ಸುದ್ದಿ ಕಣಜ.ಕಾಂ | SHIVAMOGGA | POLITICS
ಶಿವಮೊಗ್ಗ: ಪ್ರಚೋದನಾಕಾರಿ ಹೇಳಿಕೆ ನೀಡಿರುವ ಸಚಿವ ಕೆ.ಎಸ್.ಈಶ್ವರಪ್ಪ ಅವರ ವಿರುದ್ಧ ಕೋಟೆ ಪೊಲೀಸ್ ಠಾಣೆಯಲ್ಲಿ ದೂರು ನೀಡಲಾಗಿದೆ.
ಬುಧವಾರ ಪೊಲೀಸ್ ಠಾಣೆಯಲ್ಲಿ ಜಿಲ್ಲಾ ಯುವ ಕಾಂಗ್ರೆಸ್ ಸಮಿತಿಯು ಬುಧವಾರ ಸಚಿವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿ ದೂರು ನೀಡಿದೆ.
https://www.suddikanaja.com/2020/11/11/bike-stealing-gang-arrested-in-tunga-nagar-ps/
ಯುವ ಕಾಂಗ್ರೆಸ್ ಸಮಿತಿಯ ಆರೋಪಗಳೇನು?
‘ಬಿಜೆಪಿ ನಮ್ಮದು ಸಂಸ್ಕೃತಿ, ಸಂಸ್ಕಾರದ ಪಕ್ಷ ಎಂದು ಪ್ರತಿಪಾದಿಸುತ್ತದೆ. ಹಾಗಾದರೆ, ಹೊಡೆಯಿರಿ, ಬಡಿಯಿರಿ, ಕಡಿಯಿರಿ ಎನ್ನುವುದೇ ಪಕ್ಷದ ಸಂಸ್ಕೃತಿಯೇ ಎಂದು ಪ್ರಶ್ನಿಸಿದೆ. ಈಶ್ವರಪ್ಪ ಅವರು ವಿರೋಧ ಪಕ್ಷದ ಕಾಂಗ್ರೆಸ್ ನಾಯಕರನ್ನು ಅವಾಚ್ಯ ಪದಗಳಿಂದ ನಿಂದಿಸಿದೆ ಎಂದು ಸಮಿತಿಯ ಮುಖಂಡರು ಆರೋಪಿಸಿದ್ದಾರೆ.
ದೂರುದಾರರ ಆಗ್ರಹವೇನು?
ಸಚಿವರ ವಿರುದ್ಧ ಸಮಾಜಘಾತುಕ ಕಾಯ್ದೆ ಅಡಿ ದೂರು ದಾಖಲಿಸಬೇಕು. ಇತ್ತೀಚೆಗೆ ನಡೆದ ಬಿಜೆಪಿ ಕಾರ್ಯಕಾರಿ ಸಭೆಯಲ್ಲಿ ಒಂದಕ್ಕೆ ಎರಡು ತಲೆ ತೆಗೆಯಿರಿ ಎಂದು ಪ್ರಚೋದನಾಕಾರಿ ಹೇಳಿಕೆ ನೀಡಿದ್ದಾರೆ. ಹೀಗಾಗಿ, ಅವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.
ಶಿವಮೊಗ್ಗ ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಕೆ. ರಂಗನಾಥ್, ಕರ್ನಾಟಕ ಪ್ರದೇಶ ಯುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಎಂ.ಪ್ರವೀಣ್ ಕುಮಾರ್, ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ಎಚ್. ಪಿ. ಗಿರೀಶ್, ಪಾಲಿಕೆ ಸದಸ್ಯ ಎಚ್.ಸಿ.ಯೋಗೇಶ್, ರಂಜಿತ್, ಎಸ್. ಕುಮರೇಶ್, ರಾಹುಲ್, ವೆಂಕಟೇಶ್ ಕಲ್ಲೂರು, ಇರ್ಫಾನ್, ಸಚಿನ್, ಸೀನ, ಸುಹಾಸ್ ಗೌಡ, ನಂದ ಕುಮಾರ್, ಚೇತನ್ ಇದ್ದರು.
https://www.suddikanaja.com/2021/06/03/control-room-in-all-taluk-places/