ಸುದ್ದಿ ಕಣಜ.ಕಾಂ | NATIONAL | JOB JUNCTION
ನವದೆಹಲಿ: ಆದಾಯ ತೆರಿಗೆ ಇಲಾಖೆಯಲ್ಲಿ ವಿದ್ಯಾರ್ಹತೆಗೆ ಅನುಗುಣವಾಗಿ ವಿವಿಧ ಹುದ್ದೆಗಳಿಗೆ ನೇಮಕಾತಿ ನಡೆಯಲಿದೆ. ಮಾನ್ಯತೆ ಪಡೆದ ವಿಶ್ವವಿದ್ಯಾಲಯಗಳಿಂದ ಪದವಿ ಹಾಗೂ ಪಿಯುಸಿ ಅಥವಾ ತತ್ಸಮಾನ, ಎಸ್ಸೆಸ್ಸೆಲ್ಸಿ ಪಾಸಾದವರಿಗೆ ಉದ್ಯೋಗ ಅವಕಾಶ ಲಭ್ಯ ಇವೆ. ಇದರ ಸದುಪಯೋಗ ಪಡೆದುಕೊಳ್ಳಬಹುದು.
ನವದೆಹಲಿಯಲ್ಲಿರುವ ಆದಾಯ ತೆರಿಗೆ ಇಲಾಖೆ ಕಚೇರಿಯಲ್ಲಿ ಖಾಲಿ ಇರುವ 21 ಹುದ್ದೆಗಳಿಗೆ ನೇಮಕಾತಿ ನಡೆಯಲಿದೆ. ಅರ್ಜಿ ಸಲ್ಲಿಸಲು ನವೆಂಬರ್ 15 ಅಂತಿಮ ದಿನವಾಗಿದೆ. ಅರ್ಜಿಗಳನ್ನು ಆನ್ಲೈನ್ ಹಾಗೂ ಆಫ್ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು.
ಒಟ್ಟು 21 ಹುದ್ದೆಗಳ ಭರ್ತಿ ಮಾಡಲಾಗುವುದು. ಟ್ಯಾಕ್ಸ್ ಸಹಾಯಕರು- 11, ಸ್ಟೆನೋಗ್ರಾಫರ್ ಗ್ರೇಡ್ 2- 5 ಹಾಗೂ ಮಲ್ಟಿ ಟಾಸ್ಕಿಂಗ್ ಸ್ಟಾಫ್- 5 ಹುದ್ದೆಗಳ ಭರ್ತಿ ನಡೆಯಲಿದೆ.
ಅರ್ಜಿಯನ್ನು ಇಲ್ಲಿಗೆ ಕಳುಹಿಸಿ
ಆದಾಯ ತೆರಿಗೆ ಉಪ ಆಯುಕ್ತರು, ಮೂರನೇ ಮಹಡಿ, ಕೊಠಡಿ ಸಂಖ್ಯೆ 378A, ಕೇಂದ್ರ ಆದಾಯ ಕಟ್ಟಡ, ಐಪಿ ಎಸ್ಟೇಟ್, ನವದೆಹಲಿ 110002 ಇಲ್ಲಿಗೆ ಕಳುಹಿಸಲು ಸೂಚಿಸಲಾಗಿದೆ.
ಹುದ್ದೆ | ವಿದ್ಯಾರ್ಹತೆ | ವಯೋಮಿತಿ |
ಟ್ಯಾಕ್ಸ್ ಸಹಾಯಕರು | ಈ ಹುದ್ದೆಗೆ ಅರ್ಜಿ ಸಲ್ಲಿಸಲು ಬಯಸುವ ಅಭ್ಯರ್ಥಿಯು ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಪದವಿ ಉತ್ತೀರ್ಣರಾಗಿಬೇಕು. | 18-30 ವರ್ಷ |
ಸ್ಟೆನೋಗ್ರಾಫರ್ ಗ್ರೇಡ್-2: | ಅಭ್ಯರ್ಥಿಯು 12ನೇ ತರಗತಿ ಅಥವಾ ತತ್ಸಮಾನ ವಿದ್ಯಾರ್ಹತೆಯನ್ನು ಮಾನ್ಯತೆ ಪಡೆದ ಬೋರ್ಡ್/ ವಿವಿಯಿಂದ ಹೊಂದಿರಬೇಕು. | 18 ರಿಂದ 27 |
ಮಲ್ಟಿ ಟಾಸ್ಕಿಂಗ್ ಸ್ಟಾಫ್ | ಎಸ್ಸೆಸ್ಸೆಲ್ಸಿ ಉತ್ತೀರ್ಣರಾಗಿರಬೇಕು. | 18-25 ವರ್ಷ |
https://www.suddikanaja.com/2021/09/27/job-opportunity-to-all-in-ssc/