ನೆಹರೂ ರಸ್ತೆಯಲ್ಲಿ ಪಾರ್ಕಿಂಗ್ ಜೋನ್, ದ್ವಿಚಕ್ರ, ಕಾರು ವಾಹನಕ್ಕೆ ಪ್ರತ್ಯೇಕ ವ್ಯವಸ್ಥೆ

 

 

ಸುದ್ದಿ ಕಣಜ.ಕಾಂ
ಶಿವಮೊಗ್ಗ: ನಗರದಲ್ಲಿ ಸದಾ ಟ್ರಾಫಿಕ್ ಜಾಮ್ ನಿಂದ ಕೂಡಿರುವ ನೆಹರೂ ರಸ್ತೆಯಲ್ಲಿ ಪಾರ್ಕಿಂಗ್ ಶಿಸ್ತು ತರುವ ಉದ್ದೇಶದಿಂದ ಕಾರು ಮತ್ತು ದ್ವಿಚಕ್ರ ವಾಹನಗಳ ನಿಲುಗಡೆ ಪ್ರತ್ಯೇಕ ಜೊನ್ ಮಾಡಲಾಗುತ್ತಿದೆ.

ಪ್ರಸ್ತುತ ರಸ್ತೆಯ ಒಂದು ಕಡೆ ಪಾರ್ಕಿಂಗ್ ಮಾರ್ಕಿಂಗ್ ಮಾಡಲಾಗಿದ್ದು, ದ್ವಿಚಕ್ರ ವಾಹನ ಮತ್ತು ಕಾರುಗಳಿಗೆ ಪ್ರತ್ಯೇಕ ವ್ಯವಸ್ಥೆ ಕಲ್ಪಿಸಲಾಗಿದೆ.
neharu road parking 2
ದ್ವಿಚಕ್ರ ವಾಹನಗಳ ಪಾರ್ಕಿಂಗ್ ಜೋನ್.

ಈ ಮುಂಚೆ ಬ್ಯಾರಿಕೆಡ್ ಹಾಕಿ ವಾಹನಗಳ ನಿಲುಗಡೆಯನ್ನು ನಿರ್ಧರಿಸಲಾಗುತಿತ್ತು. ಆದರೆ, ವಾಹನ ಸವಾರರು ಎಲ್ಲೆಂದರಲ್ಲಿ ಪಾರ್ಕಿಂಗ್ ಮಾಡಿ ಹೋಗುತ್ತಿದ್ದರಿಂದ ರಸ್ತೆಯ ಅರ್ಧ ಭಾಗ ವಾಹನಗಳೇ ನಿಂತಿರುತ್ತಿದ್ದವು. ಇದರ ಪರಿಣಾಮ ಈ ರಸ್ತೆಯ ಟ್ರಾಫಿಕ್ ಜಾಮ್ ನಿತ್ಯದ ಸಮಸ್ಯೆಯಾಗಿ ಪರಿಣಮಿಸಿದೆ. ಈಗ ಲಾಕ್ ಡೌನ್ ಇರುವುದರಿಂದ ವಾಹನಗಳ ಸಂಚಾರ ವಿರಳವಾಗಿದ್ದು, ಇದನ್ನೇ ಬಳಸಿಕೊಂಡು ರಸ್ತೆಯ ಎರಡೂ ಬದಿಯಲ್ಲಿ ಟೈಲ್ಸ್ ಹಾಕಲಾಗುತ್ತಿದೆ.
ಕಾರುಗಳಿಗೆ ನಿಗದಿಪಡಿಸಿದ ಜಾಗದಲ್ಲಿಯೇ ಅವುಗಳನ್ನು ಪಾರ್ಕಿಂಗ್ ಮಾಡಬೇಕು. ಅನಗತ್ಯವಾಗಿ ಬೇರೆಡೆ ನುಸುಳಿದರೆ ಪೊಲೀಸರು ಅಂತಹ ವಾಹನಗಳನ್ನು ವಶಕ್ಕೆ ಪಡೆಯಲಿದ್ದಾರೆ.

https://www.suddikanaja.com/2021/05/09/no-vehicles-allowed-tomorrow/

error: Content is protected !!