ಸುದ್ದಿ ಕಣಜ.ಕಾಂ
ಶಿವಮೊಗ್ಗ: ಕೊರೊನಾ ರಣಕೇಕೆ ಮುಂದುವರಿದಿದೆ. ಭಾನುವಾರ ಮತ್ತೊಬ್ಬರನ್ನು ಬಲಿ ಪಡೆದಿದೆ. ಇದುವರೆಗೆ ಜಿಲ್ಲೆಯಲ್ಲಿ ಸೋಂಕಿನಿಂದ 362 ಜನ ಮೃತಪಟ್ಟಿದ್ದಾರೆ.
384 ಜನರಲ್ಲಿ ಸೋಂಕಿರುವುದು ದೃಢಪಟ್ಟಿದೆ. ಜೊತೆಗೆ 128 ಜನ ಆಸ್ಪತ್ರೆಯಿಂದ ಬಿಡುಗಡೆಗೊಂಡಿದ್ದಾರೆ.
ಸಕ್ರಿಯ ಪ್ರಕರಣ ಏರಿಕೆ | ಪ್ರಸ್ತುತ 1,726 ಸಕ್ರಿಯ ಪ್ರಕರಣಗಳು ಇವೆ. ಅದರಲ್ಲಿ 316 ಜನ ಕೋವಿಡ್ ವಾರ್ಡ್ನಲ್ಲಿ ಮತ್ತು ಖಾಸಗಿ ಆಸ್ಪತ್ರೆಯಲ್ಲಿ185 ಜನ ಚಿಕಿತ್ಸೆ ಪಡೆಯುತ್ತಿದ್ದಾರೆ. ಹೋಮ್ ಐಸೋಲೇಷನ್ ನಲ್ಲಿ 1188 ಹಾಗೂ ಟ್ರಿಯೇಜ್ ನಲ್ಲಿ 37 ಮಂದಿ ಇದ್ದಾರೆ. ಇಂದು 16 ವಿದ್ಯಾರ್ಥಿಗಳು ಮತ್ತು 7 ಸಿಬ್ಬಂದಿಗೆ ಸೋಂಕು ತಗಲಿದೆ.
ತಾಲೂಕುವಾರು ಮಾಹಿತಿ | ಶಿವಮೊಗ್ಗ 145, ಭದ್ರಾವತಿ 69, ಶಿಕಾರಿಪುರ 24, ತೀರ್ಥಹಳ್ಳಿ 33, ಸೊರಬ 25, ಸಾಗರ 55, ಹೊಸನಗರ 24, ಹೊರ ಜಿಲ್ಲೆಯ 9 ಪ್ರಕರಣಗಳು ದೃಢಪಟ್ಟಿವೆ.