರೂ ಅನುಮಾನಾಸ್ಪದವಾಗಿ ಬಸ್ ಹೊತ್ತಿ ಉರಿದಿದೆ. ಕೆಲವೇ ಹೊತ್ತಲ್ಲಿ ಶಿವಮೊಗ್ಗದಿಂದ ಚಿತ್ರದುರ್ಗಕ್ಕೆ ಸಂಚರಿಸುತ್ತಿದ್ದ ಬಸ್ ಅನ್ನು ಕೊರೊನಾದಿಂದಾಗಿ ಕೆಲವು ದಿನಗಳಿಂದ ಓಡಿಸುತ್ತಿರಲಿಲ್ಲ. ವಾಹನದ ಚಾವಣಿ, ಕಿಟಕಿ, ಗಾಜು ಸುಟ್ಟು ಕರಕಲಾಗಿದೆ. ಸ್ಥಳಕ್ಕೆ ದೌಡಾಯಿಸಿದ ಅಗ್ನಿಶಾಮಕ ದಳ: ಮಾಹಿತಿ ಲಭ್ಯವಾಗುತ್ತಿದ್ದಂತೆಯೇ ಅಗ್ನಿಶಾಮಕ ದಳದ ಸಿಬ್ಬಂದಿ ಘಟನಾ ಸ್ಥಳಕ್ಕೆ ದೌಡಾಯಿಸಿದ್ದಾರೆ. ಬಳಿಕ ಬೆಂಕಿ ನೊಂದಿಸಿದ್ದಾರೆ. ಇದರಿಂದಾಗಿ, ಬಸ್ನ ಟೈಯರ್ಗಳಿಗೆ ಹಾನಿಯಾಗಿಲ್ಲ.
ಸುದ್ದಿ ಕಣಜ.ಕಾಂ | KARNATKA | VEHICLE REGISTRATION ಶಿವಮೊಗ್ಗ: ಹೊಸದಾಗಿ ವಾಹನ ಖರೀದಿಸುವುದಕ್ಕಿಂತ ಅದರ ನೋಂದಣಿಯೇ ಮಾಲೀಕರಿಗೆ ದೊಡ್ಡ ಸವಾಲಾಗಿತ್ತು. ಹಲವು ಸಲ ಆರ್.ಟಿ.ಒ ಕಚೇರಿಗೆ ಎಡತಾಕಿದರೂ ಪ್ರಯೋಜನವಾಗುತಿರಲಿಲ್ಲ. ಆದರೆ, ಇನ್ಮುಂದೆ […]
ಸುದ್ದಿ ಕಣಜ.ಕಾಂ | CITY | CRIME NEWS ಶಿವಮೊಗ್ಗ: ವೈಯಕ್ತಿಕ ವೈಷಮ್ಯ ಹಿನ್ನೆಲೆಯಲ್ಲಿ ಯುವಕನೊಬ್ಬನನ್ನು ಬಾಪೂಜಿನಗರ ಗಂಗಾಮತ ಹಾಸ್ಟೆಲ್ ಹತ್ತಿರ ಗುರುವಾರ ರಾತ್ರಿ ಬರ್ಬರವಾಗಿ ಹತ್ಯೆ ಮಾಡಲಾಗಿದೆ. ಗಾಡಿಕೊಪ್ಪದ ಸ್ವಾಮಿವಿವೇಕಾನಂದ ಬಡಾವಣೆ […]
ಸುದ್ದಿ ಕಣಜ.ಕಾಂ | DISTRICT | RAIN FALL ಶಿವಮೊಗ್ಗ: ಜಿಲ್ಲೆಯಾದ್ಯಂತ ಭಾರೀ ಗುಡುಗು ಸಹಿತ ಮಳೆಯಾಗುತ್ತಿದೆ. ಭಾನುವಾರ ಬೆಳಗ್ಗೆಯಿಂದಲೇ ಮೋಡ ಮುಸುಕಿದ ವಾತಾವರಣವಿದ್ದು, ಸಂಜೆ ನಂತರ ಧಾರಾಕಾರ ಮಳೆ ಸುರಿಯುತ್ತಿದೆ. READ […]