ಸುದ್ದಿ ಕಣಜ.ಕಾಂ
ಶಿವಮೊಗ್ಗ: ಕಳೆದ ಒಂದು ತಿಂಗಳಿಂದ ನೆಮ್ಮದಿಯಿಂದ ಜನ ಜೀವನ ಸಾಗುತಿತ್ತು. ಆದರೆ, ಮತ್ತೆ ಕೊರೊನಾ ಪ್ರಕರಣಗಳು ಪತ್ತೆಯಾಗುತ್ತಿದ್ದು, ಆತಂಕ ಶುರುವಾಗಿದೆ.
ಇದನ್ನೂ ಓದಿ | ಕೂಪನ್ ಹಾಕಿ, ‘ಯುವರತ್ನ’ ಚಿತ್ರ ಉಚಿತವಾಗಿ ನೋಡಿ!
ಗುರುವಾರ 10 ಜನರಲ್ಲಿ ಸೋಂಕು ದೃಢಪಟ್ಟಿದ್ದು, ಜಿಲ್ಲೆಯಲ್ಲಿ 109 ಸಕ್ರಿಯ ಪ್ರಕರಣಗಳಿವೆ.
ತಾಲೂಕುವಾರ ವರದಿ | ಶಿವಮೊಗ್ಗದಲ್ಲಿ 4, ಭದ್ರಾವತಿ 0, ಶಿಕಾರಿಪುರ, ತೀರ್ಥಹಳ್ಳಿ, ಸೊರಬ ತಲಾ 1, ಹೊಸನಗರ 0, ಸಾಗರ 3 ಜನರಲ್ಲಿ ಸೋಂಕು ಕಾಣಿಸಿಕೊಂಡಿದೆ.
ಕಾಲೇಜಿನಲ್ಲಿ ಸೋಂಕಿನ ಭರಾಟೆ | 153 ಕಾಲೇಜು ವಿದ್ಯಾರ್ಥಿಗಳಲ್ಲಿ ಹಾಗೂ 27 ಸಿಬ್ಬಂದಿಯಲ್ಲಿ ಕೊರೊನಾ ವೈರಸ್ ಪತ್ತೆಯಾಗಿದೆ.