ಸುದ್ದಿ ಕಣಜ.ಕಾಂ | CITY | CRIME
ಶಿವಮೊಗ್ಗ: ಸೋಮಿನಕೊಪ್ಪದ ಮೈತ್ರಿ ಅಪಾರ್ಟ್ಮೆಂಟ್ ಸಮೀಪದ ಪೆಸಿಟ್ ಕಾಲೇಜಿಗೆ ಸೇರಿದ ನಾಲ್ಕು ಬಸ್ ಗಳಳಿಂದ ಡೀಸೆಲ್ ಕಳ್ಳತನ ಮಾಡಿದ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.
https://www.suddikanaja.com/2021/09/01/diesel-theft-in-pesit-college-buses/
ಟಿಪ್ಪುನಗರದ ನಿವಾಸಿಗಳಾದ ಸೈಯದ್ ತಬರೇದ್(24), ಸೈಯದ್ ಜಾಫರ್ (24) ಎಂಬುವವರನ್ನು ಬಂಧಿಸಿ, ಅವರಿಂದ 90 ಲೀಟರ್ ಡೀಸೆಲ್ ವಶಕ್ಕೆ ಪಡೆಯಲಾಗಿದೆ.
ಸ್ನೇಹಿತನಿಂದ ವಾಹನವನ್ನು ಬಾಡಿಗೆಗೆ ಪಡೆದಿದ್ದು, ಅದರಲ್ಲಿ ನಿತ್ಯ ಎಪಿಎಂಸಿಗೆ ತರಕಾರಿಯನ್ನು ಕೊಂಡೊಯ್ಯಲಾಗುತಿತ್ತು. ಆಗ ಸೋಮಿನಕೊಪ್ಪದಲ್ಲಿರುವ ಕಾಲೇಜಿನಲ್ಲಿ ವಾಹನ ನಿಲ್ಲಿಸುವುದನ್ನು ಗಮನಿಸಿ ರಾತ್ರಿ ಈ ಕೃತ್ಯ ಎಸಗಿದ್ದಾರೆ.
ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಅವರ ಕುಟುಂಬದ ಮಾಲೀಕತ್ವಕ್ಕೆ ಸೇರಿರುವ ಈ ಕಾಲೇಜಿನಲ್ಲಿ ಆಗಸ್ಟ್ 26ರ ರಾತ್ರಿ ಡೀಸೆಲ್ ಕಳ್ಳತನ ಮಾಡಲಾಗಿದೆ.
ಎರಡು ಮಿನಿ ಬಸ್, ಎರಡು ದೊಡ್ಡ ಬಸ್ಸುಗಳಿಂದ 580 ಲೀಡರಿಗೂ ಅಧಿಕ ಡೀಸೆಲ್ ಕಳ್ಳತನ ಮಾಡಲಾಗಿತ್ತು. ಕಾರ್ಯಾಚರಣೆ ನಡೆಸಿ ವಿನೋಬನಗರ ಪೊಲೀಸರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
https://www.suddikanaja.com/2021/08/28/most-wanted-accused-arrested-in-shiralakoppa/