ಸುದ್ದಿ ಕಣಜ.ಕಾಂ
ಶಿವಮೊಗ್ಗ: ಕೊರೊನಾ ಸೋಂಕಿತರ ಸಂಖ್ಯೆಯಲ್ಲಿ ಅಲ್ಪ ಪ್ರಮಾಣದ ಇಳಿಕೆಯಾಗಿದೆ.
https://www.suddikanaja.com/2021/06/10/covid-cases-decreased/
ಜಿಲ್ಲಾಡಳಿತ ಬಿಡುಗಡೆ ಮಾಡಿರುವ ವರದಿ ಪ್ರಕಾರ, ಜಿಲ್ಲೆಯಲ್ಲಿ 98 ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿವೆ. 101 ಜನ ಚಿಕಿತ್ಸೆ ಪಡೆದು ಗುಣಮುಖರಾಗಿದ್ದಾರೆ. 2 ಜನ ಮೃತಪಟ್ಟಿದ್ದಾರೆ.
ಸೋಂಕಿತರ ಸಂಪರ್ಕದಲ್ಲಿದ್ದ ಹಾಗೂ ರೋಗದ ಲಕ್ಷಣಗಳನ್ನು ಹೊಂದಿರುವ 2,079 ಜನರ ಮಾದರಿಗಳನ್ನು ಸಂಗ್ರಹಿಸಲಾಗಿದೆ. 2,589 ವರದಿಗಳು ನೆಗೆಟಿವ್ ಇರುವುದು ದೃಢಪಟ್ಟಿದೆ.
READ | ಒಂದೇ ದಿನ ಅಕ್ಕ, ತಂಗಿಯ ಬಲಿ ಪಡೆದ ಕೊರೊನಾ ಮಹಾಮಾರಿ
ಮೆಗ್ಗಾನ್ ಜಿಲ್ಲಾಸ್ಪತ್ರೆಯಲ್ಲಿ 149 ಜನ ಚಿಕಿತ್ಸೆ ಪಡೆಯುತ್ತಿದ್ದಾರೆ. ಇನ್ನುಳಿದಂತೆ, ಡಿಸಿಎಚ್ಸಿ 91, ಕೋವಿಡ್ ಕೇರ್ ಸೆಂಟರ್ ನಲ್ಲಿ 162, ಖಾಸಗಿ ಆಸ್ಪತ್ರೆಯಲ್ಲಿ 112, ಹೋಮ್ ಐಸೋಲೇಷನ್ ನಲ್ಲಿ 376 ಹಾಗೂ ಟ್ರಿಯೇಜ್ ಕೇಂದ್ರದಲ್ಲಿ 65 ಸೋಂಕಿತರಿದ್ದಾರೆ. 955 ಸಕ್ರಿಯ ಪ್ರಕರಣಗಳಿವೆ.
ತಾಲೂಕುವಾರು ವರದಿ | ಶಿವಮೊಗ್ಗದಲ್ಲಿ 48, ಭದ್ರಾವತಿ 12, ಶಿಕಾರಿಪುರ 5, ತೀರ್ಥಹಳ್ಳಿ 17, ಸೊರಬ 1, ಹೊಸನಗರ 2, ಸಾಗರ 7, ಬಾಹ್ಯ ಜಿಲ್ಲೆಯ 6 ಜನರಲ್ಲಿ ಸೋಂಕು ಇರುವುದು ಪತ್ತೆಯಾಗಿದೆ.
https://www.suddikanaja.com/2021/05/26/corona-cases-increase-in-shivamogga/