ಸುದ್ದಿ ಕಣಜ.ಕಾಂ
ಶಿವಮೊಗ್ಗ: ಕೊರೊನಾ ಹಿನ್ನೆಲೆ ಪ್ರತಿಭೆಗಳಿಗೆ ವೇದಿಕೆಯಿಲ್ಲದೇ ಕಮರುತ್ತಿವೆ. ಇದನ್ನು ಮನಗಂಡು ಸಮನ್ವಯ ಟ್ರಸ್ಟ್ ಆನ್ಲೈನ್ ವೇದಿಕೆ ಸೃಷ್ಟಿಸಿದೆ. ಇದು ದೇಶದಲ್ಲೇ ಮೊಟ್ಟ ಮೊದಲ ಪ್ರಯತ್ನವಾಗಿದೆ.
ಶಿವಮೊಗ್ಗ ಸೇರಿದಂತೆ ದೇಶ ಮತ್ತು ವಿದೇಶದಲ್ಲಿರುವ ಪ್ರತಿಭಾನ್ವಿತರಿಗೆ ಆನ್ಲೈನ್ ವೇದಿಕೆ ಕಲ್ಪಿಸಿದೆ. ಈ ಹಿನ್ನೆಲೆ ಪ್ರತಿಭಾನ್ವೇಷಣೆ 2021 (ಟ್ಯಾಲೆಂಟ್ ಹಂಟ್ ಶೋ) ಆಯೋಜಿಸಲಾಗಿದೆ.
https://www.suddikanaja.com/2021/02/21/shivamogga-will-be-best-sports-center-in-india-said-kiren-rijiju/
ಸೀನಿಯರ್ ಮತ್ತು ಜ್ಯೂನಿಯರ್ ವಿಭಾಗದಲ್ಲಿ ಸ್ಪರ್ಧೆ ನಡೆಯುತ್ತಿದೆ. 16 ವರ್ಷ ಮೇಲ್ಪಟ್ಟವರು ಸೀನಿಯರ್ ವಿಭಾಗ ಹಾಗೂ 16 ವರ್ಷಕ್ಕಿಂತ ಕಡಿಮೆ ಇರುವ ಪ್ರತಿಭಾನ್ವಿತರು ಜ್ಯೂನಿಯರ್ ವಿಭಾಗದಲ್ಲಿ ಸ್ಪರ್ಧೆ ಮಾಡಬಹುದಾಗಿದೆ.
ಯಾವ ಕಲಾ ಪ್ರಕಾರ | ನೃತ್ಯ (ಸೋಲೊ, ಫ್ಯಾಮಿಲಿ), ಹಾಡು (ಸೋಲೊ, ಫ್ಯಾಮಿಲಿ), ಚಿತ್ರಕಲೆ, ನಟನೆ, ವಾದ್ಯ ನುಡಿಸುವಿಕೆ ಸೋಲೊ, ಮಿಮಿಕ್ರಿ- ರಾಜಕೀಯ ಹೊರತುಪಡಿಸಿ, ಯೋಗ ಹಾಗೂ ಮಾರ್ಷಲ್ ಆಟ್ರ್ಸ್ನಲ್ಲಿ ಉತ್ತಮ ಪ್ರತಿಭೆ ಇರುವ ಎಲ್ಲರೂ ಸ್ಪರ್ಧೆಯಲ್ಲಿ ಪಾಲ್ಗೊಳ್ಳಬಹುದಾಗಿದೆ.
ಸ್ಪರ್ಧೆಯಲ್ಲಿ ಪಾಲ್ಗೊಳ್ಳಲು ಹೀಗೆ ಮಾಡಿ | ಪ್ರತಿಯೊಬ್ಬ ಪ್ರತಿಭಾನ್ವಿತರು ನೀವು ಪರಿಣತಿ ಹೊಂದಿರುವ ಪ್ರತಿಭೆಯ ಕುರಿತಾಗಿ ಎರಡು ನಿಮಿಷದ ವಿಡಿಯೋ ಪ್ರದರ್ಶನ ಮಾಡಿ ವಾಟ್ಸಾಪ್ 7022211384 ಸಂಖ್ಯೆಗೆ ಕಳುಹಿಸಬೇಕು.
ಸಮನ್ವಯ ಇಂಡಿಯಾ ಆಫಿಸಿಯಲ್ ಹೆಸರಿನಲ್ಲಿರುವ ಯ್ಯೂಟೂಬ್, ಫೇಸ್ಬುಕ್ ಹಾಗೂ ಇನ್ಸ್ಟಾಗ್ರಾಮ್ ಪೇಜ್ನಲ್ಲಿ ಪ್ರತಿಭಾನ್ವಿತರ ವಿಡಿಯೋ ಹಾಕಲಾಗುತ್ತದೆ. ಅತಿ ಹೆಚ್ಚು ಯುಟ್ಯೂಬ್ ವೀಕ್ಷಣೆ ಪಡೆಯುವ ಅಂಶವು ಶೇ. 50ರಷ್ಟು ಫಲಿತಾಂಶದ ಮೇಲೆ ಅವಲಂಬಿತವಾಗಿರುತ್ತದೆ. ಇನ್ನೂ ಶೇ.50ರಷ್ಟು ಆಯ್ಕೆಯು ತೀರ್ಪುಗಾರರ ಆಯ್ಕೆ ಮೇಲೆ ಅಂತಿಮ ಫಲಿತಾಂಶ ನಿರ್ಧಾರವಾಗುತ್ತದೆ.
https://www.suddikanaja.com/2021/02/03/government-employee-association-sports-meet-in-shivamogga/
ಬಹುಮಾನಗಳೇನು | ಸಮನ್ವಯ ಪ್ರತಿಭಾನ್ವೇಷಣೆ ಆನ್ಲೈನ್ ಶೋ 2021ರಲ್ಲಿ ವಿಜೇತರಿಗೆ ನಗದು ಬಹುಮಾನ ನೀಡಲಾಗುವುದು. ಪ್ರಥಮ ಬಹುಮಾನ 7 ಸಾವಿರ ರೂಪಾಯಿ, ದ್ವಿತೀಯ ಬಹುಮಾನ 5 ಸಾವಿರ ರೂ. ಹಾಗೂ ತೃತೀಯ ಬಹುಮಾನ 3 ಸಾವಿರ ರೂ. ಇರಲಿದೆ. ಮೂವರು ತೀರ್ಪುಗಾರರು ಪ್ರತಿಭಾನ್ವಿತರ ವಿಡಿಯೋ ಮಾಡಿ ಅಂಕ ನೀಡಿ ಆಯ್ಕೆ ಮಾಡುತ್ತಾರೆ.
ಸಮನ್ವಯ ಪ್ರತಿಭಾನ್ವೇಷಣೆ ಆನ್ಲೈನ್ ಶೋ ಸಮನ್ವಯ ಟ್ರಸ್ಟ್ನ ಟ್ರಸ್ಟಿ ಸಮನ್ವಯ ಕಾಶಿ ನೇತೃತ್ವದಲ್ಲಿ ನಡೆಯುತ್ತಿದ್ದು, ರಾಜ್ಯದ ಪ್ರಸಿದ್ಧ ಅಧಿಕಾರಿಗಳು, ನಟರು, ಸಮಾಜದ ಪ್ರಮುಖರು, ಕ್ರೀಡಾಪಟುಗಳು ಕೈಜೋಡಿಸಿದ್ದಾರೆ.
ಸ್ಪರ್ಧೆ ನಡೆಯುವ ದಿನಾಂಕ | ಮೇ 21ರಿಂದ 31ರವರೆಗೂ ಸ್ಪರ್ಧೆ ನಡೆಯಲಿದೆ. ಬೆಳಗ್ಗೆ 10 ರಿಂದ ಸಂಜೆ 5ರ ವರೆಗೂ ಪ್ರತಿ ನಿತ್ಯ ವಿಡಿಯೋ ಕಳುಹಿಸಬಹುದಾಗಿದೆ. ಮೇ 31ರೊಳಗೆ ವಿಡಿಯೋ ಕಳುಹಿಸಲು ಕೊನೆ ದಿನವಾಗಿರುತ್ತದೆ ಎಂದು ಸಮನ್ವಯ ಕಾಶಿ ತಿಳಿಸಿದ್ದಾರೆ.
ಜೂನ್ 10ಕ್ಕೆ Samanvaya India Official ಪೇಜ್ನಲ್ಲಿ ಫಲಿತಾಂಶ ಪ್ರಕಟಿಸಲಾಗುವುದು. ಹೆಚ್ಚಿನ ಮಾಹಿತಿಗೆ ನಿರಂತರವಾಗಿ ಸಮನ್ವಯ ಇಂಡಿಯಾ ಆಫಿಸಿಯಲ್ ಹೆಸರಿನ ಫೇಸ್ಬುಕ್, ಯ್ಯೂಟೂಬ್, ಇನ್ಸ್ಟಾಗ್ರಾಮ್ ಪೇಜ್ ಲೈಕ್ ಮತ್ತು ಸಬ್ಸ್ಕ್ರೈಬ್ ಮಾಡಬಹುದಾಗಿದೆ.
https://www.suddikanaja.com/2021/05/08/big-boss-season-8-suspended-due-to-covid-lockdown-said-by-parameshwar-gundkal/