ಸುದ್ದಿ ಕಣಜ.ಕಾಂ
ಶಿವಮೊಗ್ಗ: ಟ್ರಕ್ ಟರ್ಮಿನಲ್ ನಿರ್ಮಿಸುವ ಉದ್ದೇಶಕ್ಕಾಗಿ ನಗರಕ್ಕೆ ಹೊಂದಿಕೊಂಡಂತೆ 25-30 ಎಕರೆ ಜಾಗದ ಅವಶ್ಯಕತೆ ಇದೆ. ಅದಕ್ಕಾಗಿ, ಈಗಾಗಲೇ ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದು ಡಿ.ದೇವರಾಜ ಅರಸು ಟರ್ಮಿನಲ್ ಅಧ್ಯಕ್ಷ ಡಿ.ಎಸ್.ವೀರಯ್ಯ ಹೇಳಿದರು.
ಡಿಸಿ ಕಚೇರಿಯಲ್ಲಿ ಇತ್ತೀಚೆಗೆ ಕರೆದಿದ್ದ ಸಭೆಯಲ್ಲಿ ಅವರು ಮಾತನಾಡಿದರು.
https://www.suddikanaja.com/2020/11/23/railway-terminal-at-koteganguru-in-shivamogga/
ದ್ದು, ಸ್ಥಳ ಗುರುತಿಸುವಂತೆ ಸಂಬಂಧಿತ ಇಲಾಖೆಗಳ ಅಧಿಕಾರಿಗಳಿಗೆ ಸೂಚಿಸಲಾಗಿದೆ. ಗೋಮಾಳ, ಕಂದಾಯ ಭೂಮಿ ದೊರೆಯದಿದ್ದಲ್ಲಿ ಖಾಸಗಿ ವ್ಯಕ್ತಿಗಳಿಂದ ಭೂಮಿ ಖರೀದಿಸಿ, ಟರ್ಮಿನಲ್ ನಿರ್ಮಿಸಲಾಗುವುದು. ಅವಕಾಶ ಇದ್ದರೆ ಖಾಸಗಿ ಮಾಲೀಕರು ಅಥವಾ ಹೂಡಿಕೆದಾರರ ನಡುವೆ ಒಪ್ಪಂದ ಮಾಡಿಕೊಂಡು ಟರ್ಮಿನಲ್ ನಿರ್ಮಿಸಲು ಅವಕಾಶ ಒದಗಿಸಲಾಗುವುದು ಎಂದರು.
ರಾಜ್ಯ ಸರ್ಕಾರದಿಂದ ಅನುದಾನ | ಹಣಕಾಸಿನ ಲಭ್ಯತೆಯ ಕೊರತೆಯಿಂದ ಟರ್ಮಿನಲ್ಸ್ ಲಿ. ನಿಂದ ಟರ್ಮಿನಲ್ಗಳನ್ನು ನಿರ್ಮಿಸುವುದು ಸಾಧ್ಯವಾಗುತ್ತಿಲ್ಲ. ಮುಂದಿನ ದಿನಗಳಲ್ಲಿ ಸರ್ಕಾರದಿಂದಲೇ ಹಣ ಪಡೆದು ನಿರ್ಮಿಸಲು ಕ್ರಮವಹಿಸಲಾಗುವುದು. 2-3 ತಿಂಗಳಲ್ಲಿ ಶಿವಮೊಗ್ಗದಲ್ಲಿ ಟರ್ಮಿನಲ್ಗಳನ್ನು ನಿರ್ಮಿಸಲು ಅಗತ್ಯ ಕ್ರಮ ವಹಿಸಲಾಗುವುದು ಎಂದರು.
https://www.suddikanaja.com/2020/12/02/raliway-coaching-terminal-in-kotegangur-shivamogga-tns-alligation-against-mp/
ಏನಿದರ ಪ್ರಯೋಜನ | ಜಿಲ್ಲೆಯಲ್ಲಿ ಸಂಚಾರ ದಟ್ಟಣೆ, ಮಾಲಿನ್ಯ ನಿಯಂತ್ರಣ ಹಾಗೂ ಆಕಸ್ಮಿಕ ವಾಹನ ಅಪಘಾತಗಳ ನಿಯಂತ್ರಿಸುವಲ್ಲಿ ರಾಜ್ಯದ ಪ್ರತಿ ಜಿಲ್ಲೆಗಳಲ್ಲಿ ಟ್ರಕ್ ಟರ್ಮಿನಲ್ ನಿರ್ಮಿಸುವ ಅಗತ್ಯವಿದೆ. ಶಿವಮೊಗ್ಗದಲ್ಲೂ ಈ ನಿಟ್ಟಿನಲ್ಲಿ ಕ್ರಮ ವಹಿಸಲಾಗುತ್ತಿದೆ ಎಂದು ಹೇಳಿದರು.
ಬೆಂಗಳೂರು, ಮೈಸೂರು ಸೇರಿದಂತೆ ಈಗಾಗಲೇ ರಾಜ್ಯದ ಆಯ್ದ ನಾಲ್ಕು ಕಡೆಗಳಲ್ಲಿ ಸುಸಜ್ಜಿತ ಟ್ರಕ್ ಟರ್ಮಿನಲ್ ನಿರ್ಮಿಸಿ ಸಾರ್ವಜನಿಕ ಸೇವೆಗೆ ಮುಕ್ತಗೊಳಿಸಲಾಗಿದೆ. ಅಂತೆಯೇ ರಾಜ್ಯದ ಹಲವೆಡೆ ಟರ್ಮಿನಲ್ ನಿರ್ಮಾಣಕ್ಕಾಗಿ ನಿವೇಶನ ಗುರುತಿಸಲಾಗಿದೆ. ಶಿವಮೊಗ್ಗದಲ್ಲಿಯೂ ಸುಸಜ್ಜಿತ ಟರ್ಮಿನಲ್ನ್ನು ನಿರ್ಮಿಸುವ ಉದ್ದೇಶ ಹೊಂದಲಾಗಿದೆ ಎಂದರು.
ಹೇಗಿರಲಿದೆ ಟ್ರಕ್ ಟರ್ಮಿನಲ್ | ಟರ್ಮಿನಲ್ನಲ್ಲಿ ವಾಹನಗಳ ಮಾಲೀಕರಿಂದ ಕೇವಲ ಕರವಸೂಲು ಮಾಡುವುದು ಮಾತ್ರವಲ್ಲ ನಿರ್ಮಿಸಲಾಗುವ ಟ್ರಕ್ ಟರ್ಮಿನಲ್ನಲ್ಲಿ ಬಹುಮುಖ್ಯವಾಗಿ ವಾಹನ ಚಾಲಕರ ವಿಶ್ರಾಂತಿ ಕೊಠಡಿ, ಏಜೆಂಟರಿಗೆ ಕೊಠಡಿ, ವೇಬ್ರಿಡ್ಜ್, ಕ್ಯಾಂಟೀನ್, ಆಟೋಮೊಬೈಲ್, ಶೌಚಾಲಯ, ಪೆಟ್ರೋಲ್ ಬಂಕ್, ಮೆಡಿಕಲ್ಸ್, ಲಾಜಿಸ್ಟಿಕ್ ಸೆಂಟರ್, ಥಿಯೇಟರ್ ಇತ್ಯಾದಿ ಸೌಲಭ್ಯಗಳನ್ನು ಕಲ್ಪಿಸಿ ಉತ್ತಮ ಸೌಲಭ್ಯ ನೀಡಬೇಕು ಎಂದು ತಿಳಿಸಿದರು.
ಸಭೆಯಲ್ಲಿ ಸೂಡಾ ಅಧ್ಯಕ್ಷ ಜ್ಯೋತಿಪ್ರಕಾಶ್, ಅಪರ ಜಿಲ್ಲಾಧಿಕಾರಿ ಡಾ. ನಾಗೇಂದ್ರರಾವ್ ಎಫ್.ಹೊನ್ನಳ್ಳಿ, ಮಹಾನಗರ ಪಾಲಿಕೆ ಆಯುಕ್ತ ಚಿದಾನಂದ್ ಎಸ್.ವಟಾರೆ ಉಪಸ್ಥಿತರಿದ್ದರು.
https://www.suddikanaja.com/2020/11/12/new-police-station-and-facility-to-police-department/