ಸುದ್ದಿ ಕಣಜ.ಕಾಂ | NATINAL | SOCIAL MEDIA NEWS
ಬೆಂಗಳೂರು: ಇದ್ದಕ್ಕಿದ್ದಂತೆ ಸೋಮವಾರ ರಾತ್ರಿ ಪ್ರಭಾವಿ ಸಾಮಾಜಿಕ ತಾಣವಾದ ಫೇಸ್ಬುಕ್, ವಾಟ್ಸಾಪ್ ಹಾಗೂ ಇನ್ ಸ್ಟಾಗ್ರಾಂ ಅಪ್ಲಿಕೇಶನ್ ತಂತ್ರಾಂಶಗಳು ಕಾರ್ಯನಿರ್ವಹಣೆ ಸ್ಥಗಿತಗೊಳಿಸಿದ್ದು, ಜನ ಗಾಬರಿಗೆ ಒಳಗಾಗಿದ್ದಾರೆ. ಆದರೆ, ಹಲವು ಗಂಟೆಗಳ ಬಳಿಕ ಸರ್ವರ್ ಡೌನ್ ಇರುವ ವಿಚಾರ ಗೊತ್ತಾಗಿದೆ.
ರಾತ್ರಿ ವಾಟ್ಸಾಪ್ ನಲ್ಲಿ ಯಾವುದೇ ಸಂದೇಶಗಳು ರವಾನೆ ಆಗದೇ ಇರುವುದನ್ನು ಗಮನಿಸಿ ಇದನ್ನೇ ನಂಬಿಕೊಂಡಿರುವ ಹಲವರು ಆರಂಭದಲ್ಲಿ ಇಂಟರ್ನೆಟ್ ಇರಬಹುದು ಎಂದು ಕೊಂಡಿದ್ದರು. ಹಲವು ಸಲ ಮೊಬೈಲ್ ಸ್ವಿಚ್ ಆಫ್ ಮಾಡಿರುವುದಾಗಿಯೂ ಟ್ವಿಟರ್ ನಲ್ಲಿ ಅನುಭವ ಹಂಚಿಕೊಂಡಿದ್ದಾರೆ.
ಸರ್ವರ್ ಡೌನ್ ಟ್ವಿಟರ್ ನಲ್ಲಿ ಟ್ರೋಲ್
ಸರ್ವರ್ ಡೌನ್ ವಿಚಾರ ಟ್ವಿಟರ್ ನಲ್ಲಿ ಭಾರಿ ಟ್ರೋಲ್ ಆಗಿದೆ. ಮೂರು ಸೇವೆಗಳು ಸ್ಥಗಿತಗೊಂಡಿದ್ದಕ್ಕೆ ನಾನಾ ರೀತಿಯ ಹಾಸ್ಯ ಸಂದೇಶಗಳು ಹರಿದಾಡುತ್ತಿವೆ. ಸರ್ವರ್ ಡೌನ್ ಆಗಿರುವ ಬಗ್ಗೆ ಇದುವರೆಗೆ ಅಧಿಕೃತ ಮಾಹಿತಿ ಲಭ್ಯವಾಗಿಲ್ಲ. ಸಮಸ್ಯೆಯನ್ನು ಬಗೆಹರಿಸುವ ಬಗ್ಗೆ ಪ್ರಯತ್ನಿಸುತ್ತಿರುವುದಾಗಿ ತಿಳಿದುಬಂದಿದೆ.