ಸುದ್ದಿ ಕಣಜ.ಕಾಂ
ಶಿವಮೊಗ್ಗ: ಕೊರೊನಾ ಸೋಂಕಿತರ ಸಂಖ್ಯೆಯಲ್ಲಿ ಭಾರಿ ಇಳಿಕೆಯಾಗಿದೆ. ಅದರಲ್ಲೂ ಕಳೆದ ಮೂರು ತಿಂಗಳಿಂದ ಬಿಟ್ಟೂ ಬಿಡದೆ ಶಿವಮೊಗ್ಗ ತಾಲೂಕಿಗೆ ಕಾಡುತ್ತಿರುವ ಸೋಂಕು ಸೋಮವಾರ ರಿಲೀಫ್ ನೀಡಿದೆ.
https://www.suddikanaja.com/2021/06/17/corona-positivity-decline/
ತಾಲೂಕುವಾರು ವರದಿ | ಶಿವಮೊಗ್ಗದಲ್ಲಿ ಇಂದು 39 ಜನರಿಗೆ ಕೊರೊನಾ ಪಾಸಿಟಿವ್ ಇರುವುದು ದೃಢಪಟ್ಟಿದೆ. ಭದ್ರಾವತಿಯಲ್ಲಿ 32, ತೀರ್ಥಹಳ್ಳಿ 9, ಶಿಕಾರಿಪುರ 13, ಸಾಗರ 10, ಹೊಸನಗರ 12, ಸೊರಬ 5, ಬಾಹ್ಯ ಜಿಲ್ಲೆಯ 9 ಜನರಿಗೆ ಸೋಂಕು ತಗುಲಿದೆ.
ಸೋಂಕಿತರ ಸಂಪರ್ಕದಲ್ಲಿದ್ದ ಹಾಗೂ ರೋಗದ ಲಕ್ಷಣಗಳನ್ನು ಹೊಂದಿದ್ದ 4,861 ಜನರ ಮಾದರಿಯಗಳನ್ನು ಸಂಗ್ರಹಿಸಲಾಗಿದೆ. 3,618 ವರದಿ ನೆಗೆಟಿವ್ ಇರುವುದು ದೃಢಪಟ್ಟಿದೆ.
ಸಕ್ರಿಯ ಪ್ರಕರಣ ಇಳಿಕೆ | ಮೆಗ್ಗಾನ್ ಆಸ್ಪತ್ರೆಯಲ್ಲಿ 197, ಡಿಸಿಎಚ್ಸಿಯಲ್ಲಿ 94, ಕೋವಿಡ್ ಕೇರ್ ಸೆಂಟರ್ ನಲ್ಲಿ 262, ಖಾಸಗಿ ಆಸ್ಪತ್ರೆಯಲ್ಲಿ 183, ಹೋಮ್ ಐಸೋಲೇಷನ್ ನಲ್ಲಿ 293, ಟ್ರಿಯೇಜ್ ಸೆಂಟರ್ ನಲ್ಲಿ 141 ಸೋಂಕಿತರು ಚಿಕಿತ್ಸೆ ಪಡೆಯುತ್ತಿದ್ದಾರೆ. ಸಕ್ರಿಯ ಪ್ರಕರಣಗಳ ಸಂಖ್ಯೆ 1,170ಕ್ಕೆ ಕುಸಿದಿದೆ.
https://www.suddikanaja.com/2021/05/21/corona-case-increase-in-shivamogga-2/