ಸುದ್ದಿ ಕಣಜ.ಕಾಂ | KARNATAKA | JOB JUNCTION
ಬೆಂಗಳೂರು: ಪಿಯುಸಿ(ತತ್ಸಮಾನ), ಪದವಿ ಹಾಗೂ ಸ್ನಾತಕೋತ್ತರ ಪದವಿ ಪೂರೈಸುವವರಿಗೆ ಸುವರ್ಣ ಅವಕಾಶವಿದ್ದು, ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು.
ಕೇಂದ್ರ ಸರ್ಕಾರ ವಿವಿಧ ಇಲಾಖೆ ಹಾಗೂ ಸಚಿವಾಲಯಗಳಲ್ಲಿ ಖಾಲಿ ಇರುವ ಹುದ್ದೆಗಳಿಗೆ ನೇಮಕಾತಿ ನಡೆಯಲಿದೆ. ಅದಕ್ಕಾಗಿ, ಸ್ಟಾಫ್ ಸೆಲೆಕ್ಷನ್ ಕಮಿಷನ್(ಎಸ್ಎಸ್ಸಿ) ಅಧಿಸೂಚನೆ ಹೊರಡಿಸಿದ್ದು, ಒಟ್ಟು 3,261 ಹುದ್ದೆಗಳ ಭರ್ತಿಗೆ ಅವಕಾಶವಿದೆ.
ಸೆಪ್ಟೆಂಬರ್ 24ರಿಂದ ಅರ್ಜಿ ಸಲ್ಲಿಕೆ ಆರಂಭವಾಗಿದೆ. ಅಕ್ಟೋಬರ್ 25ರಂದು ಅರ್ಜಿ ಸಲ್ಲಿಕೆಗೆ ಕೊನೆಯ ದಿನವಾಗಿದೆ. ಶುಲ್ಕ ಪಾವತಿ ಹಾಗೂ ಆಫ್ಲೈನ್ ಚಲನ್ ಪಡೆಯಲು ಅಕ್ಟೋಬರ್ 28 ಅಂತಿಮ ದಿನವಾಗಿದೆ. ಪರೀಕ್ಷೆ 2022ರಲ್ಲಿ ನಡೆಯಲಿವೆ.
READ | ಹೆಸ್ಕಾಂನಲ್ಲಿ ಭರ್ಜರಿ ಉದ್ಯೋಗ ಅವಕಾಶ, ಅರ್ಜಿ ಸಲ್ಲಿಕೆ ಹೇಗೆ, ಕೊನೆ ದಿನಾಂಕ ಏನು, ಮಾಹಿತಿಗಾಗಿ ಕ್ಲಿಕ್ಕಿಸಿ
ಯಾವ ಹುದ್ದೆಗಳ ಭರ್ತಿ ನಡೆಯಲಿದೆ?
ಜೂನಿಯರ್ ಸೀಡ್ ಅನಾಲಿಸ್ಟ್, ಗರ್ಲ್ಸ್ ಕೆಡೆಟ್ ಇನ್ ಸ್ಟ್ರಕ್ಟರ್, ಮೆಕ್ಯಾನಿಕಲ್ ವಿಭಾಗ ಚಾರ್ಜ್ಮನ್, ಸೈಂಟಿಫಿಕ್ ಅಸಿಸ್ಟಂಟ್, ಅಕೌಂಟಂಟ್, ಹೆಡ್ ಕ್ಲರ್ಕ್, ರಿಹ್ಯಾಬಿಲಿಟೇಶನ್ ಕೌನ್ಸೆಲರ್, ಸ್ಟಾಫ್ ಕಾರ್ ಡ್ರೈವರ್, ಟೆಕ್ನಿಕಲ್ ಸೂಪರಿಂಟೆಂಡಂಟ್, ಕನ್ಜರ್ವೇಶನ್ ಅಸಿಸ್ಟಂಟ್, ಟೆಕ್ನಿಕಲ್ ಅಸಿಸ್ಟಂಟ್, ರಿಸರ್ಚ್ ಇನ್ವೆಸ್ಟಿಗೇಟರ್, ಜೂನಿಯರ್ ಕಂಪ್ಯೂಟರ್ ಆಪರೇಟರ್, ಮಲ್ಟಿಟಾಸ್ಕಿಂಗ್ ಸ್ಟಾಫ್, ಸೀನಿಯರ್ ಸೈಂಟಿಫಿಕ್ ಅಸಿಸ್ಟಂಟ್, ಹಿಂದಿ ಮತ್ತು ಇಂಗ್ಲಿಷ್ ಭಾಷೆಯಲ್ಲಿ ಸಬ್ ಎಡಿಟರ್, ಲೈಬ್ರರಿ ಇನ್ಫಾರ್ಮೇಶನ್ ಅಸಿಸ್ಟೆಂಟ್, ಲೀಗಲ್ ಅಸಿಸ್ಟೆಂಟ್, ಎಲೆಕ್ಟ್ರಿಕ್ ವೆಲ್ಡರ್, ಡೆಪ್ಯೂಟಿ ರೇಂಜರ್ ಹೀಗೆ ವಿವಿಧ ಹುದ್ದೆಗಳ ನೇಮಕಾತಿ ನಡೆಯಲಿದೆ.
Click here for website