ಡಿಸಿಎಂ ಸ್ಥಾನದ ಆಕಾಂಕ್ಷೆಯ ಬಗ್ಗೆ ಈಶ್ವರಪ್ಪ ಹೇಳಿದ್ದೇನು, ಏನಿದು ಬಿಜೆಪಿಯ ‘ಕೃಷ್ಣ ತಂತ್ರ’ಗಾರಿಕೆ?

 

 

ಸುದ್ದಿ ಕಣಜ.ಕಾಂ
ಶಿವಮೊಗ್ಗ: ರಾಜ್ಯ ರಾಜಕಾರಣದಲ್ಲಿ ದೊಡ್ಡ ಬಿರುಗಾಳಿಯೇ ಎದ್ದು ಈಗ ಶಾಂತವಾಗಿದೆ. ಇದರ ನಡುವೆ ಉಪ ಮುಖ್ಯಮಂತ್ರಿ ಸ್ಥಾನಕ್ಕಾಗಿ ಭಾರಿ ಪೈಪೋಟಿ ನಡೆಯುತ್ತಿದೆ. ಈ ಎಲ್ಲ ವಿಚಾರಗಳು ಕುರಿತು ಶಾಸಕ ಕೆ.ಎಸ್. ಈಶ್ವರಪ್ಪ ಗುರುವಾರ ಕರೆದಿದ್ದ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ್ದಾರೆ. ಅದರ ಪೂರ್ಣ ವಿವರ ಇಲ್ಲಿದೆ.

https://www.suddikanaja.com/2021/04/15/kannada-movie-releasing-on-april-16/

ಭವಿಷ್ಯದ ಚುನಾವಣೆಗಾಗಿ ಕೃಷ್ಣನ ತಂತ್ರ ಬಳಕೆ | ಲಿಂಗಾಯತ ಸಮುದಾಯದವರನ್ನೇ ಮುಖ್ಯಮಂತ್ರಿ ಮಾಡುವುದರ ಹಿಂದೆ ಕೃಷ್ಣನ ತಂತ್ರಗಾರಿಕೆ ಇದೆ. ಅದನ್ನೇ ಹೈಕಮಾಂಡ್ ಮಾಡಿದೆ. ಬಾಕಿ ಇರುವ ಎರಡು ವರ್ಷ ರಾಜ್ಯದ ಅಭಿವೃದ್ಧಿಗಾಗಿ ಶ್ರಮಿಸಲಾಗುವುದು. ಮುಂದಿನ ಚುನಾವಣೆಯಲ್ಲಿ ಪೂರ್ಣ ಬಹುಮತ ಪಡೆದು ರಾಮರಾಜ್ಯ ನಿರ್ಮಾಣ ಮಾಡಲಾಗುವುದು ಎಂದು ಈಶ್ವರಪ್ಪ ತಿಳಿಸಿದರು.
ಬಿಜೆಪಿಯಲ್ಲಿದ್ದ ಎಲ್ಲ ಸಮಸ್ಯೆಗಳು ಪೂರ್ಣ ನಿವಾರಣೆ ಆಗಿವೆ. ಈಗ ಯಾವುದೇ ಗೊಂದಲ ಇಲ್ಲ. ದೊಡ್ಡ ಸಮಸ್ಯೆಯನ್ನು ಅತ್ಯಂತ ಸರಳವಾಗಿ ಕೃಷ್ಣನ ತಂತ್ರಗಾರಿಕೆ ಬಳಸಿ ಚಾಣಾಕ್ಷತನದಿಂದ ಬಗೆಹರಿಸಲಾಗಿದೆ ಎಂದರು.
ಪಕ್ಷದ ತೀರ್ಮಾನಕ್ಕೆ ಬದ್ಧ | ಜಗದೀಶ್ ಶೆಟ್ಟರ್ ಅವರು ತಮಗೆ ಡಿಸಿಎಂ ಸ್ಥಾನ ಬೇಡ ಎಂದು ಬಹಿರಂಗವಾಗಿಯೇ ಹೇಳಿದ್ದಾರೆ. ಆದರೆ, ನಾನು ಆ ರೀತಿಯಲ್ಲಿ ಹೇಳುವುದಿಲ್ಲ. ಪಕ್ಷ ನೀಡುವ ಸ್ಥಾನವನ್ನು ಸಮರ್ಥವಾಗಿ ನಿಭಾಯಿಸುವೆ ಎಂದು ಈಶ್ವರಪ್ಪ ತಿಳಿಸಿದರು.
ರಾಜ್ಯದಲ್ಲಿ ಸಾವಿರಾರು ಕಾರ್ಯಕರ್ತರಲ್ಲಿ ನಾನೂ ಒಬ್ಬ. ನಾನು ಡಿಸಿಎಂ ಆಗಬೇಕು ಎಂದು ಅಭಿಮಾನಿಗಳು ಅಪೇಕ್ಷಿಸುತ್ತಿದ್ದಾರೆ. ಆದರೆ, ನಾನೆಂದೂ ಪಕ್ಷದ ಹಿರಿಯರಿಗೆ ಇಂತಹದ್ದೇ ಸ್ಥಾನ ಬೇಕೆಂದು ಲಾಬಿ ಮಾಡಿಲ್ಲ. ಮಾಡುವುದಿಲ್ಲ. ಅವರು ಕೈಗೊಳ್ಳುವ ತಿರ್ಮಾನಕ್ಕೆ ಬದ್ಧ ಎಂದು ತಿಳಿಸಿದರು.
ಮೇಯರ್ ಸುನೀತಾ ಅಣ್ಣಪ್ಪ ಸೇರಿ ಇತರರು ಉಪಸ್ಥಿತರಿದ್ದರು.

https://www.suddikanaja.com/2021/02/15/shivamogga-shikaripura-railway-land-acquisition-work-will-end-in-2-months/

error: Content is protected !!