ಸುದ್ದಿ ಕಣಜ.ಕಾಂ
ಶಿವಮೊಗ್ಗ: ಕೋವಿಡ್ ನಂತರದ ಬೆಳವಣಿಗೆಯಲ್ಲಿ ರೈಲಿಗೆ ಪ್ರಯಾಣಿಕರಿಂದ ಬೇಡಿಕೆ ವ್ಯಕ್ತವಾಗಿದೆ. ಇದನ್ನು ಮನಗಂಡು ರೈಲ್ವೆ ಇಲಾಖೆಯು ಮೈಸೂರು-ತಾಳಗುಪ್ಪ ನಡುವೆ ಹೊಸ ಎಕ್ಸ್ ಪ್ರೆಸ್ ರೈಲನ್ನು ಏಪ್ರಿಲ್ 10ರಿಂದ ಆರಂಭಿಸುತ್ತಿದೆ.
READ | ಖಾಸಗಿ ಬಸ್ ಮಾಲೀಕ, ಪೊಲೀಸರ ನಡುವೆ ಬಿರುಸಿನ ಚಕಮಕಿ, ಕಾರಣವೇನು ಗೊತ್ತಾ?
ವೇಳಾಪಟ್ಟಿ | ಏಪ್ರಿಲ್ 10ರಂದು ಮೈಸೂರಿನಿಂದ ಬೆಳಗ್ಗೆ 10.15ಕ್ಕೆ ಹೊರಡಲಿರುವ ರೈಲು ತಾಳಗುಪ್ಪಕ್ಕೆ ಸಂಜೆ 6 ಗಂಟೆಗೆ ತಲುಪಲಿದೆ. 12.25ಕ್ಕೆ ಹಾಸನ, 1.20ಕ್ಕೆ ಅರಸಿಕೆರೆ, 2.40ಕ್ಕೆ ತರೀಕೆರೆ, 3ಗಂಟೆಗೆ ಭದ್ರಾವತಿ, 3.30ಕ್ಕೆ ಶಿವಮೊಗ್ಗ ನಗರಕ್ಕೆ ತಲುಪಲಿದೆ. ಇಲ್ಲಿಂದ 3.35ಕ್ಕೆ ತೆರಳಲಿರುವ ರೈಲು ಸಂಜೆ 6 ಗಂಟೆಗೆ ತಾಳಗುಪ್ಪಕ್ಕೆ ತಲುಪಿ ಅಲ್ಲಿಯೇ ತಂಗಲಿದೆ.
ಮಾರನೇ ದಿನ ಬೆಳಗ್ಗೆ 8.45ಕ್ಕೆ ತಾಳಗುಪ್ಪದಿಂದ ಹೊರಡಲಿರುವ ರೈಲು ಸಂಜೆ 4.50ಕ್ಕೆ ಮೈಸೂರು ತಲುಪಲಿದೆ. ಬೆಳಗ್ಗೆ 10.55ಕ್ಕೆ ಶಿವಮೊಗ್ಗ ನಗರಕ್ಕೆ ತಲುಪಿ, 11.10ಕ್ಕೆ ತೆರಳಲಿದೆ.
ಕೌಂಟರ್ ಟಿಕೆಟ್ ಲಭ್ಯ | ಕೋವಿಡ್ ಕಾರಣದಿಂದಾಗಿ ಟಿಕೆಟ್ ಗಳನ್ನು ಆನ್ ಲೈನಿನಲ್ಲೇ ಕಾಯ್ದಿರಿಸುವಂತೆ ಸೂಚನೆ ನೀಡಲಾಗಿತ್ತು. ಆದರೆ, ಇದೊಂದು ರೈಲಿಗೆ ಕೌಂಟರ್ ಟಿಕೆಟ್ ಲಭ್ಯವಿರಲಿದೆ. ವಿಶೇಷ ಎಕ್ಸ್ ಪ್ರೆಸ್ ರೈಲು ಇದಾಗಿರುವುದರಿಂದ ರೈಲಿನಲ್ಲಿ ಪ್ರಯಾಣಿಸುವವರಿಗೆ ಯಾವುದೇ ರಿಯಾಯಿತಿ ಲಭ್ಯ ಇರುವುದಿಲ್ಲ. ಪ್ರಯಾಣಿಕರು ಇದರ ಸೌಲಭ್ಯ ಪಡೆದುಕೊಳ್ಳಬೇಕು ಎಂದು ರೈಲ್ವೆ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.
https://www.suddikanaja.com/2021/02/10/railway-parcel-service-from-talaguppa-railway-station/