ಸುದ್ದಿ ಕಣಜ.ಕಾಂ
ಬೆಂಗಳೂರು: ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಮಂಗಳವಾರ ರಾತ್ರಿ 8.39ಕ್ಕೆ ಮಾಡಿರುವ ಒಂದು ಟ್ವಿಟ್ ರಾಜ್ಯ ರಾಜಕಾರಣದಲ್ಲಿ ಇನ್ನಷ್ಟು ಸಂಚಲನ ಮೂಡಿಸಿದೆ. ಜೊತೆಗೆ ಹಲವು ಪ್ರಶ್ನೆಗಳನ್ನು ಹುಟ್ಟು ಹಾಕಿದೆ.
https://www.suddikanaja.com/2021/01/02/no-change-of-cm-in-karnataka/
ಯಡಿಯೂರಪ್ಪ ಅವರು ಅಭಿಮಾನಿಗಳನ್ನು ಉದ್ದೇಶಿಸಿ ತಮ್ಮ ಅಧಿಕೃತ ಖಾತೆಯಿಂದ ಟ್ವಿಟ್ ಮಾಡಿದ್ದಾರೆ. ಅದಕ್ಕೆ ಎರಡು ಗಂಟೆಗಳಲ್ಲಿ ಸಾವಿರಕ್ಕೂ ಅಧಿಕ ರಿಟ್ವಿಟ್ ಮಾಡಲಾಗಿದೆ. ಆರೂವರೆ ಸಾವಿರಕ್ಕೂ ಅಧಿಕ ಲೈಕ್ 230ಕ್ಕೂ ಹೆಚ್ಚು ಕಮೆಂಟ್ ಗಳು ಬಂದಿವೆ. ಆ ಕಮೆಂಟ್ ಗಳಲ್ಲಿ ಬಿ.ಎಸ್.ವೈ. ಅಭಿಮಾನಿಗಳು ಸಿಎಂ ಸ್ಥಾನದಿಂದ ಸ್ಥಾನದಿಂದ ಕೆಳಗಿಳಿಸಿದರೆ ಬರುವ ಚುನಾವಣೆಯಲ್ಲಿ ಬಿಜೆಪಿಗೆ ಮತ ಹಾಕುವುದಿಲ್ಲ ಎಂದು ಘೋಷಿಸಿದ್ದಾರೆ. ಅದೇ ರೀತಿ, ಯಡಿಯೂರಪ್ಪ ಅವರಿಗೆ ಬೆಂಬಲಿಸಿ ಮತ್ತು ಬಿಜೆಪಿ ಹೈಕಮಾಂಡ್ ವಿರುದ್ಧ ಕೆಂಡಾಮಂಡಲಗೊಂಡು ರೋಷದಿಂದ ಮೆಸೇಜ್ ಗಳನ್ನು ಮಾಡಲಾಗಿದೆ.
ಯಡಿಯೂರಪ್ಪ ಅವರ ಟ್ವಿಟ್ ನಲ್ಲೇನಿದೆ | ‘ನಾನು ಬಿಜೆಪಿ ಪಕ್ಷದ ನಿಷ್ಠಾವಂತ ಕಾರ್ಯಕರ್ತ. ಹೀಗೆಂದು ಹೇಳಿಕೊಳ್ಳಲು ನನಗೆ ಹೆಮ್ಮೆಯಾಗುತ್ತದೆ. ಪಕ್ಷದ ಸಿದ್ಧಾಂತ, ನೀತಿಗಳನ್ನು ಅತ್ಯಂತ ಗೌರವದಿಂದ ಪಾಲಿಸಿಕೊಂಡು ಬಂದಿದ್ದೇನೆ. ಹೀಗಾಗಿ, ತಮ್ಮನ್ನು ಬೆಂಬಲಿಸುವವರು ಪಕ್ಷದ ಶಿಸ್ತನ್ನು ಅನುಸರಿಸಬೇಕು. ಯಾರೂ ಪ್ರತಿಭಟನೆ, ಗಲಾಟೆಯಂತಹ ಕೃತ್ಯಕ್ಕೆ ಕೈ ಹಾಕಬಾರದು. ಪಕ್ಷದ ಘನತೆಗೆ ಮುಜುಗರ ತರುವ ಕೆಲಸ ಮಾಡಬಾರದು’ ಎಂದು ಅಭಿಮಾನಿಗಳಿಗೆ ಮನವಿ ಮಾಡಿದ್ದಾರೆ.
https://www.suddikanaja.com/2021/03/25/plastic-awareness-by-swr/