ಹೊಸ ವರ್ಷದಂದು ಶಾಲೆಗೆ ಬರುವ ಮುನ್ನ ಹೆತ್ತವರಿಂದ ಲಿಖಿತ ಪತ್ರ ತರಬೇಕು, ಇನ್ನೇನೂ ರೂಲ್ಸ್ ಇವೆ ಗೊತ್ತಾ?

 

 

ಸುದ್ದಿ ಕಣಜ.ಕಾಂ
ಶಿವಮೊಗ್ಗ/ಬೆಂಗಳೂರು: ಹೊಸ ವರ್ಷಕ್ಕೆ ಶೈಕ್ಷಣಿಕ ಚಟುವಟಿಕೆಗಳನ್ನು ಆರಂಭಿಸುವಂತೆ ಸರ್ಕಾರ ಸೂಚನೆ ನೀಡಿದೆ. ಆದರೆ, ಇದರೊಂದಿಗೆ ಹಲವು ನಿಯಮಗಳನ್ನು ರೂಪಿಸಿದೆ.

Click here | ಹೊಸ ವರ್ಷಾಚರಣೆಗೆ ಸರ್ಕಾರದ ರೂಲ್ಸ್

ಶಾಲೆಗೆ ಬರುವ ಮಕ್ಕಳಿಗೆ ವಿಧಿಸಲಾದ ನಿಯಮಗಳಿವು

  •  ಶಾಲೆಗೆ ಬರುವ ಪ್ರತಿ ವಿದ್ಯಾರ್ಥಿಗಳು ತಮ್ಮ ಪೋಷಕರಿಂದ ಲಿಖಿತವಾಗಿ ಒಪ್ಪಿಗೆ ಪತ್ರವನ್ನು ತರಬೇಕು.
  • ತರಗತಿ ನಡೆಯುವ ಅವಧಿಯಲ್ಲಿ ಕುಡಿಯುವ ನೀರು, ಲಘು ಆಹಾರವನ್ನು ಮಕ್ಕಳು ತಮ್ಮೊಂದಿಗೆ ತರಬೇಕು.

ಶಾಲಾ ಆಡಳಿತ ಮಂಡಳಿಗೆ ಸೂಚನೆ

  • ಮಕ್ಕಳಿಗೆ ಅಗತ್ಯವೆನಿಸಿದಲ್ಲಿ ಶಾಲೆಯಲ್ಲಿ ಕುಡಿಯಲು ಬಿಸಿನೀರನ್ನು ಕಾಯಿಸಿ ಕೊಡಲು ಶಾಲಾ ಆಡಳಿತ ಮಂಡಳಿ ಕ್ರಮವಹಿಸಬೇಕು
  • ಎಲ್ಲ ತಾಲ್ಲೂಕಿನ ಕ್ಷೇತ್ರ ಶಿಕ್ಷಣಾಧಿಕಾರಿಗಳು ತಮ್ಮ ಕಾರ್ಯಕ್ಷೇತ್ರದ ವ್ಯಾಪ್ತಿಯ ಶಾಲೆಗಳ ಭೌತಿಕ ಸ್ಥಿತಿ-ಗತಿಗಳ ಬಗ್ಗೆ ವಿಶೇಷ ಗಮನಹರಿಸಬೇಕು
  • ಕುಡಿಯುವ ನೀರು, ಶೌಚಾಲಯ, ಶಾಲಾ ಸ್ವಚ್ಛತೆ ಬಗ್ಗೆ ಅಗತ್ಯ ಕ್ರಮ ಕೈಗೊಳ್ಳಬೇಕು.
  • ಶಾಲಾ ಆರಂಭಕ್ಕೂ ಮುನ್ನ ಸ್ಥಳೀಯ ಸಂಸ್ಥೆಗಳ ಸಹಕಾರದೊಂದಿಗೆ ಶಾಲಾ ಕಟ್ಟಡ, ವಾಹನಗಳನ್ನು ಸ್ಯಾನಿಟೈಸ್ ಮಾಡಬೇಕು
  • ಪ್ರತಿದಿನ ಬೆಳಗಿನ 3 ಅವಧಿಯಲ್ಲಿ ಎಸ್‍ಎಸ್‍ಎಲ್‍ಸಿ ತರಗತಿಗಳು ನಿರಂತರವಾಗಿ ನಡೆಸಬೇಕು.
  • 6 ಮತ್ತು 7ನೇ ತರಗತಿಯ ಮಕ್ಕಳು ಬೆಳಗಿನ ಹಾಗೂ 8 ಮತ್ತು 9ನೇ ತರಗತಿಯ ಮಕ್ಕಳು ಮಧ್ಯಾಹ್ನದ ಅವಧಿಯಲ್ಲಿ ದಿನ ಬಿಟ್ಟು ದಿನ ನಡೆಯುವ ಶಾಲೆಗೆ ಬರಲು ಸೂಚಿಸಬೇಕು
  • ಜಿಲ್ಲಾ ಉಸ್ತುವಾರಿ ಸಚಿವರು ನೀಡಿದ ನಿರ್ದೇಶನದಂತೆ ಯೋಗ ತರಗತಿಗಳನ್ನು ನಡೆಸಬೇಕು.
  • ಆನ್‍ಲೈನ್ ತರಗತಿಗಳನ್ನು ನಡೆಸಲು ಯಾವುದೇ ಆಕ್ಷೇಪಣೆ ಇರುವುದಿಲ್ಲ
  • ಪ್ರತಿಯೊಬ್ಬ ಶಿಕ್ಷಕರೂ ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು

ML Vaishali ZP CEOಸರ್ಕಾರದ ಮಾರ್ಗಸೂಚಿಯಂತೆ ಜನವರಿ 1ರಿಂದ ಹಿರಿಯ ಪ್ರಾಥಮಿಕ ಮತ್ತು ಪ್ರೌಢ ಶಾಲೆ ತರಗತಿಗಳು ಆರಂಭಗೊಳ್ಳುತ್ತಿವೆ. ಅಗತ್ಯ ಸಿದ್ಧತೆಗಳನ್ನು ಕೈಗೊಳ್ಳಬೇಕು. ಕ್ಷೇತ್ರ ಶಿಕ್ಷಣಾಧಿಕಾರಿ, ಶಾಲೆಗಳ ಮುಖ್ಯೋಪಾಧ್ಯಾಯರು ಆರೋಗ್ಯ ಇಲಾಖೆಯ ಅಧಿಕಾರಿಗಳೊಂದಿಗೆ ನಿರಂತರ ಸಂಪರ್ಕ ಹೊಂದಿರಬೇಕು.
– ಎಂ.ಎಲ್.ವೈಶಾಲಿ, ಸಿಇಒ, ಜಿಲ್ಲಾ ಪಂಚಾಯಿತಿ ಶಿವಮೊಗ್ಗ

error: Content is protected !!