ಸಿಎಂ ಫೈನಲ್ ಬೆನ್ನಲ್ಲೇ ಶುರುವಾಯ್ತು ಸಚಿವ ಸ್ಥಾನ ಲೆಕ್ಕಾಚಾರ, ಯಾರಿಗೆ ಸಿಗಲಿದೆ ಸಚಿವ ಸ್ಥಾನ, ಯಾರದ್ದೇನು ಪ್ಲಸ್ ಪಾಯಿಂಟ್?

 

 

ಸುದ್ದಿ ಕಣಜ.ಕಾಂ
ಶಿವಮೊಗ್ಗ: ಬಸವರಾಜ್ ಬೊಮ್ಮಾಯಿ ಅವರು ಮುಖ್ಯಮಂತ್ರಿ ಗದ್ದುಗೆ ಏರಿದ್ದೇ ಸಚಿವ ಸ್ಥಾನಗಳ ಆಕಾಂಕ್ಷಿಗಳ ಪಟ್ಟಿ ಏರಿಕೆಯಾಗುತ್ತಿದೆ. ಯಾರಿಗೆ ಸಚಿವಗಿರಿ ಸಿಗಲಿದೆ ಎಂಬುವ ವಿಚಾರ ಗರಿಗೆದರಿದೆ.

https://www.suddikanaja.com/2021/04/24/fraud-agency-cheated-a-man/

ಕೆ.ಎಸ್.ಈಶ್ವರಪ್ಪ | ಹಿರಿಯ ರಾಜಕಾರಣಿ, ಪಕ್ಷದಲ್ಲಿ ವಿವಿಧ ಹಂತಗಳಲ್ಲಿ ಕೆಲಸ ಮಾಡಿದ್ದಾರೆ. ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರೊಂದಿಗೆ ಪಕ್ಷ ಕಟ್ಟುವುದಕ್ಕಾಗಿ ನಿರಂತರ ಕಾರ್ಯನಿರ್ವಹಿಸಿದ್ದಾರೆ. ಆರ್.ಎಸ್.ಎಸ್. ಜೊತೆ ಉತ್ತಮ ಬಾಂಧವ್ಯವಿದೆ. ಇದೆಲ್ಲ ಇವರ ಪ್ಲಸ್ ಪಾಯಿಂಟ್ ಆಗಿವೆ. ಇತ್ತೀಚೆಗೆ, ವೈರಲ್ ಆಗಿದ್ದ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರ ಆಡಿಯೋ ಸಂಭಾಷಣೆಯಲ್ಲಿ ಈಶ್ವರಪ್ಪ ಅವರನ್ನೂ ಕೆಳಗಿಳಿಸುವ ಬಗ್ಗೆ ಪ್ರಸ್ತಾಪಿಸಲಾಗಿದೆ. ಬಿಜೆಪಿ ಅಧಿಕಾರ ಅವಧಿಯಲ್ಲಿಯೇ ಡಿಸಿಎಂ ಮತ್ತು ಸಚಿವರಾಗಿದ್ದಾರೆ. ಈ ಸಲ ಹೊಸಬರಿಗೆ ಅವಕಾಶ ನೀಡಬೇಕು ಎಂಬುವುದು ಹೈಕಮಾಂಡ್ ನಿರ್ದೇಶನ ಇದೆ. ಇವೆಲ್ಲ ಈಶ್ವರಪ್ಪ ಅವರ ಪಾಲಿಗೆ ನೆಗೆಟಿವ್ ಪಾಯಿಂಟ್ ಆಗಿ ಪರಿಣಮಿಸಬಹುದು.

ಆಗರ ಜ್ಞಾನೇಂದ್ರ | ಪ್ರಸ್ತುತ ಅಡಕೆ ಟಾಸ್ಕ್ ಫೋರ್ಸ್ ಅಧ್ಯಕ್ಷರಾಗಿರುವ ಶಾಸಕ ಆರಗ ಜ್ಞಾನೇಂದ್ರ ಅವರು ಸಹ ಸಚಿವ ಸ್ಥಾನದ ಆಕಾಂಕ್ಷಿಯಾಗಿದ್ದಾರೆ. ಇವರು ಹಿರಿಯ ಶಾಸಕರಾಗಿದ್ದು, ಪಕ್ಷಕ್ಕಾಗಿ ಹಲವು ಹಂತಗಳಲ್ಲಿ ನಿರಂತರ ಕೆಲಸ ಮಾಡಿದ್ದಾರೆ. ಆದರೆ, ಇದುವರೆಗೆ ಇವರಿಗೆ ಸಚಿವ ಸ್ಥಾನ ಲಭಿಸಿಲ್ಲ. ಜಾತಿವಾರು ಲೆಕ್ಕ ಹಾಕಿದರೆ ಪ್ರಬಲ ಒಕ್ಕಲಿಗ ಸಮುದಾಯದವರಾಗಿರುವುದರಿಂದ ಅವರೂ ರೇಸ್ ನಲ್ಲಿದ್ದಾರೆ.

ಕುಮಾರ ಬಂಗಾರಪ್ಪ | ಸೊರಬ ಕ್ಷೇತ್ರದ ಶಾಸಕ ಕುಮಾರ್ ಬಂಗಾರಪ್ಪ ಅವರೂ ಸಚಿವ ಸ್ಥಾನ ಆಕಾಂಕ್ಷಿಯಾಗಿದ್ದಾರೆ. ಮಾಜಿ ಸಿಎಂ ಬಂಗಾರಪ್ಪ ಅವರ ಪುತ್ರ ಎಂಬುವುದು ಇವರ ಪ್ಲಸ್ ಪಾಯಿಂಟ್. ಪ್ರಬಲ ಈಡಿಗ ಸಮುದಾಯದಕ್ಕೆ ಸೇರಿದ್ದು, ಸಚಿವ ಸ್ಥಾನ ನಿಭಾಯಿಸುವ ಸಾಧ್ಯತೆ ಇರುವುದರಿಂದ ಇವರ ಹೆಸರೂ ಕೇಳಿಬರುತ್ತಿದೆ. ಈ ಹಿಂದೆ ಸಚಿವರಾಗಿ ಕಾರ್ಯನಿರ್ವಹಿಸಿದ ಅನುಭವವೂ ಇದೆ.

ಹರತಾಳು ಹಾಲಪ್ಪ | ಪ್ರಬಲ ಈಡಿಗ ಸಮುದಾಯದ ನಾಯಕರಾಗಿ ಗುರುತಿಸಿಕೊಂಡಿದ್ದಾರೆ. ಕ್ಷೇತ್ರದಲ್ಲಿ ಸಕ್ರಿಯವಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಕ್ಷೇತ್ರದ ಸಣ್ಣಪುಟ್ಟ ಸಮಸ್ಯೆಗಳನ್ನೂ ರಾಜ್ಯ ಮಟ್ಟದವರೆಗೆ ಕೊಂಡೊಯ್ದಿದ್ದಾರೆ. ಆರೋಗ್ಯ, ವಯಸ್ಸು ವಿಚಾರದಲ್ಲೂ ತೊಂದರೆ ಇಲ್ಲ. ಇವರಿಗೂ ಸಾಧ್ಯತೆ ಇದೆ ಎನ್ನಲಾಗುತ್ತಿದೆ.

ಸುನೀಲ್ ಕುಮಾರ್ | ಶಿವಮೊಗ್ಗ ಜಿಲ್ಲೆಯ ಈ ಎಲ್ಲ ಹೆಸರುಗಳ ನಡುವೆ ಕಾರ್ಕಳ ಶಾಸಕ ಸುನೀಲ್ ಕುಮಾರ್ ಅವರು ರೇಸ್ ನಲ್ಲಿದ್ದಾರೆ. ಒಂದುವೇಳೆ, ಇವರು ಸಂಪುಟದಲ್ಲಿ ಸ್ಥಾನ ಗಿಟ್ಟಿಸಿಕೊಂಡರೆ ಹಾಲಪ್ಪ ಮತ್ತು ಕುಮಾರ್ ಬಂಗಾರಪ್ಪ ಅವರಿಗೆ ಸಂಪುಟ ಎಂಟ್ರಿ ಕಷ್ಟವಾಗಲಿದೆ.

ಅಶೋಕ್ ನಾಯ್ಕ್ | ಶಿವಮೊಗ್ಗ ಗ್ರಾಮಾಂತರ ಶಾಸಕ ಅಶೋಕ್ ನಾಯ್ಕ್ ಕೂಡ ಸಚಿವ ಸ್ಥಾನಕ್ಕಾಗಿ ಪ್ರಯತ್ನ ನಡೆಸುತ್ತಿದ್ದಾರೆ. ಯಡಿಯೂರಪ್ಪ ಅವರ ಜೊತೆ ಉತ್ತಮ ಬಾಂಧವ್ಯವಿದೆ. ಆದರೆ, ಮೊದಲ ಸಲ ಶಾಸಕರಾಗಿರುವುದರಿಂದ ಅವಕಾಶ ಸಿಗುವುದು ಅನುಮಾನ.

https://www.suddikanaja.com/2020/11/03/awardee-drona-life/

error: Content is protected !!