ಶಿವಮೊಗ್ಗ, ಭದ್ರಾವತಿಯಲ್ಲಿ ಕೊರೊನಾ ಡಬಲ್ ಸೆಂಚ್ಯೂರಿ, 14 ಜನ ಸಾವು

 

 

ಸುದ್ದಿ ಕಣಜ.ಕಾಂ
ಶಿವಮೊಗ್ಗ: ಭದ್ರಾವತಿ ಮತ್ತು ಶಿವಮೊಗ್ಗ ತಾಲೂಕಿನಲ್ಲಿ ಕೊರೊನಾ ಆರ್ಭಟ ಮುಂದುವರಿದಿದೆ. ಕಳೆದ ಎರಡ್ಮೂರು ದಿನಗಳಿಂದ ಸೋಂಕಿತರ ಸಂಖ್ಯೆಯಲ್ಲಿ ಇಳಿಮುಖವಾಗಿತ್ತು. ಆದರೆ, ಭಾನುವಾರ ಮರು ಏರಿಕೆಯಾಗಿದೆ.

READ | ಬ್ಲ್ಯಾಕ್ ಫಂಗಸ್ ಹರಡುವಿಕೆ ತಡೆಗೆ ಶಿವಮೊಗ್ಗ ಸಿದ್ಧ, ಡಿಸಿ ನೀಡಿರುವ ನಿರ್ದೇಶನಗಳೇನು?

ಜಿಲ್ಲೆಯಲ್ಲಿ 765 ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿವೆ. 27 ವಿದ್ಯಾರ್ಥಿಗಳು, 2 ಕಾಲೇಜು ಸಿಬ್ಬಂದಿಗೆ ಸೋಂಕು ತಗುಲಿದೆ. 14 ಜನ ಮೃತಪಟ್ಟಿದ್ದಾರೆ. 903 ಜನ ಗುಣಮುಖರಾಗಿದ್ದಾರೆ.
ಸಕ್ರಿಯ ಪ್ರಕರಣಗಳ ಸಂಖ್ಯೆ 7,180 ಇದೆ. ಸೋಂಕಿತರು ಮೆಗ್ಗಾನ್ ನಲ್ಲಿ 604, ಡಿಸಿಎಚ್‍ಸಿನಲ್ಲಿ 209, ಕೋವಿಡ್ ಕೇರ್ ಸೆಂಟರ್ ನಲ್ಲಿ 467, ಖಾಸಗಿ ಆಸ್ಪತ್ರೆಯಲ್ಲಿ 557, ಹೋಮ್ ಐಸೋಲೇಷನ್ ನಲ್ಲಿ 4,527, ಟ್ರಿಯೇಜ್ ನಲ್ಲಿ 816 ಜನ ಸೋಂಕಿತರಿದ್ದಾರೆ.
ತಾಲೂಕುವಾರು ವರದಿ | ಶಿವಮೊಗ್ಗದಲ್ಲಿ 222, ಭದ್ರಾವತಿ 207, ಶಿಕಾರಿಪುರ 59, ತೀರ್ಥಹಳ್ಳಿ 22, ಸೊರಬ 50, ಸಾಗರ 118, ಹೊಸನಗರ 61, ಬಾಹ್ಯ ಜಿಲ್ಲೆಯ 26 ಜನರಲ್ಲಿ ಸೋಂಕು ಪತ್ತೆಯಾಗಿದೆ.

https://www.suddikanaja.com/2021/02/08/state-level-sports-meet-in-uttara-karnataka-said-cs-shadakshari/

error: Content is protected !!