ಸುದ್ದಿ ಕಣಜ.ಕಾಂ
ಶಿವಮೊಗ್ಗ: ಕಳೆದ 2-3 ದಿನಗಳಿಂದ ಕೊರೊನಾದಿಂದ ಸಾಯುವವರ ಸಂಖ್ಯೆಯಲ್ಲಿ ಕೊಂಚ ಇಳಿಕೆಯಾಗಿತ್ತು. ಆದರೆ, ಸೋಮವಾರ ಮತ್ತೆ ಸಾವಿನಲ್ಲಿ ಏರಿಕೆಯಾಗಿದೆ.
ಜೂನ್ 4, 5 ಮತ್ತು 6ರಂದು ಕ್ರಮವಾಗಿ ಜಿಲ್ಲೆಯಲ್ಲಿ 7, 8, 6 ಜನ ಮೃತಪಟ್ಟಿದ್ದಾರೆ. ಆದರೆ, ಇಂದು 9 ಮಂದಿ ಅಸುನೀಗಿದ್ದಾರೆ.
https://www.suddikanaja.com/2021/05/28/death-case-increased-in-shivamogga/
ತಾಲೂಕು ವರದಿ | ಶಿವಮೊಗ್ಗದಲ್ಲಿ 147, ಭದ್ರಾವತಿ 64, ತೀರ್ಥಹಳ್ಳಿ 63, ಶಿಕಾರಿಪುರ 64, ಸಾಗರ 77, ಹೊಸನಗರ 23, ಸೊರಬ 47, ಬಾಹ್ಯ ಜಿಲ್ಲೆಯ 11 ಜನರಲ್ಲಿ ಕೊರೊನಾ ಸೋಂಕು ಪತ್ತೆಯಾಗಿದೆ.
ಸೋಮವಾರ 469 ಜನರಲ್ಲಿ ಸೋಂಕು ಪತ್ತೆಯಾಗಿದೆ. ಅದರಲ್ಲಿ 22 ವಿದ್ಯಾರ್ಥಿಗಳು ಮತ್ತು 3 ಜನ ಸಿಬ್ಬಂದಿ ಇದ್ದಾರೆ. 878 ಜನ ಗುಣಮುಖರಾಗಿದ್ದಾರೆ.
ಸಕ್ರಿಯ ಪ್ರಕರಣ ಇಳಿಕೆ | ಮೆಗ್ಗಾನ್ ಜಿಲ್ಲಾಸ್ಪತ್ರೆಯಲ್ಲಿ 577, ಡಿಸಿಎಚ್‍ಸಿನಲ್ಲಿ 264, ಕೋವಿಡ್ ಕೇರ್ ಸೆಂಟರ್‍ನಲ್ಲಿ 1,955, ಖಾಸಗಿ ಆಸ್ಪತ್ರೆಯಲ್ಲಿ 1,319, ಹೋಂ ಐಸೋಲೇಷನ್‍ನಲ್ಲಿ 1,443, ಟ್ರಿಯೇಜ್‍ನಲ್ಲಿ 710 ಜನರಿದ್ದಾರೆ. ಪ್ರಸ್ತುತ 6,268 ಸಕ್ರಿಯ ಪ್ರಕರಣಗಳು ಜಿಲ್ಲೆಯಲ್ಲಿವೆ.
https://www.suddikanaja.com/2020/12/11/covid-in-shivamogga/