ಯಡಿಯೂರಪ್ಪ ಅವರಿಗೆ ಸನ್ಮಾನಿಸಲು ನಿರ್ಧಾರ, ಕಾರಣವೇನು?

 

 

ಸುದ್ದಿ ಕಣಜ.ಕಾಂ | DISTRICT | POLITICAL NEWS
ಶಿವಮೊಗ್ಗ: ಕೃಷಿ ಮತ್ತು ತೋಟಗಾರಿಕೆ ವಿಶ್ವವಿದ್ಯಾಲಯಕ್ಕೆ ಕೆಳದಿ ಶಿವಪ್ಪ ನಾಯಕರ ಹೆಸರಿಟ್ಟಿದ್ದಕ್ಕೆ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರನ್ನು ಸನ್ಮಾನಿಸಲು ತೀರ್ಮಾನ ಕೈಗೊಳ್ಳಲಾಗಿದೆ.
ಜಿಲ್ಲಾ ಅಖಿಲ ಭಾರತ ವೀರಶೈವ ಮಹಾಸಭಾವು ತನ್ನ ಪ್ರತಿಷ್ಠಿತ ಕೆಳದಿ ಶಿವಪ್ಪನಾಯಕ ಪ್ರಶಸ್ತಿಯನ್ನು ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ಅವರಿಗೆ ನೀಡಲು ತೀರ್ಮಾನಿಸಿದೆ.
ಈ ಪ್ರಶಸ್ತಿ ಸ್ವೀಕರಿಸಲು ಒಪ್ಪಿಗೆ ನೀಡಬೇಕೆಂದು ಯಡಿಯೂರಪ್ಪ ಅವರಿಗೆ ಮಹಾ ಸಭಾದ ಪದಾಧಿಕಾರಿಗಳು ಶುಕ್ರವಾರ ಸಂಜೆ ಮನವಿ ಮಾಡಿದೆ. ಸಲ್ಲಿಸಿದ್ದಾರೆ.

READ | ತಮ್ಮ ಹೊಸ ಐಷಾರಾಮಿ ಕಾರಿನಲ್ಲೇ ಆರ್.ಸಿ.ಬಿ ಮ್ಯಾಚ್ ವೀಕ್ಷಿಸಿದ ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ

ಶಿವಮೊಗ್ಗ ಜಿಲ್ಲೆ ಸಾಂಸ್ಕೃತಿಕವಾಗಿ ಶ್ರೀಮಂತವಾಗಿದ್ದು, ಕೆಳದಿ ಅರಸರ ಮನೆತನ ನಮ್ಮ ಜಿಲ್ಲೆಗೆ ಅಪಾರ ಕೊಡುಗೆ ನೀಡಿದೆ. ಅರಸು ಮನೆತನದಲ್ಲಿ ಜನಪರ, ಜೀವಪರ, ರೈತಪರ ಆಳ್ವಿಕೆ ನಡೆಸಿದೆ. ಕೆಳದಿ ಅರಸ ಶಿವಪ್ಪ ನಾಯಕ ವೈಜ್ಞಾನಿಕವಾಗಿ ರೈತರಿಗೆ ತೆರಿಗೆ ನಿಗದಿ ಮಾಡಿ ಜಗತ್ತಿನಲ್ಲೇ ಮೊದಲ ಬಾರಿಗೆ ತೆರಿಗೆ ಪದ್ಧತಿ ಜಾರಿಗೆ ತಂದಿದ್ದರು. ಶಿವಪ್ಪನಾಯಕರ ತೆರಿಗೆ ಪದ್ಧತಿಯನ್ನು ಬ್ರಿಟಿಷರು ಅನುಸರಿಸಿ ಕಂದಾಯ ಮತ್ತು ಜಮೀನು ಅಳತೆಯನ್ನು ನಿಗದಿ ಮಾಡಿದ್ದು ಗಮನಿಸಿದರೆ ಶಿವಪ್ಪ ನಾಯಕರ ದೂರ ದೃಷ್ಟಿ ಅರಿವು ನಮಗಾಗುತ್ತದೆ.
ಮುಖ್ಯಮಂತ್ರಿಯಾಗಿದ್ದ ವೇಳೆ ಯಡಿಯೂರಪ್ಪ ರಾಜ್ಯಕ್ಕೆ ಹತ್ತಾರು ಯೋಜನೆ ನೀಡಿದ್ದಾರೆ. ಕೆಳದಿ ಪರಂಪರೆಯ ಎಲ್ಲ ರೈತಪರ ಮೌಲ್ಯಗಳಿಂದ ನಾಡು ಕಟ್ಟಿದ ತಾವು ಶಿವಪ್ಪನಾಯಕರ ಹೆಸರನ್ನು ಅಜರಾಮರಗೊಳಿಸುವ ನಿಟ್ಟಿನಲ್ಲಿ ಶಿವಮೊಗ್ಗ ಜಿಲ್ಲೆಗೆ ತಾವು ನೀಡಿದ ಕೊಡುಗೆ ಹಾಗೂ ವಿಶ್ವವಿದ್ಯಾಲಯಕ್ಕೆ ಶಿವಪ್ಪನಾಯಕರ ಹೆಸರಿಟ್ಟಿರುವುದನ್ನು ಸ್ಮರಿಸಿ ಈ ಪ್ರಶಸ್ತಿ ನೀಡಲಾಗುತ್ತಿದೆ. ಇದನ್ನು ಸ್ವೀಕರಿಸಲು ಒಪ್ಪಿಗೆ ನೀಡಬೇಕೆಂದು ಬಿ.ಎಸ್.ವೈ.ಗೆ ಮನವಿ ಮಾಡಿದ್ದಾರೆ.
ಮಹಾಸಭಾದ ಜಿಲ್ಲಾಧ್ಯಕ್ಷ ರುದ್ರಮುನಿ ಎನ್. ಸಜ್ಜನ್, ರೇಣುಕಾ ನಾಗರಾಜ್ ಉಪಸ್ಥಿತರಿದ್ದರು.

https://www.suddikanaja.com/2021/09/16/kuvempu-university-convocation-nirmala-seetaraman/

error: Content is protected !!