ಸುದ್ದಿ ಕಣಜ.ಕಾಂ | KARNATAKA | JOB JUNCTION ಬೆಂಗಳೂರು: ಸ್ವದೇಶಿ ಸಂಸ್ಥೆ ಅದೂ ನಮ್ಮ ಕನ್ನಡದವರದ್ದೇ ಆದ ‘ಕೂ’ ಉದ್ಯೋಗ ಆಕಾಂಕ್ಷಿಗಳಿಗೆ ಶುಭ ಸುದ್ದಿ ನೀಡಿದೆ. ಸಾಮಾಜಿಕ ಜಾಲತಾಣ ಕ್ಷೇತ್ರದಲ್ಲಿ ಧೂಳೆಬ್ಬಿಸುತ್ತಿರುವ ಹಾಗೂ ಕನ್ನಡಿಗರ ಮನಸ್ಸಿಗೆ ಹತ್ತಿರವಾಗುತ್ತಿರುವ ಈ ತಾಣ ಒಂದು ಕೋಟಿ ಬಳಕೆದಾರರ ಗುರಿಯನ್ನು ಯಶಸ್ವಿಯಾಗಿ ತಲುಪಿದೆ. ಈ ಹೊಸ್ತಿಲಲ್ಲೇ ಇನ್ನಷ್ಟು ನೇಮಕಾತಿಯ ಗುಟ್ಟನ್ನು ಕೂ ಸಹ ಸಂಸ್ಥಾಪಕ ಅಪ್ರಮೇಯ ರಾಧಾಕೃಷ್ಣ ಅವರು ಬಿಟ್ಟುಕೊಟ್ಟಿದ್ದಾರೆ.
ಅಪ್ರಮೇಯ ರಾಧಾಕೃಷ್ಣ
ಸರ್ಕಾರಿ ಸಂಬಂಧಗಳು, ಮಾರ್ಕೆಟಿಂಗ್, ಬ್ರಾಂಡ್ ಮಾರ್ಕೆಟಿಂಗ್ ವಿಭಾಗದಲ್ಲೂ ನೇಮಕಾತಿ ಮಾಡಲಾಗುವುದು. ಭಾರತೀಯ ತಂತ್ರಜ್ಞಾನವನ್ನು ಜಾಗತಿಕ ಮಟ್ಟದಲ್ಲಿ ಪಸರಿಸುವ ಕೌಶಲವಿರುವವರೊಂದಿಗೆ ಕೆಲಸ ಮಾಡಲು ಸಿದ್ಧರಿದ್ದೇವೆ. – ಅಪ್ರಮೇಯ ರಾಧಾಕೃಷ್ಣ, ‘ಕೂ’ ಸಹ ಸಂಸ್ಥಾಪಕ
ರಾಷ್ಟ್ರೀಯ ಸುದ್ದಿ ವಾಹನಿಯೊಂದಕ್ಕೆ ಇದರ ಬಗ್ಗೆ ತಿಳಿಸಿರುವ ಅಪ್ರಮೇಯ ಅವರು, ‘ಪ್ರಸ್ತುತ 200 ಜನ ನೌಕರರಿದ್ದಾರೆ. ಮುಂದಿನ ಒಂದು ವರ್ಷದಲ್ಲಿ ಕನಿಷ್ಠ 500 ಜನರನ್ನು ನೇಮಕ ಮಾಡಿಕೊಳ್ಳುವುದಾಗಿ ಹೇಳಿದ್ದಾರೆ.
ಎಂಜಿನಿಯರಿಂಗ್, ಉತ್ಪನ್ನ ಹಾಗೂ ಸಮುದಾಯ ನಿರ್ವಹಣೆ ವಿಭಾಗಗಳಿಗೆ ನೌಕರರನ್ನು ನೇಮಕ ಮಾಡಿಕೊಳ್ಳುವ ಬಗ್ಗೆ ಇಂಗಿತ ವ್ಯಕ್ತಪಡಿಸಿದ್ದಾರೆ. ಈ ಮೂಲಕ ಕೊರೊನಾ ಸಂಕಷ್ಟ ಕಾಲದಲ್ಲಿ ಉದ್ಯೋಗ ಇಲ್ಲದೇ ಸಂಕಷ್ಟಕ್ಕೆ ಸಿಲುಕಿರುವವರಿಗೆ ಶುಭ ಸುದ್ದಿಯನ್ನು ನೀಡಿದ್ದಾರೆ.
ಸುದ್ದಿ ಕಣಜ.ಕಾಂ ಶಿವಮೊಗ್ಗ SHIVAMOGGA: 14 ವರ್ಷದ ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದ 35 ವರ್ಷದ ವ್ಯಕ್ತಿಗೆ ಶಿಕ್ಷೆ ವಿಧಿಸಿ ನ್ಯಾಯಾಲಯ ಆದೇಶಿಸಿದೆ. 2021ನೇ ಸಾಲಿನಲ್ಲಿ ಸೊರಬ ತಾಲ್ಲೂಕಿನ ವ್ಯಕ್ತಿಯು ಬಾಲಕಿಯ […]
ಸುದ್ದಿ ಕಣಜ.ಕಾಂ ತುಮಕೂರು TUMKUR: ಗೃಹ ಸಚಿವ ಡಾ.ಜಿ.ಪರಮೇಶ್ವರ್ (Dr.G.Parameshwar) ಅವರು ಉದ್ಯೋಗ ಆಕಾಂಕ್ಷಿ(Job aspirant)ಗಳಿಗೆ ಶುಭ ಸುದ್ದಿ ನೀಡಿದ್ದಾರೆ. READ | ಕಾನೂನು ವಿದ್ಯಾರ್ಥಿಗಳೇ ಗಮನಿಸಿ, ಅರ್ಜಿ ಸಲ್ಲಿಸುವ ಅವಧಿ ವಿಸ್ತರಣೆ, […]
ಸುದ್ದಿ ಕಣಜ.ಕಾಂ | DISTRICT | MARKET TREND ಶಿವಮೊಗ್ಗ: ಪೆಟ್ರೋಲ್ ದರದಲ್ಲಿ ಕೊಂಚ ಇಳಿಕೆಯಾಗಿದೆ. ಸೋಮವಾರ ಪ್ರತಿ ಲೀಟರಿಗೆ 0.22 ಪೈಸೆ ಇಳಿಕೆಯಾಗಿದೆ. ಇಂದಿನ ದರವು 112.68 ರೂಪಾಯಿ ಇದೆ. ಡಿಸೇಲ್ […]