ಸುದ್ದಿ ಕಣಜ.ಕಾಂ
ಶಿವಮೊಗ್ಗ: ಜಿಲ್ಲೆಯ ಗ್ರಾಮೀಣ ಪ್ರದೇಶಗಳಲ್ಲಿ ಕೊರೊನಾ ಸೋಂಕು ವ್ಯಾಪಕವಾಗಿ ಹರಡುತ್ತಿದ್ದು, ಮುಂಜಾಗ್ರತಾ ಕ್ರಮವಾಗಿ ಆಯಾ ಗ್ರಾಮ ಪಂಚಾಯಿತಿಗಳು ವೀಕೆಂಡ್ ಲಾಕ್ ಡೌನ್ ಗೆ ಮುಂದಾಗುತ್ತಿವೆ.
https://www.suddikanaja.com/2021/01/04/teachers-meeting-in-shivamogga-zilla-panchayat-cs-shadakshari-requseted-to-resolve-all-problems-of-teachers/
ಈ ಮುಂಚೆ ನಗರ ಕೇಂದ್ರಿತವಾಗಿ ಲಾಕ್ ಡೌನ್, ವೀಕೆಂಡ್ ಕರ್ಫ್ಯೂ ಇತ್ಯಾದಿಗಳನ್ನು ಮಾಡಲಾಗಿತ್ತು. ಆದರೆ, ಹಳ್ಳಿಗಳಲ್ಲಿ ಸೋಂಕು ಉಲ್ಬಣ ಆಗುತ್ತಿದ್ದಂತೆಯೇ ವೀಕೆಂಡ್ ನಲ್ಲಿ ಕಟ್ಟುನಿಟ್ಟಿನ ಕ್ರಮಕೈಗೊಳ್ಳಲಾಗುತ್ತಿದೆ.
ನಾನಾ ಗ್ರಾಮೀಣ ಪ್ರದೇಶಗಳಲ್ಲಿ ವಾರಾಂತ್ಯ ಸಂತೆಗಳು ನಡೆಯುವುದರಿಂದ ಸ್ಥಳೀಯ ಆಡಳಿತ ಈ ನಿರ್ಧಾರಕ್ಕೆ ಮುಂದಾಗಿದೆ.
ಸಾಗರ ತಾಲೂಕಿನ ತ್ಯಾಗರ್ತಿ, ಹಿರೇಬಿಲಗುಂಜಿ ಗ್ರಾಮಗಳಲ್ಲಿ ಶುಕ್ರವಾರ ಬೆಳಗ್ಗೆ 6 ಗಂಟೆಯಿಂದ ಜೂನ್ 3 ರ ಬೆಳಗ್ಗೆ 6ರ ವರೆಗೆ ಲಾಕ್ ಡೌನ್ ಜಾರಿಯಲ್ಲಿರಲಿದೆ.
ಕೋವಿಡ್ ಕಾರ್ಯಪಡೆ ಸಭೆಯಲ್ಲಿ ಚರ್ಚಿಸಿ ನಿರ್ಧಾರ ಕೈಗೊಳ್ಳಲಾಗಿದ್ದು, ತ್ಯಾಗರ್ತಿ ಗ್ರಾಮ ಪಂಚಾಯಿತಿ ಪಿಡಿಒ ಮಂಜಾ ನಾಯ್ಕ್ ತೀರ್ಮಾನ ಪ್ರಕಟಿಸಿದ್ದಾರೆ.
READ | ಶಿವಮೊಗ್ಗದ ಈ ಹಳ್ಳಿಯಲ್ಲಿ 28ರಿಂದ ನಿಷೇಧಾಜ್ಞೆ, ಪೂರ್ವ ನಿರ್ಧಾರಿತ ಕಾರ್ಯಕ್ರಮಕ್ಕೂ ಪರ್ಮಿಷನ್ ಕಡ್ಡಾಯ
ರೈತರ ಅನುಕೂಲಕ್ಕಾಗಿ ಲಾಕ್ ಡೌನ್ ನಲ್ಲೂ ಬೆಳಗ್ಗೆ 6ರಿಂದ 10 ಗಂಟೆಯವರೆಗೆ ಕಾಲಾವಕಾಶ ನೀಡಲಾಗಿದೆ. ಅನಗತ್ಯ ಓಡಾಟಕ್ಕೆ ಪೊಲೀಸರು ಬ್ರೇಕ್ ಹಾಕಲಿದ್ದಾರೆ.
ಜಕ್ಕನಹಳ್ಳಿ 5 ದಿನ ಕ್ಲೋಸ್ | ಶಿಕಾರಿಪುರ ತಾಲೂಕು ಜಕ್ಕನಹಳ್ಳಿ ಗ್ರಾಮವನ್ನು ಐದು ದಿನಗಳ ಕಾಲ ಲಾಕ್ ಡೌನ್ ಮಾಡಲಾಗಿದೆ.
ಗುರುವಾರದಿಂದ ಸೋಮವಾರ ಬೆಳಗ್ಗೆ 6 ರ ವರೆಗೆ ಲಾಕ್ ಡೌನ್ ಅನ್ವಯವಾಗಲಿದೆ. ಈ ವೇಳೆ ಅನಗತ್ಯ ಓಡಾಡುವುದು ಕಂಡುಬಂದರೆ ಕಠಿಣ ಕ್ರಮಕೈಗೊಳ್ಳಲಾಗುವುದು ಎಂದು ಪಿಡಿಒ ರತ್ನ ಬೋರಣ್ಣ ತಿಳಿಸಿದ್ದಾರೆ.
ಶಿವಮೊಗ್ಗ ತಾಲೂಕಿನ ಕೋಹಳ್ಳಿಯಲ್ಲೂ ಲಾಕ್ ಡೌನ್ ಗೆ ತೀರ್ಮಾನಿಸಲಾಗಿದೆ.
https://www.suddikanaja.com/2021/05/17/complete-lockdown-continue-in-shivamogga/