ಸುದ್ದಿ ಕಣಜ.ಕಾಂ
ಶಿವಮೊಗ್ಗ: ಭದ್ರಾವತಿಯಲ್ಲಿ ಮಂಗಳವಾರ ಕೊರೊನಾ ಸೋಂಕಿತರ ಸಂಖ್ಯೆಯಲ್ಲಿ ಭಾರಿ ಇಳಿಕೆಯಾಗಿತ್ತು. ಆದರೆ, ಬುಧವಾರ ಮತ್ತೆ ಏರಿಕೆ ಕಂಡುಬಂದಿದೆ.
https://www.suddikanaja.com/2021/01/22/high-level-committee-for-investigation-hunasuru-blast/
ಇಂದು ಭದ್ರಾವತಿಯಲ್ಲಿ 48 ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿವೆ. ಶಿವಮೊಗ್ಗದಲ್ಲಿ 58, ತೀರ್ಥಹಳ್ಳಿ 7, ಶಿಕಾರಿಪುರ 8, ಸಾಗರ 1, ಹೊಸನಗರ 12, ಸೊರಬ 6, ಬಾಹ್ಯ ಜಿಲ್ಲೆಯ 7 ಜನರಲ್ಲಿ ಸೋಂಕು ಪತ್ತೆಯಾಗಿದೆ.
ಇಂದು 147 ಜನರಲ್ಲಿ ಸೋಂಕು ಪತ್ತೆಯಾಗಿದೆ. ಅದರಲ್ಲಿ ನಾಲ್ವರು ವಿದ್ಯಾರ್ಥಿಗಳಿದ್ದಾರೆ. 286 ಜನ ಗುಣಮುಖರಾಗಿದ್ದು, ನಾಲ್ವರು ಮೃತಪಟ್ಟಿದ್ದಾರೆ. ಸೋಂಕಿತರ ಸಂಪರ್ಕದಲ್ಲಿದ್ದ ಹಾಗೂ ರೋಗದ ಲಕ್ಷಣಗಳನ್ನು ಹೊಂದಿರುವ 3,120 ಜನರ ಗಂಟಲು ದ್ರವದ ಮಾದರಿಯನ್ನು ಸಂಗ್ರಹಿಸಲಾಗಿದೆ. 3,221 ವರದಿಗಳು ನೆಗೆಟಿವ್ ಬಂದಿವೆ.
2 ಸಾವಿರ ಗಡಿ ಇಳಿದ ಸಕ್ರಿಯ ಪ್ರಕರಣ | ಮೆಗ್ಗಾನ್ ಜಿಲ್ಲಾ ಆಸ್ಪತ್ರೆಯಲ್ಲಿ 243, ಡಿಸಿಎಚ್ಸಿಯಲ್ಲಿ 105, ಕೋವಿಡ್ ಕೇರ್ ಸೆಂಟರ್ ನಲ್ಲಿ 535, ಖಾಸಗಿ ಆಸ್ಪತ್ರೆಯಲ್ಲಿ 294, ಹೋಮ್ ಐಸೋಲೇಷನ್ ನಲ್ಲಿ 389, ಟ್ರಿಯೇಜ್ ನಲ್ಲಿ 315 ಜನರಿದ್ದಾರೆ. ಜಿಲ್ಲೆಯಲ್ಲಿ ಪ್ರಸ್ತುತ 1,881 ಸಕ್ರಿಯ ಪ್ರಕರಣಗಳು ಇವೆ.
https://www.suddikanaja.com/2021/06/08/corona-positive-case-increase-in-shivamogga/