ಸುದ್ದಿ ಕಣಜ.ಕಾಂ
ಶಿವಮೊಗ್ಗ: ಎರಡನೇ ಅಲೆ ಆರಂಭವಾದಾಗಿನಿಂದ ಇದೇ ಮೊದಲು ಜಿಲ್ಲೆಯಲ್ಲಿ ಅತೀ ಕಡಿಮೆ ಕೊರೊನಾ ಪಾಸಿಟಿವ್ ಪ್ರಕರಣಗಳು ದಾಖಲಾಗಿವೆ.
https://www.suddikanaja.com/2021/06/19/covid-lockdown-relax-in-some-district-in-karnataka/
ಜಿಲ್ಲಾಡಳಿತ ಮಂಗಳವಾರ ಬಿಡುಗಡೆ ಮಾಡಿರುವ ವರದಿ ಪ್ರಕಾರ, ಜಿಲ್ಲೆಯಲ್ಲಿ 95 ಪ್ರಕರಣಗಳು ದೃಢಪಟ್ಟಿವೆ. 229 ಜನ ಗುಣಮುಖರಾಗಿದ್ದಾರೆ. ಮೂವರು ಮೃತಪಟ್ಟಿದ್ದಾರೆ.
ತಾಲೂಕುವಾರು ವರದಿ | ಶಿವಮೊಗ್ಗ 44, ಭದ್ರಾವತಿ 18, ತೀರ್ಥಹಳ್ಳಿ 8, ಶಿಕಾರಿಪುರ 7, ಸಾಗರ 4, ಹೊಸನಗರ 3, ಸೊರಬ 5 ಮತ್ತು ಬಾಹ್ಯ ಜಿಲ್ಲೆಯ 6 ಜನರಲ್ಲಿ ಸೋಂಕು ಪತ್ತೆಯಾಗಿದೆ.
ಸೋಂಕಿತರ ಸಂಪರ್ಕದಲ್ಲಿದ್ದ ಹಾಗೂ ರೋಗದ ಲಕ್ಷಣಗಳನ್ನು ಹೊಂದಿರುವ 5,277 ಜನರ ಮಾದರಿಯಗಳನ್ನು ಸಂಗ್ರಹಿಸಲಾಗಿದೆ. 3,477 ವರದಿ ನೆಗೆಟಿವ್ ಇರುವುದು ದೃಢಪಟ್ಟಿದೆ.
ಸಕ್ರಿಯ ಪ್ರಕರಣ ಇಳಿಕೆ | ಮೆಗ್ಗಾನ್ ಆಸ್ಪತ್ರೆಯಲ್ಲಿ 188, ಡಿಸಿಎಚ್ಸಿಯಲ್ಲಿ 83, ಕೋವಿಡ್ ಕೇರ್ ಸೆಂಟರ್ ನಲ್ಲಿ 225, ಖಾಸಗಿ ಆಸ್ಪತ್ರೆಯಲ್ಲಿ 166, ಹೋಮ್ ಐಸೋಲೇಷನ್ ನಲ್ಲಿ 280, ಟ್ರಿಯೇಜ್ ಸೆಂಟರ್ ನಲ್ಲಿ 94 ಸೋಂಕಿತರು ಚಿಕಿತ್ಸೆ ಪಡೆಯುತ್ತಿದ್ದಾರೆ. ಸಕ್ರಿಯ ಪ್ರಕರಣಗಳ ಸಂಖ್ಯೆ 1,036 ಇವೆ.
https://www.suddikanaja.com/2021/04/16/cm-bs-yeddyurappa-is-hospitalized-for-corona-positive/