ಸುದ್ದಿ ಕಣಜ.ಕಾಂ
ಶಿವಮೊಗ್ಗ: ನಾಗರಿಕ ಪೊಲೀಸ್ ಕಾನ್ ಸ್ಟೇಬಲ್ ಹುದ್ದೆಗಳ ಸಂಬಂಧಿಸಿದಂತೆ ತಾತ್ಕಾಲಿಕ ಆಯ್ಕೆ ಪಟ್ಟಿಯನ್ನು ಪ್ರಕಟಿಸಲಾಗಿದೆ.
READ | ನಾಳೆಯಿಂದ 4 ದಿನದ ಲಾಕ್ ಡೌನ್ ಹೇಗಿರಲಿದೆ? ಹಬ್ಬಗಳಿಗೇನು ನಿಯಮ?
80 ಸಿಪಿಸಿ, 20 ಮಹಿಳಾ ಪಿಸಿ ಹಾಗೂ 50 ಎಪಿಸಿ (ಪುರುಷ) ಹುದ್ದೆಗಳ ನಾಲ್ಕನೇ ತಾತ್ಕಾಲಿಕ ಆಯ್ಕೆ ಪಟ್ಟಿಯನ್ನು ಮೇ 11ರಂದು ಶಿವಮೊಗ್ಗ ಜಿಲ್ಲಾ ಪೊಲೀಸ್ ಕಚೇರಿಯ ಸೂಚನಾ ಫಲಕದಲ್ಲಿ ಪ್ರಕಟಿಸಲಾಗಿದೆ.
ಪಟ್ಟಿ ಪ್ರಕಟ: ನಾಗರಿಕ ಪೊಲೀಸ್ ಕಾನ್ ಸ್ಟೇಬಲ್ ಹುದ್ದೆಗಳ ನೇಮಕಾತಿ ಸಂಬಂಧಿಸಿದಂತೆ ಜಿಲ್ಲೆಗೆ ಅಧಿಸೂಚಿಸಲಾಗಿದ್ದ 38 ಸಿಪಿಸಿ ಮತ್ತು 12 ಮಪಿಸಿ ಹುದ್ದೆಗಳ ಹಾಗೂ 50 ಸಶಸ್ತ್ರ ಪೊಲೀಸ್ ಪುರುಷ ಕಾನ್ ಸ್ಟೇಬಲ್ ಹುದ್ದೆಗಳ ಮೂರನೇ ತಾತ್ಕಾಲಿಕ ಪಟ್ಟಿಯನ್ನು ಸಹ ಪ್ರಕಟಿಸಲಾಗಿದೆ ಎಂದು ಪೊಲೀಸ್ ವರಿಷ್ಠಾಧಿಕಾರಿ ಬಿ.ಎಂ.ಲಕ್ಷ್ಮೀಪ್ರಸಾದ್ ತಿಳಿಸಿದ್ದಾರೆ.