ಉದ್ಯೋಗ ಆಕಾಂಕ್ಷಿಗಳಿಗೆ ಶುಭ ಸುದ್ದಿ, 8, 10, ಐಟಿಐ ಪಾಸಾದವರಿಗೆ ರೈಲ್ವೆ ಇಲಾಖೆಯಲ್ಲಿ ಭರ್ಜರಿ ಉದ್ಯೋಗ ಅವಕಾಶ

 

 

ಸುದ್ದಿ ಕಣಜ.ಕಾಂ | NATIONAL | JOB JUNCTION
ಬೆಂಗಳೂರು: ರೈಲ್ವೆ ಇಲಾಖೆಯಲ್ಲಿ ಕಾರ್ಯನಿರ್ವಹಿಸಲು ಆಸಕ್ತ ಅಭ್ಯರ್ಥಿಗಳಿಗೆ ರೈಲ್ವೆ ಇಲಾಖೆ ಶುಭ ಸುದ್ದಿ ನೀಡಿದೆ. 8, 10ನೇ ತರಗತಿ ಹಾಗೂ ಐಟಿಐನಲ್ಲಿ ಪಾಸಾದವರಿಗೆ ಉದ್ಯೋಗ ಅವಕಾಶವಿದೆ.

ಪೂರ್ವ ರೈಲ್ವೆಯಲ್ಲಿ 3,366 ಆಕ್ಟ್ ಅಪ್ರೆಂಟಿಸ್ ಹುದ್ದೆಗಳ ನೇಮಕಾತಿಗಾಗಿ ಅಧಿಸೂಚನೆ ಹೊರಡಿಸಲಾಗಿದೆ. ಮೆಕ್ಯಾನಿಕಲ್, ವೆಲ್ಡರ್, ಎಲೆಕ್ಟ್ರಿಕಲ್, ಡ್ರಾಟ್ಸ್ ಮನ್, ಫಿಟ್ಟರ್ ಹೀಗೆ ವಿವಿಧ ಟ್ರೇಡ್ ಅರ್ಹತೆ ಹೊಂದಿರುವವರು ಅರ್ಜಿ ಸಲ್ಲಿಸಬಹುದು. ಅಭ್ಯರ್ಥಿಗಳು ಕನಿಷ್ಠ 15 ಹಾಗೂ . ಗರಿಷ್ಠ 24 ವರ್ಷ ಮೀರಿರಬಾರದು.

ಅಕ್ಟೋಬರ್ 4ರಿಂದ ಅರ್ಜಿ ಸಲ್ಲಿಸಲು ಅವಕಾಶ ನೀಡಲಾಗಿದೆ. ಅರ್ಜಿಗಳನ್ನು ಸಲ್ಲಿಸಲು ನವೆಂಬರ್ 3 ಅಂತಿಮ ದಿನವಾಗಿದೆ. ನ.18ರಂದು ಆಯ್ಕೆಗೊಂಡಿರುವ ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆ ಮಾಡಲಾಗುವುದು.

READ | ಸೈನಿಕ ಶಾಲೆಯಲ್ಲಿ‌ ನಡೆಯಲಿದೆ‌ ವಿವಿಧ ಹುದ್ದೆಗಳ ಭರ್ತಿ, ಕೈತುಂಬ ಸಂಬಳ

ಆಯ್ಕೆ ಪ್ರಕ್ರಿಯೆ ಹೇಗೆ
ನಿಗದಿಪಡಿಸಿದ ಹುದ್ದೆಗಳಿಗೆ ಅಭ್ಯರ್ಥಿಗಳ ಆಯ್ಕೆಯು ಕೋರ್ಸ್ ಗಳಲ್ಲಿ ಪಡೆದ ಅಂಕಗಳ ಆಧಾರದ ಮೇಲೆ ಆಯ್ಕೆ ಪಟ್ಟಿ ಸಿದ್ಧಪಡಿಸಲಾಗುವುದು.

NOTIFICATION

WEBSITE

error: Content is protected !!