ಸುದ್ದಿ ಕಣಜ.ಕಾಂ
ಶಿವಮೊಗ್ಗ: ಕೊರೊನಾ ಆರ್ಭಟ ಮತ್ತೆ ಮುಂದುವರಿದಿದೆ. ಶನಿವಾರ 803 ಜನರಲ್ಲಿ ಕೊರೊನಾ ಪಾಸಿಟಿವ್ ಬಂದಿದ್ದು, ಅದರಲ್ಲಿ 30 ವಿದ್ಯಾರ್ಥಿಗಳು, 7 ಕಾಲೇಜು ಸಿಬ್ಬಂದಿ ಇದ್ದಾರೆ. 762 ಜನ ಗುಣಮುಖರಾಗಿದ್ದಾರೆ.
READ | ರಾಜ್ಯದ 11 ತಜ್ಞರೊಂದಿಗೆ ಸಿಎಂ ಬಿ.ಎಸ್.ಯಡಿಯೂರಪ್ಪ ಮೀಟಿಂಗ್, ಏನಾಯ್ತು ಚರ್ಚೆ, ಹೇಳಿದ್ದೇನು?
15 ಜನರನ್ನು ಕೊರೊನಾ ಬಲಿ ಪಡೆದಿದೆ. ಕಳೆದ ಎರಡು ದಿನಗಳಿಂದ ಸಾವಿನ ಸಂಖ್ಯೆ ಸ್ವಲ್ಪ ಇಳಿಕೆಯಾಗಿತ್ತು. ಆದರೆ, ಶನಿವಾರ ಮರು ಏರಿಕೆಯಾಗಿದೆ.
ಸಕ್ರಿಯ ಪ್ರಕರಣಗಳ ಸಂಖ್ಯೆ 7,318ಕ್ಕೆ ಏರಿಕೆ ಆಗಿದೆ. ಸೋಂಕಿತರು ಮೆಗ್ಗಾನ್ ನಲ್ಲಿ 610, ಡಿಸಿಎಚ್ಸಿನಲ್ಲಿ 207, ಕೋವಿಡ್ ಕೇರ್ ಸೆಂಟರ್ ನಲ್ಲಿ 363, ಖಾಸಗಿ ಆಸ್ಪತ್ರೆಯಲ್ಲಿ 538, ಹೋಮ್ ಐಸೋಲೇಷನ್ ನಲ್ಲಿ 4,711, ಟ್ರಿಯೇಜ್ ನಲ್ಲಿ 889 ಜನ ಸೋಂಕಿತರಿದ್ದಾರೆ.
ತಾಲೂಕುವಾರು ವರದಿ | ಶಿವಮೊಗ್ಗದಲ್ಲಿ 178, ಭದ್ರಾವತಿ 68, ಶಿಕಾರಿಪುರ 155, ತೀರ್ಥಹಳ್ಳಿ 113, ಸೊರಬ 74, ಸಾಗರ 152, ಹೊಸನಗರ 52, ಬಾಹ್ಯ ಜಿಲ್ಲೆಯ 11 ಜನರಲ್ಲಿ ಸೋಂಕು ಪತ್ತೆಯಾಗಿದೆ.