ಸುದ್ದಿ ಕಣಜ.ಕಾಂ
ಶಿವಮೊಗ್ಗ: ಜಿಲ್ಲೆಯಾದ್ಯಂತ ಭಾನುವಾರ ಉತ್ತಮ ಮಳೆಯಾಗಿದೆ. ಕಳೆದ 24 ಗಂಟೆಗಳಲ್ಲಿ ಹೊಸನಗರದಲ್ಲಿ ಅತ್ಯಧಿಕ ಮಳೆ ದಾಖಲಾಗಿದೆ.
READ | ಶಿವಮೊಗ್ಗದಲ್ಲಿ ಮುಂದುವರಿದ ಧಾರಾಕಾರ ಮಳೆ, ನಾಳೆ ಪುಷ್ಯ ಎಂಟ್ರಿ
ತಾಲೂಕುವಾರು ವಿವರ (ಎಂಎಂಗಳಲ್ಲಿ) | ಶಿವಮೊಗ್ಗ 31, ಭದ್ರಾವತಿ 33.4, ತೀರ್ಥಹಳ್ಳಿ 33.6, ಸಾಗರ 18.2, ಶಿಕಾರಿಪುರ 30.4, ಸೊರಬ 10.2 ಮತ್ತು ಹೊಸನಗರದಲ್ಲಿ ಅತ್ಯಧಿಕ 118.2 ಎಂಎಂ ಮಳೆಯಾಗಿದೆ.
ಜಲಾಶಯಗಳಲ್ಲೂ ನೀರಿನ ಮಟ್ಟ ಏರಿಕೆಯಾಗಿದೆ. ಲಿಂಗಮನಕ್ಕಿ ಜಲಾಶಯದಲ್ಲಿ 1791.20 ಅಡಿ ಹಾಗೂ ಭದ್ರಾದಲ್ಲಿ 163 ಅಡಿ ನೀರು ಇದೆ.
READ | ಅಡಿಕೆಯಲ್ಲಿ ಬೇರು ಹುಳುವಿನ ಬಾಧೆ ಇದೆಯೇ, ಹಾಗಾದರೆ ಅಡಿಕೆ ಸಂಶೋಧನಾ ಕೇಂದ್ರದ ತಜ್ಞರ ಸಲಹೆಗಳನ್ನು ಓದಿ
ಧಾರಾಕಾರ ವರ್ಷಧಾರೆಯಿಂದಾಗಿ ಮಲೆನಾಡಿನ ನದಿ, ಝರಿಗಳಿಗೆ ಜೀವ ಕಳೆ ಬಂದಿದೆ. ಜಲಪಾತಗಳು ಮೈದುಂಬಿ ಹರಿಯುತ್ತಿವೆ.