ಸುದ್ದಿ ಕಣಜ.ಕಾಂ | DISTRICT | COURT NEWS
ಶಿವಮೊಗ್ಗ: ಬಾಲಕಿಯನ್ನು ಟಿವಿ ತೋರಿಸುವ ನೆಪದಲ್ಲಿ ಮನೆಗೆ ಕರೆದೊಯ್ದು ಅತ್ಯಾಚಾರ ಮಾಡಿದ ಆರೋಪಿಗೆ 10 ವರ್ಷ ಕಠಿಣ ಕಾರಾಗೃಹ ಶಿಕ್ಷೆ ಮತ್ತು 10 ಸಾವಿರ ದಂಡ ವಿಧಿಸಿ ನ್ಯಾಯಾಲಯ ಆದೇಶಿಸಿದೆ.
ಮನ್ಸೂರ್ (36) ಎಂಬಾತನಿಗೆ ಶಿಕ್ಷೆ ವಿಧಿಸಿ ಶಿವಮೊಗ್ಗ ಎಡಿಜೆಎಫ್.ಟಿ ಎಸ್.ಸಿ1 ಪೋಕ್ಸೋ ನ್ಯಾಯಾಲಯ ತೀರ್ಪು ನೀಡಿದೆ.
READ | ಒಂದೂವರೆ ತಿಂಗಳ ಹಿಂದೆ ಮೃತಪಟ್ಟಿದ್ದ ಆನೆಯ ಕಳೆಬರ ಮುತ್ತೂಡಿನಲ್ಲಿ ಪತ್ತೆ, ಕಾರಣ ನಿಗೂಢ
ಅತ್ಯಾಚಾರ ಪ್ರಕರಣದ ಹಿನ್ನೆಲೆ
2019ರ ಮೇ 20ರಂದು ಮನ್ಸೂರ್ ಮನೆಯಲ್ಲಿ ಯಾರೂ ಇಲ್ಲದ ಸಮಯದಲ್ಲಿ 16 ವರ್ಷದ ಅಪ್ರಾಪ್ತ ಬಾಲಕಿಯನ್ನು ಟಿವಿ ನೋಡುವ ನೆಪದಲ್ಲಿ ತನ್ನ ಮನೆಗೆ ಕರೆದು ಅತ್ಯಾಚಾರ ಎಸಗಿದ್ದಾನೆ.
ಈ ವಿಚಾರವನ್ನು ಯಾರಿಗೂ ತಿಳಿಸದಂತೆ, ಜೀವ ಬೆದರಿಕೆ ಹಾಕಿ ಬೀಡಿಯಿಂದ ಬಲಗೈಗೆ ಸುಟ್ಟಿರುತ್ತಾನೆ. ಆನಂತರ ಆಕೆಗೆ ಆರೋಗ್ಯದಲ್ಲಿ ವ್ಯತ್ಯಾಸವಾಗಿದ್ದು, ಆಸ್ಪತ್ರೆಯಲ್ಲಿ ತೋರಿಸಿದಾಗ ಗರ್ಭಿಣಿಯಾಗಿರುವುದು ತಿಳಿದು ಬಂದಿರುತ್ತದೆ ಎಂದು ನೊಂದ ಬಾಲಕಿ ನೀಡಿದ ದೂರಿನ ಮೇರೆಗೆ 2019ರ ಅಕ್ಟೋಬರ್ 1 ರಂದು ಶಿವಮೊಗ್ಗ ಮಹಿಳಾ ಪೊಲೀಸ್ ಠಾಣೆಯಲ್ಲಿ ದೂರು ನೀಡಲಾಗಿದೆ.
ದೂರಿನನ್ವಯ ಐಪಿಸಿ ಕಲಂ 376(2)(ಎನ್), 323, 506 ಹಾಗೂ ಕಲಂ 6 ಪೋಕ್ಸೋ ಕಾಯ್ದೆ ಅನ್ವಯ ಪ್ರಕರಣ ದಾಖಲಿಸಲಾಗಿದೆ.
READ | ನಾಪತ್ತೆಯಾಗಿದ್ದ ಶಿವಮೊಗ್ಗ ಡಿಸಿ ಕಚೇರಿ ಸಿಬ್ಬಂದಿ ಗಿರಿರಾಜ್ ಜಯನಗರ ಪೊಲೀಸ್ ಠಾಣೆಗೆ ಹಾಜರ್, ಮುಂದೇನಾಯ್ತು?
ಆಗ ಮಹಿಳಾ ಠಾಣೆಯ ಪಿಐ ಆಗಿದ್ದ ಅಭಯ್ ಪ್ರಕಾಶ್ ಸೋಮನಾಳ್ ಅವರು ತನಿಖೆ ಕೈಗೊಂಡು ಆರೋಪಿ ವಿರುದ್ಧ ನ್ಯಾಯಾಲಯಕ್ಕೆ ದೋಷಾರೋಪಣ ಪತ್ರವನ್ನು ಸಲ್ಲಿಸಿದ್ದಾರೆ. ಪ್ರಕರಣದಲ್ಲಿ ಸರ್ಕಾರದ ಪರವಾಗಿ ಸರ್ಕಾರಿ ಅಭಿಯೋಜಕ ಸತೀಶ್ ಅವರು ವಾದ ಮಂಡಿಸಿದ್ದಾರೆ. ನ್ಯಾಯಾಧೀಶ ದಯಾನಂದ್ ಅವರು ಗುರುವಾರ (2021ರ ಅಕ್ಟೋಬರ್ 8) ಶಿಕ್ಷೆ ವಿಧಿಸಿ ಆದೇಶಿದ್ದಾರೆ.
ಆರೋಪಿ ಮನ್ಸೂರ್ ಗೆ ಹತ್ತು ವರ್ಷಗಳ ಕಠಿಣ ಕಾರಾಗೃಹ ಶಿಕ್ಷೆ ಮತ್ತು 10 ಸಾವಿರ ದಂಡ, ದಂಡವನ್ನು ಕಟ್ಟದಿದ್ದರೆ ಆರು ತಿಂಗಳ ಸಾದಾ ಕಾರವಾಸ ಶಿಕ್ಷೆ ವಿಧಿಸಲಾಗಿದೆ. ಕಲಂ 323 ಐಪಿಸಿ ದೃಢಪಟ್ಟಿದ್ದು ಆರು ತಿಂಗಳ ಕಠಿಣ ಕಾರವಾಸ ಶಿಕ್ಷೆ 1000 ದಂಡ , ದಂಡವನ್ನು ಪಾವತಿಸದಿದ್ದರೆ ಒಂದು ತಿಂಗಳ ಸಾದಾ ಕಾರವಾಸ ಶಿಕ್ಷೆ ಹಾಗೂ ಕಲಂ 506 ಐಪಿಸಿ ದೃಢಪಟ್ಟಿದ್ದು ಆರು ತಿಂಗಳ ಸಾದಾ ಕಾರವಾಸ ಹಾಗೂ 1000 ದಂಡ, ದಂಡ ಪಾವತಿಸದಿದ್ದರೆ ಒಂದು ತಿಂಗಳ ಸಾದಾ ಕಾರವಾಸದ ಶಿಕ್ಷೆಯನ್ನು ವಿಧಿಸಲಾಗಿದೆ. ನೊಂದ ಬಾಲಕಿಗೆ ಪರಿಹಾರವಾಗಿ ₹12,000 ಹಣ ಪಾವತಿಸುವುದು ಹಾಗೂ ಸರ್ಕಾರಕ್ಕೆ 1000 ಹಣವನ್ನು ಜಮಾ ಮಾಡಲು ಆದೇಶ ನೀಡಿದ್ದಾರೆ.
https://www.suddikanaja.com/2021/09/01/attack-on-renowned-environmental-fighter-dv-girish-at-chikkamagaluru/