ಸುದ್ದಿ ಕಣಜ.ಕಾಂ
ಶಿವಮೊಗ್ಗ: ಬುಧವಾರ ಜಿಲ್ಲಾಡಳಿತ ಬಿಡುಗಡೆ ಮಾಡಿರುವ ವರದಿ ಅನ್ವಯ, ಜಿಲ್ಲೆಯಲ್ಲಿ 147 ಜನರಿಗೆ ಕೊರೊನಾ ಪಾಸಿಟಿವ್ ಇರುವುದು ದೃಢಪಟ್ಟಿದೆ. 141 ಜನ ಚಿಕಿತ್ಸೆ ಪಡೆದು ಆಸ್ಪತ್ರೆಯಿಂದ ಬಿಡುಗಡೆ ಹೊಂದಿದ್ದಾರೆ. ಮೂವರು ಮೃತಪಟ್ಟಿದ್ದಾರೆ.
ಸೋಂಕಿತರ ಸಂಪರ್ಕದಲ್ಲಿದ್ದ ಹಾಗೂ ರೋಗದ ಲಕ್ಷಣಗಳನ್ನು ಹೊಂದಿರುವ 4,566 ಜನರ ಮಾದರಿಯಗಳನ್ನು ಸಂಗ್ರಹಿಸಲಾಗಿದೆ. 4,809 ವರದಿ ನೆಗೆಟಿವ್ ಇರುವುದು ದೃಢಪಟ್ಟಿದೆ.
ತಾಲೂಕುವಾರು ವರದಿ | ಶಿವಮೊಗ್ಗ 46, ಭದ್ರಾವತಿ 45, ತೀರ್ಥಹಳ್ಳಿ 20, ಶಿಕಾರಿಪುರ 4, ಸಾಗರ 11, ಹೊಸನಗರ 8, ಸೊರಬ 8 ಮತ್ತು ಬಾಹ್ಯ ಜಿಲ್ಲೆಯ 8 ಜನರಲ್ಲಿ ಸೋಂಕು ಪತ್ತೆಯಾಗಿದೆ.
ಸಕ್ರಿಯ ಪ್ರಕರಣ ಇಳಿಕೆ | ಮೆಗ್ಗಾನ್ ಆಸ್ಪತ್ರೆಯಲ್ಲಿ 193, ಡಿಸಿಎಚ್ಸಿಯಲ್ಲಿ 98, ಕೋವಿಡ್ ಕೇರ್ ಸೆಂಟರ್ ನಲ್ಲಿ 198, ಖಾಸಗಿ ಆಸ್ಪತ್ರೆಯಲ್ಲಿ 147, ಹೋಮ್ ಐಸೋಲೇಷನ್ ನಲ್ಲಿ 366, ಟ್ರಿಯೇಜ್ ಸೆಂಟರ್ ನಲ್ಲಿ 65 ಸೋಂಕಿತರು ಚಿಕಿತ್ಸೆ ಪಡೆಯುತ್ತಿದ್ದಾರೆ. ಸಕ್ರಿಯ ಪ್ರಕರಣಗಳ ಸಂಖ್ಯೆ 1,042 ಇವೆ.