ಪಬ್ಲಿಕ್ ಪ್ಲೇಸ್ ನಲ್ಲೇ ಗಾಂಜಾ ಮಾರಾಟ ಮಾಡುತ್ತಿದ್ದವರ ಮೇಲೆ ಪೊಲೀಸ್ ರೇಡ್, ಸಿಕ್ಕ ಗಾಂಜಾವೆಷ್ಟು ಗೊತ್ತಾ?

 

 

ಸುದ್ದಿ‌ ಕಣಜ.ಕಾಂ‌ |‌ SAGARA | CRIME
ಸಾಗರ: ಇಲ್ಲಿನ ಸದ್ಗುರು ಲೇಔಟ್ ನಲ್ಲಿ ಓಮ್ನಿ ವ್ಯಾನ್ ನಲ್ಲಿ ಒಣ ಗಾಂಜಾ ಮಾರಾಟ ಮಾಡುತ್ತಿದ್ದ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ಪಟ್ಟಣದ ಕೆಳದಿ‌ ರಸ್ತೆ ನಿವಾಸಿ ಇಮ್ರಾನ್ ಖಾನ್(25), ಇಂತಿಯಾಜ್ ಲೇ(28) ಬಂಧಿತರು.‌ ಇವರಿಂದ‌ ಅಂದಾಜು 20,000 ರೂಪಾಯಿ ಮೌಲ್ಯದ 1 ಕೆಜಿ 60 ಗ್ರಾಂ ಒಣ ಗಾಂಜಾ, 800 ರೂಪಾಯಿ ನಗದು ಹಣ ಹಾಗೂ ಕೃತ್ಯಕ್ಕೆ ಬಳಸಿದ ಒಂದು ಓಮ್ನಿ ವ್ಯಾನ್ ವಶಕ್ಕೆ ಪಡೆಯಲಾಗಿದೆ.

READ | ಭದ್ರಾ ಜಲಾಶಯ ಗೇಟ್ ಓಪನ್, ಹೊರ ಬಿಟ್ಟಿರುವ ನೀರಿನ ಪ್ರಮಾಣವೆಷ್ಟು, ಮಳೆಗಾಲ ಆರಂಭದಲ್ಲೇ ಭದ್ರಾ ಭರ್ತಿ

ಪಕ್ಕಾ ಮಾಹಿತಿ ಮೇರೆಗೆ ರೇಡ್ ಮಾಡಿದ ಖಾಕಿ
ಬುಧವಾರ ಮಧ್ಯಾಹ್ನ ಸಾಗರ ಟೌನ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ‌ ಗಾಂಜಾ ಮಾರಾಟ ಮಾಡುತ್ತಿರುವ ಬಗ್ಗೆ ಮಾಹಿತಿ ಬಂದಿದ್ದು, ಸಾಗರ ಟೌನ್‌ ಪಿ.ಐ ನೇತೃತ್ವದ ತಂಡ ದಾಳಿ ನಡೆಸಿ ಆರೋಪಿಗಳನ್ನು ಬಂಧಿಸಿದೆ. ಸಾಗರ ಟೌನ್ ಪೊಲೀಸ್ ಠಾಣೆಯಲ್ಲಿ‌ ಎನ್.ಡಿ.ಪಿ.ಎಸ್. ಕಾಯ್ದೆ ಅಡಿ ಪ್ರಕರಣ ದಾಖಲಾಗಿದೆ.

error: Content is protected !!