ಸುದ್ದಿ ಕಣಜ.ಕಾಂ
ಶಿವಮೊಗ್ಗ: ಪ್ರಸಕ್ತ ಶೈಕ್ಷಣಿಕ ವರ್ಷದಿಂದ ಜೆ.ಎನ್.ಎನ್.ಸಿ.ಇ ಕಾಲೇಜಿನಲ್ಲಿ ನೂತನವಾಗಿ ಆರ್ಟಿಫಿಷಿಯಲ್ ಇಂಟಲಿಜೆನ್ಸ್ ಮತ್ತು ಮೆಷಿನ್ ಲರ್ನಿಂಗ್ ಕೋರ್ಸ್ ಪ್ರಾರಂಭಿಸಲಾಗುತ್ತಿದೆ.
https://www.suddikanaja.com/2021/06/23/upgradation-of-government-diploma-college-to-engineering-college/
ರಾಷ್ಟ್ರೀಯ ಶಿಕ್ಷಣ ಸಮಿತಿ ಕಾರ್ಯದರ್ಶಿ ಎಸ್.ಎನ್. ನಾಗರಾಜ್ ಅವರು ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿ, ಎಐಸಿಟಿಇ ಅನುಮೋದನೆ ನಂತರ ಪ್ರಸಕ್ತ ವರ್ಷದಿಂದಲೇ 60 ಸೀಟುಗಳ ಪ್ರವೇಶಾತಿ ಪ್ರಾರಂಭವಾಗಲಿದೆ ಎಂದು ತಿಳಿಸಿದರು.
ಬಾರಿ ಬೇಡಿಕೆಯಿಂದಾಗಿ ಎಐಸಿಟಿಇ ಅನುಮೋದನೆ ನಂತರ ಕಂಪ್ಯೂಟರ್ ಸೈನ್ಸ್ ಎಂಜಿನಿಯರಿಂಗ್ ಪ್ರವೇಶಾತಿಯನ್ನು 180 ಸೀಟು ಹಾಗೂ ಅನುಮೋದನೆ ದೊರೆತ ಎಂ.ಸಿ.ಎ ಸ್ನಾತಕೊತ್ತರ ಪದವಿ ಪ್ರವೇಶಾತಿಯನ್ನು 60 ಸೀಟುಗಳಿಗೆ ಹೆಚ್ಚಿಸಲಾಗುತ್ತಿದೆ ಎಂದು ಹೇಳಿದರು.
ನಾವಿನ್ಯಕ್ಕೆ ಆರ್ಥಿಕ ನೆರವು | ನಾವಿನ್ಯ ಯೋಚನೆಗಳಿಗೆ ಪ್ರೋತ್ಸಾಹಿಸುವುದಕ್ಕಾಗಿ ಆರ್ಥಿಕ ನೆರವು ನೀಡಲಾಗುತ್ತಿದೆ. ಕೇಂದ್ರದ ನ್ಯೂ ಜೆನ್ ಐಇಡಿಸಿ ಮೂಲಕ 2.5 ಲಕ್ಷ ಹಾಗೂ ರಾಜ್ಯದಿಂದ ಮೂರು ಲಕ್ಷ ರೂಪಾಯಿ ಆರ್ಥಿಕ ನೆರವು ನೀಡಲಾಗುತ್ತಿದೆ ಎಂದು ತಿಳಿಸಿದರು.
ಕಾಲೇಜಿನ ಎಲ್ಲ ಎಂಜಿನಿಯರಿಂಗ್ ವಿಭಾಗಗಳು ಎನ್.ಬಿ.ಎ ಅನುಮೋದನೆ ಪಡೆದಿವೆ. ಯುಜಿಸಿ 2 ಎಫ್ ಮತ್ತು 12 ಬಿ ಪ್ರಮಾಣ ಪತ್ರ ಲಭಿಸಿದೆ. ಇಂಡಿಯಾ ಟುಡೇ ಉತ್ತಮ ಕಾಲೇಜುಗಳ ಸಮೀಕ್ಷೆಯಲ್ಲಿ ಈ ವರ್ಷ ಭಾರತದಲ್ಲಿ 48ನೇ ರ್ಯಾಂಕ್ ಮತ್ತು ಕರ್ನಾಟಕದಲ್ಲಿ 10 ನೇ ರ್ಯಾಂಕ್ ಪಡೆದಿದೆ ಎಂದು ತಿಳಿಸಿದರು.
ಎನ್.ಇ.ಎಸ್. ಉಪಾಧ್ಯಕ್ಷ ಅಶ್ವಥನಾರಾಯಣ ಶೆಟ್ಟಿ, ಸಹ ಕಾರ್ಯದರ್ಶಿ ಅಮರೇಂದ್ರ ಕಿರೀಟಿ, ಖಜಾಂಚಿ ಸಿ.ಆರ್. ನಾಗರಾಜ್, ನಿರ್ದೇಶಕ ಪಿ.ಎಚ್.ಸಿ. ಶಿವಕುಮಾರ್, ಕುಲಸಚಿವ ಪ್ರೊ. ಹೂವಯ್ಯಗೌಡ ಉಪಸ್ಥಿತರಿದ್ದರು.
https://www.suddikanaja.com/2021/05/06/state-government-ready-to-provide-all-support-to-mspl-oxygen-plant-jagadish-shettar/