ಅಮಾಯಕನ ಪ್ರಾಣ ನುಂಗಿದ ಅವೆಂಜರ್ ಬೈಕ್! ಯುವಕನ ಕೊಲೆಗೈದಿದ್ದ ನಾಲ್ವರು ಅರೆಸ್ಟ್

 

 

ಸುದ್ದಿ ಕಣಜ.ಕಾಂ | CITY | CRIME NEWS
ಶಿವಮೊಗ್ಗ: ಗಾಡಿಕೊಪ್ಪದ ಸ್ವಾಮಿ ವಿವೇಕಾನಂದ ಬಡಾವಣೆಯಲ್ಲಿ ಯುವಕನೊಬ್ಬನನ್ನು ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿ ಕೊಲೆಗೈದಿರುವ ಘಟನೆಯ ಸಂಬಂಧ ನಾಲ್ವರು ಆರೋಪಿಗಳನ್ನು ಪೊಲೀಸರು ಭಾನುವಾರ ಬಂಧಿಸಿದ್ದಾರೆ.
ಅಕ್ಟೋಬರ್ 14ರಂದು ಆಯುಧ ಪೂಜೆ ದಿನವೇ ಸಂತೋಷ್ (30) ಎಂಬಾತನಿಗೆ ಹಿಂಬದಿಯಿಂದ ತಲೆ ಭಾಗಕ್ಕೆ ಬಲವಾಗಿ ಹೊಡೆದಿದ್ದು, ಆತ ಮೃತಪಟ್ಟಿದ್ದ. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ. ಆದರೆ, ವಿಚಾರಣೆ ವೇಳೆ, ಮೃತಪಟ್ಟ ವ್ಯಕ್ತಿಗೂ ಆರೋಪಿಗಳು ಯಾವುದೇ ವೈಷಮ್ಯ ಇರಲಿಲ್ಲ ಎಂಬ ವಿಚಾರ ಬೆಳಕಿಗೆ ಬಂದಿದೆ.

ಕಿರಣ್ ಎಂದುಕೊಂಡು ಸಂತೋಷ್ ಕೊಲೆ

ಕೊಲೆ ಮಾಡಿರುವ ಆರೋಪಿಗಳು ಹಾಗೂ ಕಿರಣ್ ಎಂಬುವವರ ನಡುವೆ ಹಳೇ ವೈಷಮ್ಯವಿತ್ತು. ಸೆಪ್ಟೆಂಬರ್ 19ರಂದು ನಗರದ ಟ್ಯಾಂಕ್ ಮೊಹಲ್ಲಾ ಬಳಿ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಲಾಗಿತ್ತು. ಈ ವೈಷಮ್ಯದಿಂದಾಗಿ ಕಿರಣ್ ಎಂದುಕೊಂಡು ಸಂತೋಷ್ ಮೇಲೆ ಹಲ್ಲೆ ಮಾಡಲಾಗಿದೆ.
ಕಿರಣ್ ಎಂಬಾತ ಅವೆಂಜರ್ ಬೈಕ್ ಬಳಕೆ ಮಾಡುತ್ತಿದ್ದ. ಆ ದಿನ ಸ್ವಾಮಿ ವಿವೇಕಾನಂದ ಬಡಾವಣೆಯಲ್ಲಿ ಸಂತೋಷ್ ಕೂಡ ಅದೇ ರೀತಿಯ ಅವೆಂಜರ್ ಬೈಕ್ ನೊಂದಿಗೆ ನಿಂತಿದ್ದ. ಆಗ ಆರೋಪಿಗಳು ಸಂತೋಷ್ ಮೇಲೆ ಹಲ್ಲೆ ಮಾಡಿದ್ದಾರೆ ಎಂದು ತಿಳಿದುಬಂದಿದೆ. ಕೋಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿತ್ತು.

https://www.suddikanaja.com/2021/01/28/four-person-arrested-in-shivamogga/

error: Content is protected !!