ಸುದ್ದಿ ಕಣಜ.ಕಾಂ
ಶಿವಮೊಗ್ಗ: ಜಿಲ್ಲೆಯ ಎರಡು ತಾಲೂಕುಗಳಲ್ಲಿ ಮಂಗಳವಾರ ಶೂನ್ಯ ಪ್ರಕರಣಗಳು ದೃಢಪಟ್ಟಿವೆ. ಇದೇ ಮೊದಲ ಸಲ ಶಿಕಾರಪುರದಲ್ಲಿ ಯಾವುದೇ ಸೋಂಕು ದೃಢಪಟ್ಟಿಲ್ಲ. ಸೊರಬದಲ್ಲಿ ಮೂರನೇ ಸಲ ಶೂನ್ಯ ಕೇಸ್ ದಾಖಲಾಗಿವೆ.
https://www.suddikanaja.com/2021/07/12/covid-decline-in-shivamogga/
ತಾಲೂಕುವಾರು ವರದಿ | ಶಿವಮೊಗ್ಗದಲ್ಲಿ 21, ಭದ್ರಾವತಿ 13, ಶಿಕಾರಿಪುರ 0, ತೀರ್ಥಹಳ್ಳಿ 6, ಸೊರಬ 0, ಹೊಸನಗರ 1, ಸಾಗರ 3, ಬಾಹ್ಯ ಜಿಲ್ಲೆಯ 1 ಜನರಲ್ಲಿ ಸೋಂಕು ಇರುವುದು ಪತ್ತೆಯಾಗಿದೆ.
ಜಿಲ್ಲಾಡಳಿತ ಬಿಡುಗಡೆ ಮಾಡಿರುವ ಹೆಲ್ತ್ ಬುಲೆಟಿನ್ ಪ್ರಕಾರ, ಜಿಲ್ಲೆಯಲ್ಲಿ ಮಂಗಳವಾರ 45 ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿವೆ. 105 ಜನ ಚಿಕಿತ್ಸೆ ಪಡೆದು ಗುಣಮುಖರಾಗಿದ್ದಾರೆ. ಒಬ್ಬರು ಮೃತಪಟ್ಟಿದ್ದಾರೆ.
ಎಲ್ಲಿ ಎಷ್ಟು ಜನ ಚಿಕಿತ್ಸೆ | ಮೆಗ್ಗಾನ್ ಜಿಲ್ಲಾಸ್ಪತ್ರೆಯಲ್ಲಿ 120 ಜನ ಚಿಕಿತ್ಸೆ ಪಡೆಯುತ್ತಿದ್ದಾರೆ. ಇನ್ನುಳಿದಂತೆ, ಡಿಸಿಎಚ್ಸಿ 59, ಕೋವಿಡ್ ಕೇರ್ ಸೆಂಟರ್ ನಲ್ಲಿ 71, ಖಾಸಗಿ ಆಸ್ಪತ್ರೆಯಲ್ಲಿ 38, ಹೋಮ್ ಐಸೋಲೇಷನ್ ನಲ್ಲಿ 271 ಹಾಗೂ ಟ್ರಿಯೇಜ್ ಕೇಂದ್ರದಲ್ಲಿ 18 ಸೋಂಕಿತರಿದ್ದಾರೆ. 577 ಸಕ್ರಿಯ ಪ್ರಕರಣಗಳು ಜಿಲ್ಲೆಯಲ್ಲಿವೆ.
https://www.suddikanaja.com/2021/07/13/covid-cases-decline-in-bhadravathi-and-soraba/