ಸುದ್ದಿ ಕಣಜ.ಕಾಂ
ಶಿವಮೊಗ್ಗ: ಜಿಲ್ಲೆಯಾದ್ಯಂತ ಮಾಸ್ಕ್ ಧರಿಸದವರ ವಿರುದ್ಧ ದಂಡ ವಿಧಿಸುವ ಪ್ರಕ್ರಿಯೆ ಚಾಲ್ತಿಯಲ್ಲಿದೆ. ಪೊಲೀಸ್ ಇಲಾಖೆಯಿಂದ ಮಾರ್ಚ್ ತಿಂಗಳಲ್ಲಿ ಒಟ್ಟು 1694 ಪ್ರಕರಣಗಳನ್ನು ದಾಖಲಿಸಿ 2,23,350 ರೂಪಾಯಿ ದಂಡ ವಿಧಿಸಲಾಗಿದೆ.
ಇದನ್ನೂ ಓದಿ |
ಬಿಪಿಎಲ್ ಕಾರ್ಡ್ ಪಡೆಯಲು ಯಾರು ಅರ್ಹರು?, ಅನರ್ಹರು ಕಾರ್ಡ್ ಹಿಂದಿರುಗಿಸಲು ಡಿಸಿ ಖಡಕ್ ವಾರ್ನಿಂಗ್
ಪೊಲೀಸ್ ಇಲಾಖೆಯಿಂದ ಮಾರ್ಚ್ 1ರಿಂದ 30ರ ವರೆಗೆ ಕಾರ್ಯಾಚರಣೆ ಮಾಡಲಾಗಿದ್ದು, ದಂಡ ವಿಧಿಸಲಾಗಿದೆ ಎಂದು ಪೊಲೀಸ್ ಅಧೀಕ್ಷಕ ಕೆ.ಎಂ.ಶಾಂತರಾಜು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ತಾಲ್ಲೂಕುವಾರು ಮಾಹಿತಿ
ಶಿವಮೊಗ್ಗ ತಾಲ್ಲೂಕು ಒಟ್ಟು 468 ಪ್ರಕರಣಗಳನ್ನು ದಾಖಲಿಸಿ 1,00,750 ರೂಪಾಯಿ ದಂಡ ವಿಧಿಸಲಾಗಿದೆ.
ಭದ್ರಾವತಿ ತಾಲೂಕು ಒಟ್ಟು 827 ಪ್ರಕರಣಗಳನ್ನು ದಾಖಲಿಸಿ 82,700 ರೂ. ದಂಡ.
ಸಾಗರ ತಾಲ್ಲೂಕು 83 ಪ್ರಕರಣಗಳನ್ನು ದಾಖಲಿಸಿ ರೂ 8,300 ರೂಪಾಯಿ ದಂಡ ವಿಧಿಸಲಾಗಿದೆ.
ಶಿಕಾರಿಪುರ ತಾಲ್ಲೂಕು ಒಟ್ಟು 160 ಪ್ರಕರಣಗಳನ್ನು ದಾಖಲಿಸಿ 16,000 ರೂಪಾಯಿ ದಂಡ.
ಸೊರಬ ತಾಲ್ಲೂಕು ಒಟ್ಟು 67 ಪ್ರಕರಣಗಳನ್ನು ದಾಖಲಿಸಿ 6,700 ರೂಪಾಯಿ ದಂಡ.
ತೀರ್ಥಹಳ್ಳಿ ತಾಲ್ಲೂಕು ಒಟ್ಟು 44 ಪ್ರಕರಣಗಳನ್ನು ದಾಖಲಿಸಿ 4,400 ರೂಪಾಯಿ ದಂಡ
ಹೊಸನಗರ ತಾಲ್ಲೂಕು ಒಟ್ಟು 45 ಪ್ರಕರಣಗಳನ್ನು ದಾಖಲಿಸಿ 4,500 ರೂಪಾಯಿ ದಂಡ ವಿಧಿಸಲಾಗಿದೆ.
https://www.suddikanaja.com/2021/02/08/penalty-on-food-feeding-to-animals-in-agumbe-ghat/