ಶಿವಮೊಗ್ಗ ನಗರದಲ್ಲಿ ಐದು ದಿನ ಕುಡಿಯುವ ನೀರು ಪೂರೈಕೆಯಲ್ಲಿ‌ ವ್ಯತ್ಯಯ, ಕಾರಣವೇನು, ಯಾವ್ಯಾವ ಪ್ರದೇಶಕ್ಕೆ ತೊಂದರೆ?

 

 

ಸುದ್ದಿ ಕಣಜ.ಕಾಂ | CITY | WATER SUPPLY
ಶಿವಮೊಗ್ಗ: ಕೃಷ್ಣರಾಜೇಂದ್ರ ಜಲ ಶುದ್ಧೀಕರಣ ಘಟಕದಲ್ಲಿರುವ ಜಾಕ್‍ ವೆಲ್‍ ನಲ್ಲಿ ಈಗಿರುವ ಟರ್ಬೈನ್ ಪಂಪ್‍ ಅನ್ನು ಬದಲಾಯಿಸಿ ಹೊಸದಾಗಿ 150 ಎಚ್‍.ಪಿ ಪಂಪ್‍ ಅಳವಡಿಸಾಲಾಗುತ್ತಿದೆ. ಹೀಗಾಗಿ, ಐದು ದಿನಗಳ ಕಾಲ ನೀರು ಸರಬರಾಜಿನಲ್ಲಿ ವ್ಯತ್ಯಯವಾಗಲಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

https://www.suddikanaja.com/2020/11/24/shivamogga-smart-city-progress-meeting/

ಈ‌ ಸಂಬಂಧ ಪ್ರಕಟಣೆ ಹೊರಡಿಸಿರುವ ಶಿವಮೊಗ್ಗ ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳ ಚರಂಡಿ ಮಂಡಳಿ, ನಿರ್ವಹಣೆ ಮತ್ತು ಪಾಲನೆಯ ಎಇಇ ಸಾರ್ವಜನಿಕರು ಸಹಕರಿಸಬೇಕು ಎಂದು ಕೋರಿದ್ದಾರೆ.
ಯಾವಾಗಿಂದ, ಎಲ್ಲೆಲ್ಲಿ ನೀರು ಪೂರೈಕೆಯಲ್ಲಿ ವ್ಯತ್ಯಯ
ಅಗಸ್ಟ್ 27 ರಿಂದ 31ರ ವರೆಗೆ ಏರು ಕೊಳವೆ ಮಾರ್ಗ 1, 2, 3 ಮತ್ತು 6 ರಿಂದ ನೀರು ಸರಬರಾಜಾಗುವ ಗೋಪಾಳಗೌಡ ಬಡಾವಣೆ, ಸ್ವಾಮಿ ವಿವೇಕಾನಂದ ಬಡಾವಣೆ, ಅಪ್ಪಾಜಿರಾವ್ ಕಾಂಪೌಂಡ್, ಸರ್ಕಾರಿ ಶಾಲೆ, ಕಾರ್ಪೋರೇಷನ್, ಬಿ.ಬಿ. ಸ್ಟ್ರೀಟ್, ಮಲ್ಲೇಶ್ವರ ನಗರ, ಮೆಗ್ಗಾನ್ ಆಸ್ಪತ್ರೆ, ಬಸ್ ಸ್ಟ್ಯಾಂಡ್, ಕಲ್ಲಹಳ್ಳಿ, ವಿನೋಬನಗರ, ಆಲ್ಕೋಳ, ಎಪಿಎಂಸಿ, ನರಸಿಂಹ ಬಡಾವಣೆ, ಕುವೆಂಪು ರಸ್ತೆ, ಬೂಸ್ಟರ್ ಪಂಪ್‍ ಹೌಸ್ ಆವರಣ, ಕಾರ್ಪೋರೇಷನ್ ಟ್ಯಾಂಕ್ ಪ್ರದೇಶಗಳಲ್ಲಿ ದೈನಂದಿನ ಕುಡಿಯುವ ನೀರಿನ ಸರಬರಾಜಿನಲ್ಲಿ ವ್ಯತ್ಯಯವಾಗಲಿದೆ.

https://www.suddikanaja.com/2021/05/25/black-fungus-spread-by-dirty-water/

error: Content is protected !!