ಸುದ್ದಿ ಕಣಜ.ಕಾಂ
ಹೊಸನಗರ: ಹೊಸನಗರ ಪೊಲೀಸ್ ಠಾಣೆ ವ್ಯಾಪ್ತಿಯ ಕಳೂರು ನಂದ್ಯಾಲಕೊಪ್ಪ ಗ್ರಾಮದ ಮನೆಯ ಮುಂದೆಯೇ ಕಾರಿನಲ್ಲಿ ಗಾಂಜಾ ಮಾರಾಟ ಮಾಡುತ್ತಿರುವ ಬಗ್ಗೆ ಖಚಿತ ಮಾಹಿತಿ ಪಡೆದ ಪೊಲೀಸರು ಆರೋಪಿಯನ್ನು ಗುರುವಾರ ಬಂಧಿಸಿದ್ದಾರೆ.
READ | ಮಾರಕಾಸ್ತ್ರಗಳಿಂದ ಹಲ್ಲೆ ಮಾಡಿ ಮಹಿಳೆ ಕೊಲೆ
ಕಳೂರು ನಂದ್ಯಾಲಕೊಪ್ಪ ಗ್ರಾಮದ ವಾಸಿ ಸುನೀಲ್ (45) ಬಂಧಿತ ಆರೋಪಿ. ಖಚಿತ ಮಾಹಿತಿ ಮೇರೆಗೆ ಹೊಸನಗರ ಠಾಣೆ ಪಿ.ಎಸ್.ಐ ಅವರು ಹೊಸನಗರ ತಾಲ್ಲೂಕು ದಂಡಾಧಿಕಾರಿ ಹಾಗೂ ಸಿಬ್ಬಂದಿಯನ್ನೊಳಗೊಂಡ ತಂಡವು ಸ್ಥಳಕ್ಕೆ ದಾಳಿ ನಡೆಸಿದ್ದಾರೆ.
ಬಂದೂಕು, ನಗದು, ಗಾಂಜಾ ಜಪ್ತಿ | 5 ಲಕ್ಷ ರೂ ಮೌಲ್ಯದ 16 ಕೆ.ಜಿ 420 ಗ್ರಾಂ ತೂಕದ ಗಾಂಜಾ, 4 ಬಂದೂಕು ಹಾಗೂ ಜೀವಂತ ಮದ್ದು ಗುಂಡುಗಳು, 3,500 ನಗದು, 2 ಮೊಬೈಲ್ ಗಳು ಮತ್ತು ಒಂದು ಕಾರನ್ನು ಸ್ವಾಧೀನ ಪಡಿಸಿಕೊಂಡು, ಆರೋಪಿತನ ವಿರುದ್ಧ ಹೊಸನಗರ ಪೊಲೀಸ್ ಠಾಣೆಯಲ್ಲಿ ಕಲಂ 8(ಸಿ), 20(ಬಿ) (2) (ಬಿ) ಎನ್.ಡಿ.ಪಿ.ಎಸ್. ಹಾಗೂ ಕಲಂ 3, 25 ಇಂಡಿಯನ್ ಆರ್ಮ್ಸ್ ಆಕ್ಟ್ ಅಡಿ ಪ್ರಕರಣ ದಾಖಲಿಸಿ, ಆರೋಪಿತನನ್ನು ದಸ್ತಗಿರಿ ಮಾಡಿ ತನಿಖೆ ಕೈಗೊಂಡಿದೆ.