ಸುದ್ದಿ ಕಣಜ.ಕಾಂ
ಶಿವಮೊಗ್ಗ: ಜುಲೈ ಆರಂಭದಿಂದಲೂ ಕೊರೊನಾ ಸೋಂಮಿತರ ಸಂಖ್ಯೆಯಲ್ಲಿ ಏರಿಳಿತ ಆಗುತ್ತಲೇ ಇದೆ. ನಿರಂತರವಾಗಿ ಇಳಿಮುಖವೂ ಆಗುತ್ತಿಲ್ಲ. ಏರಿಕೆಯೂ ಆಗುತ್ತಿಲ್ಲ.
https://www.suddikanaja.com/2021/07/11/arecanut-theft-accused-arrested/
ಜಿಲ್ಲಾಡಳಿತ ಭಾನುವಾರ ಬಿಡುಗಡೆ ಮಾಡಿರುವ ವರದಿ ಪ್ರಕಾರ, ಜಿಲ್ಲೆಯಲ್ಲಿ 99 ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿವೆ. 131 ಜನ ಚಿಕಿತ್ಸೆ ಪಡೆದು ಗುಣಮುಖರಾಗಿದ್ದಾರೆ. 3 ಜನ ಮೃತಪಟ್ಟಿದ್ದಾರೆ.
ಸೋಂಕಿತರ ಸಂಪರ್ಕದಲ್ಲಿದ್ದ ಹಾಗೂ ರೋಗದ ಲಕ್ಷಣಗಳನ್ನು ಹೊಂದಿರುವ 741 ಜನರ ಮಾದರಿಗಳನ್ನು ಸಂಗ್ರಹಿಸಲಾಗಿದೆ. ಹಳೆಯದ್ದೂ ಸೇರಿ ಒಟ್ಟು 2,248 ವರದಿಗಳು ನೆಗೆಟಿವ್ ಇರುವುದು ದೃಢಪಟ್ಟಿದೆ.
ಮೆಗ್ಗಾನ್ ಜಿಲ್ಲಾಸ್ಪತ್ರೆಯಲ್ಲಿ 146 ಜನ ಚಿಕಿತ್ಸೆ ಪಡೆಯುತ್ತಿದ್ದಾರೆ. ಇನ್ನುಳಿದಂತೆ, ಡಿಸಿಎಚ್ಸಿ 75, ಕೋವಿಡ್ ಕೇರ್ ಸೆಂಟರ್ ನಲ್ಲಿ 159, ಖಾಸಗಿ ಆಸ್ಪತ್ರೆಯಲ್ಲಿ 104, ಹೋಮ್ ಐಸೋಲೇಷನ್ ನಲ್ಲಿ 377 ಹಾಗೂ ಟ್ರಿಯೇಜ್ ಕೇಂದ್ರದಲ್ಲಿ 62 ಸೋಂಕಿತರಿದ್ದಾರೆ. 923 ಸಕ್ರಿಯ ಪ್ರಕರಣಗಳಿವೆ.
ತಾಲೂಕುವಾರು ವರದಿ | ಶಿವಮೊಗ್ಗದಲ್ಲಿ 46, ಭದ್ರಾವತಿ 14, ಶಿಕಾರಿಪುರ 1, ತೀರ್ಥಹಳ್ಳಿ 11, ಸೊರಬ 2, ಹೊಸನಗರ 2, ಸಾಗರ 17, ಬಾಹ್ಯ ಜಿಲ್ಲೆಯ 6 ಜನರಲ್ಲಿ ಸೋಂಕು ಇರುವುದು ಪತ್ತೆಯಾಗಿದೆ.
https://www.suddikanaja.com/2021/07/10/covid-relief-in-shivamogga/