ಸುದ್ದಿ ಕಣಜ.ಕಾಂ | NATIONAL | JOB JUNCTION
ಬೆಂಗಳೂರು: ನ್ಯಾಷನಲ್ ಫರ್ಟಿಲೈಸರ್ಸ್ ಲಿಮಿಟೆಡ್ (NFL)ನಲ್ಲಿ ಖಾಲಿ ಹುದ್ದೆಗಳ ಭರ್ತಿಗೆ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಪದವೀಧರರು ಕನ್ಸಲ್ಟೆಂಟ್ ಹಾಗೂ ಸೀನಿಯರ್ ಕನ್ಸಲ್ಟೆಂಟ್ ಹುದ್ದೆಗಳಿಗೆ ಅರ್ಜಿಗಳನ್ನು ಸಲ್ಲಿಸಬಹುದು.
40 ಕನ್ಸಲ್ಟೆಂಟ್ ಹಾಗೂ ಸೀನಿಯರ್ ಕನ್ಸಲ್ಟೆಂಟ್ ಹುದ್ದೆಗಳಿಗೆ ಪದವೀಧರರು ಡಿಸೆಂಬರ್ 15 ರೊಳಗೆ ಅರ್ಜಿಗಳನ್ನು ಆಫ್ಲೈನ್ ಮೂಲಕ ಸಲ್ಲಿಸಬಹುದಾಗಿದೆ.
READ | JOBS IN BSNL ಡಿಪ್ಲೋಮಾ, ತಾಂತ್ರಿಕ ಪದವೀಧರರಿಗೆ ಉದ್ಯೋಗ ಅವಕಾಶ
ನವೆಂಬರ್ 26ರಿಂದ ಅರ್ಜಿ ಸಲ್ಲಿಕೆ ಪ್ರಕ್ರಿಯೆ ಆರಂಭವಾಗಿದ್ದು, ಆಸಕ್ತ ಅಭ್ಯರ್ಥಿಗಳು NFL ವೆಬ್ಸೈಟ್ nationalfertilizers.com ನಲ್ಲಿ ಇನ್ನಷ್ಟು ಮಾಹಿತಿ ಪಡೆಯಬಹುದು.
ಪಾಣಿಪತ್ ನಲ್ಲಿ ಉದ್ಯೋಗ ಅವಕಾಶವಿದ್ದು, ಮಾನ್ಯತೆ ಪಡೆದ ವಿಶ್ವವಿದ್ಯಾಲಯ ಅಥವಾ ಮಂಡಳಿಯಿಂದ ಯಾವುದೇ ವಿಷಯದಲ್ಲಿ ಪದವಿ ಪಡೆದಿರುವವರು ಅರ್ಜಿಗಳನ್ನು ಸಲ್ಲಿಸಬಹುದು. ಆದರೆ, ಸಂಬಂಧಪಟ್ಟ ಕ್ಷೇತ್ರದಲ್ಲಿ ಅನುಭವ ಹೊಂದಿರಬೇಕು. ಸೀನಿಯರ್ ಕನ್ಸಲ್ಟೆಂಟ್ 12 ಹಾಗೂ ಕನ್ಸಲ್ಟೆಂಟ್ 28 ಸೇರಿ ಒಟ್ಟು 40 ಹುದ್ದೆಗಳು ಖಾಲಿ ಇವೆ. 1957ರ ಜುಲೈ 1ಕ್ಕೂ ಮುನ್ನ ಜನಿಸಿರಬೇಕು.
ದಾಖಲಾತಿ ಪರಿಶೀಲನೆ ಹಾಗೂ ವೈಯಕ್ತಿಕ ಸಂದರ್ಶನದ ಮೂಲಕ ಆಯ್ಕೆ ಪ್ರಕ್ರಿಯೆ ನಡೆಯಲಿದೆ.