ಸುದ್ದಿ ಕಣಜ.ಕಾಂ
ಶಿವಮೊಗ್ಗ: ಭದ್ರಾವತಿಯಲ್ಲಿ 100 ಕೆಳಗೆ ಇಳಿದಿದ್ದ ಪಾಸಿಟಿವ್ ಸಂಖ್ಯೆ ಶುಕ್ರವಾರ ಮತ್ತೆ ನೂರರ ಗಡಿ ದಾಟಿದೆ.
ಶಿವಮೊಗ್ಗದಲ್ಲಿ ಇಂದು ಸ್ವಲ್ಪ ಮಟ್ಟಿಗೆ ಸೋಂಕಿತರ ಸಂಖ್ಯೆಯ ಇಳಿಕೆಯಾಗಿದ್ದು, 135 ಮಂದಿಗೆ ಪಾಸಿಟಿವ್ ಬಂದಿದೆ.
https://www.suddikanaja.com/2021/06/08/death-case-increase-in-shivamogga-due-to-corona/
ಇನ್ನುಳಿದಂತೆ, ಭದ್ರಾವತಿಯಲ್ಲಿ 114, ತೀರ್ಥಹಳ್ಳಿಯಲ್ಲಿ 46, ಶಿಕಾರಿಪುರದಲ್ಲಿ 49, ಸೊರಬ 31, ಸಾಗರ 79, ಹೊಸನಗರ 18 ಹಾಗೂ ಬಾಹ್ಯ ಜಿಲ್ಲೆಯ 9 ಮಂದಿಗೆ ಕೊರೊನಾ ಪಾಸಿಟಿವ್ ಇರುವುದು ದೃಢಪಟ್ಟಿದೆ. ಅವರನ್ನು ಟ್ರಿಯೇಜ್ ನಲ್ಲಿ ನಿರ್ಧರಿಸಿದಂತೆ ವಿವಿಧೆಡೆ ಚಿಕಿತ್ಸೆಗೋಸ್ಕರ ರೆಫರ್ ಮಾಡಲಾಗಿದೆ.
ತಗ್ಗಿದ ಸೋಂಕು | ಒಟ್ಟಾರೆ ಸೋಂಕಿತರ ಸಂಖ್ಯೆಯಲ್ಲಿ ಇಳಿಕೆಯಾಗಿದೆ. 481 ಜನರಿಗೆ ಕೊರೊನಾ ತಗುಲಿದೆ. ಇದರಲ್ಲಿ 29 ವಿದ್ಯಾರ್ಥಿಗಳು, 6 ಸಿಬ್ಬಂದಿ ಇದ್ದಾರೆ. 500 ಜನ ಗುಣಮುಖರಾಗಿದ್ದಾರೆ. ಸೋಂಕಿತರಲ್ಲಿ ಏಳು ಜನ ಮೃತಪಟ್ಟಿದ್ದಾರೆ.
ಸಕ್ರಿಯ ಪ್ರಕರಣದಲ್ಲಿ ಇಳಿಕೆ | ಮೆಗ್ಗಾನ್ ನಲ್ಲಿ 553, ಡಿಸಿಎಚ್ಸಿನಲ್ಲಿ 296, ಕೋವಿಡ್ ಕೇರ್ ಸೆಂಟರ್ನಲ್ಲಿ 1,664, ಖಾಸಗಿ ಆಸ್ಪತ್ರೆಯಲ್ಲಿ 1,103, ಹೋಮ್ ಐಸೋಲೇಷನ್ನಲ್ಲಿ 1,365 ಹಾಗೂ ಟ್ರಿಯೇಜ್ನಲ್ಲಿ 728 ಸೋಂಕಿತರಿದ್ದು, 5,709 ಸಕ್ರಿಯ ಪ್ರಕರಣಗಳು ಜಿಲ್ಲೆಯಲ್ಲಿವೆ.
https://www.suddikanaja.com/2021/05/15/covid-positive-case-raise-in-shivamogga/