ಸುದ್ದಿ ಕಣಜ.ಕಾಂ | KARNATAKA | JOB JUNCTION
ಬೆಂಗಳೂರು: ಬೆಂಗಳೂರು ಮೆಟ್ರೋ ರೈಲ್ವೆ ನಿಗಮ ಮಂಡಳಿ (BMRCL)ನಲ್ಲಿ ಉದ್ಯೋಗ ಅವಕಾಶವಿದೆ.
ಡೆಪ್ಯೂಟಿ ಜನರಲ್ ಮ್ಯಾನೇಜರ್, ಅಸಿಸ್ಟಂಟ್ ಜನರಲ್ ಮ್ಯಾನೇಜರ್ ಹುದ್ದೆಗಳು ಖಾಲಿ ಇದ್ದು, ಭರ್ತಿ ಮಾಡುವುದಕ್ಕಾಗಿ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ನೇಮಕಾತಿ ವೇಳೆಯೇ ಒಪ್ಪಂದ ಮತ್ತು ಡೆಪ್ಯೂಟೇಶನ್ ಆಧಾರದ ಮೇಲೆ ನೇಮಕಾತಿ ಮಾಡಲಾಗುತ್ತಿದೆ. ಅರ್ಜಿ ಸಲ್ಲಿಸಲು ಅಕ್ಟೋಬರ್ 27 ಅಂತಿಮ ದಿನವಾಗಿದೆ. ಕಾಮರ್ಸ್ ಪದವಿ ಪಾಸಾದವರು ಅರ್ಜಿ ಸಲ್ಲಿಸಬಹುದು.
READ | ಬಿಇಎಲ್ನಲ್ಲಿ ಭರಪೂರ ಉದ್ಯೋಗ ಅವಕಾಶ, ಪೂರ್ಣ ಮಾಹಿತಿಗಾಗಿ ಕ್ಲಿಕ್ಕಿಸಿ
ಒಟ್ಟು ಮೂರು ಹುದ್ದೆಗಳಿಗೆ ಅರ್ಜಿಗಳನ್ನು ಕರೆಯಲಾಗಿದೆ. 2 ಡೆಪ್ಯೂಟಿ ಜನರಲ್ ಮ್ಯಾನೇಜರ್, 1 ಅಸಿಸ್ಟಂಟ್ ಜನರಲ್ ಮ್ಯಾನೇಜರ್ ಹುದ್ದೆಗಳ ನೇಮಕಾತಿ ನಡೆಯಲಿದ್ದು, ಸಂದರ್ಶನದ ಮೂಲಕ ಆಯ್ಕೆ ಮಾಡಲಾಗುವುದು.
ಅರ್ಜಿಯನ್ನು ಬೆಂಗಳೂರು ಮೆಟ್ರೋ ರೈಲು, ಕಾರ್ಪೊರೇಷನ್ ಲಿಮಿಟೆಡ್, ಮೂರನೇ ಮಹಡಿ, ಬಿಎಂಟಿಸಿ ಕಾಂಪ್ಲೆಕ್ಸ್, ಕೆ.ಎಚ್. ರಸ್ತೆ, ಶಾಂತಿನಗರ,
ಬೆಂಗಳೂರು 560 027 ಇಲ್ಲಿಗೆ ಸಲ್ಲಿಸಬಹುದು.
ಗಮನಕ್ಕೆ | ವಯೋಮಿತಿ, ಶುಲ್ಕ, ಅರ್ಜಿ ಸಲ್ಲಿಕೆ, ಹುದ್ದೆಗೆ ಅಗತ್ಯವಿರುವ ಅನುಭವ ಇತ್ಯಾದಿಗಳ ಬಗ್ಗೆ ಮಾಹಿತಿಗಾಗಿ ನೋಟಿಫಿಕೇಷನ್ ಓದಿ.
https://www.suddikanaja.com/2021/09/26/hescom-job-recruitment/