ಸುದ್ದಿ ಕಣಜ.ಕಾಂ | KARNATAKA | JOB
ಶಂಕರಘಟ್ಟ: ಕುವೆಂಪು ವಿಶ್ವವಿದ್ಯಾಲಯದ ಸ್ನಾತಕೋತ್ತರ ಸಮಾಜ ಕಾರ್ಯ ವಿಭಾಗದ ವತಿಯಿಂದ ಆಗಸ್ಟ್ 17ರಂದು ಬೆಳಗ್ಗೆ 9.30ಕ್ಕೆ ಕ್ಯಾಂಪಸ್ ಸಂದರ್ಶನವನ್ನು ಆಯೋಜಿಸಲಾಗಿದೆ. ಉತ್ತರ ಕನ್ನಡದ ಸಹ್ಯಾದ್ರಿ ಕಮ್ಯೂನಿಟಿ ಡೆವೆಲಪ್ಮೆಂಟ್ ಆ್ಯಂಡ್ ವುಮೆನ್ ಎಂಪವರ್ಮೆಂಟ್ ಸೊಸೈಟಿ (ಸ್ಕಾಡ್ ವೆಸ್) ಸಂಸ್ಥೆಯು ಸಂದರ್ಶನದಲ್ಲಿ ಭಾಗವಹಿಸಲಿದೆ. ಕಮ್ಯೂನಿಟಿ ಆರ್ಗನೈಸರ್ (10) ಮತ್ತು ಕಮ್ಯೂನಿಟಿ ಸೂಪರ್ವೈಸರ್ (5) ಹುದ್ದೆಗಳಿಗೆ ಸಂದರ್ಶನ ನಡೆಯಲಿದೆ.
https://www.suddikanaja.com/2021/02/28/the-antiquity-of-kannada-language-in-northern-kannada/
ಈ ಬಗ್ಗೆ ಪತ್ರಿಕಾ ಪ್ರಕಟಣೆ ನೀಡಿರುವ ವಿಭಾಗದ ಅಧ್ಯಕ್ಷ ಪ್ರೊ. ಎ. ರಾಮೇಗೌಡ, ಬಿಎಸ್ಡಬ್ಲ್ಯೂ ಮತ್ತು ಎಂಎಸ್ಡಬ್ಲ್ಯೂ ಪದವೀಧರರು ಸಂದರ್ಶನದಲ್ಲಿ ಭಾಗವಹಿಸಬಹುದು. ಅಂತಿಮ ವರ್ಷದ ವಿದ್ಯಾರ್ಥಿಗಳು ಕೂಡ ಸಂದರ್ಶನದಲ್ಲಿ ಭಾಗವಹಿಸಲು ಅವಕಾಶವಿರುತ್ತದೆ ಎಂದು ಮಾಹಿತಿ ನೀಡಿದ್ದಾರೆ.
ನೇರ ಸಂದರ್ಶನದಲ್ಲಿ ಭಾಗವಹಿಸಲು ಅವಕಾಶ
ಕರ್ನಾಟಕ ವಿಶ್ವವಿದ್ಯಾಲಯ, ದಾವಣಗೆರೆ ವಿಶ್ವವಿದ್ಯಾಲಯ, ತುಮಕೂರು ವಿವಿ, ಬೆಂಗಳೂರು ನಗರ ವಿವಿ, ಬೆಂಗಳೂರು ಉತ್ತರ ವಿವಿ, ರಾಣಿ ಚೆನ್ನಮ್ಮ ವಿವಿ ಮತ್ತು ಬಿಎಸ್ಡಬ್ಲ್ಯೂ ಕೋರ್ಸ್ ಹೊಂದಿರುವ ಕುವೆಂಪು ವಿಶ್ವವಿದ್ಯಾಲಯದ ಕಾಲೇಜುಗಳ ವಿದ್ಯಾರ್ಥಿಗಳು ಈಗಾಗಲೇ ನೋಂದಣಿ ಮಾಡಿಕೊಂಡಿದ್ದಾರೆ. ನೋಂದಣಿ ಮಾಡಿಕೊಳ್ಳದ ವಿದ್ಯಾರ್ಥಿಗಳು ಕೂಡ ನೇರವಾಗಿ ಸಂದರ್ಶನದಲ್ಲಿ ಭಾಗವಹಿಸಲು ಅವಕಾಶವಿರುತ್ತದೆ ಎಂದು ಅವರು ತಿಳಿಸಿದ್ದಾರೆ.
ಈ ದಾಖಲೆಗಳನ್ನು ಜತೆಯಲ್ಲಿ ತನ್ನಿ
ಆಸಕ್ತ ಅಭ್ಯರ್ಥಿಗಳು ಪದವಿಯ ಮೂಲ ಅಂಕ ಪಟ್ಟಿ ಮತ್ತು ಒಂದು ಸೆಟ್ ಜೆರಾಕ್ಸ್ ಪ್ರತಿ, ವೈಯಕ್ತಿಕ ವಿವರ (Resume) ದ್ವಿಪ್ರತಿಯಲ್ಲಿ ಮತ್ತು ಎರಡು ಪಾಸ್ ಪೋರ್ಟ್ ಅಳತೆಯ ಫೋಟೋಗಳೊಂದಿಗೆ ಸಂದರ್ಶನಕ್ಕೆ ಹಾಜರಾಗುವುದು.
ಹೆಚ್ಚಿನ ಮಾಹಿತಿಗೆ ಮೊಬೈಲ್ ಸಂಖ್ಯೆ 97 39244374 ಮತ್ತು 9916667262 ಸಂಪರ್ಕಿಸಬಹುದು.
https://www.suddikanaja.com/2020/12/18/ksou-date-extended-for-admission-2/