ಸುದ್ದಿ ಕಣಜ.ಕಾಂ
ಶಿವಮೊಗ್ಗ: ಕೋವಿಡ್ನಿಂದ ಪಾಲಕರು ಮತ್ತು ಪೋಷಕರನ್ನು ಕಳೆದುಕೊಳ್ಳುವ ಮಕ್ಕಳ ಪಾಲನೆ ಮತ್ತು ರಕ್ಷಣೆಯ ಕುರಿತಾದ ಮಾಹಿತಿಯನ್ನು ಮಕ್ಕಳ ಕಲ್ಯಾಣ ಸಮಿತಿಗೆ ನೀಡಬೇಕು ಎಂದಹ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ತಿಳಿಸಿದೆ.
https://www.suddikanaja.com/2020/11/26/regional-office-for-child-rights-protection-in-shivamogga/
ಅಂತಹ ಮಕ್ಕಳ ಮಾಹಿತಿಯನ್ನು ಸಮಿತಿಯ ಗಮನಕ್ಕೆ ಅಥವಾ ಜಿಲ್ಲಾ ಮಕ್ಕಳ ರಕ್ಷಣಾ ಘಟಕ, ಮಕ್ಕಳ ಸಹಾಯವಾಣಿ, ಇಲ್ಲವೇ ಹತ್ತಿರದ ಪೊಲೀಸ್ ಠಾಣೆ, ಸಿಡಿಪಿಒ ಕಚೇರಿಗೆ ಮಾಹಿತಿ ನೀಡಬಹುದಾಗಿದೆ. ಮಕ್ಕಳಲ್ಲಿ ಉಂಟಾಗುವ ಮಾನಸಿಕ ಗೊಂದಲ ನಿವಾರಿಸಿ ಆತ್ಮಸ್ಥೈರ್ಯ ತುಂಬುವ ಸಲುವಾಗಿ ಆಪ್ತ ಸಮಾಲೋಚನೆ ನೀಡಲು ಟೆಲಿ ಕೌನ್ಸಿಲಿಂಗ್ ವ್ಯವಸ್ಥೆ ಮಾಡಲಾಗುವುದು.
ಮಕ್ಕಳು ಸ್ವತಃ ಇಲ್ಲವೇ ಪೋಷಕರು ದೂರವಾಣಿ ಸಂಖ್ಯೆ 14499 ಗೆ ಕರೆ ಮಾಡುವ ಮೂಲಕ ಈ ಸೌಲಭ್ಯ ಪಡೆಯಬಹುದಾಗಿದೆ.
ಸಂಪರ್ಕಿಸಬೇಕಾದ ಸಂಖ್ಯೆ | ಈ ಕುರಿತಂತೆ ಅಧ್ಯಕ್ಷರು ಮಕ್ಕಳ ಕಲ್ಯಾಣ ಸಮಿತಿ 9945171418, ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ 08182-295709, ಸರ್ಕಾರಿ ಬಾಲಕರ ಬಾಲಮಂದಿರ 9663340437, ಬಾಲಕಿಯರ ಬಾಲಮಂದಿರ 94481406339, ಮಕ್ಕಳ ಸಹಾಯವಾಣಿ 1098 ಸಂಪರ್ಕಿಸಬಹುದು.
https://www.suddikanaja.com/2021/05/07/counselling-to-covid-infected-family-children/