ಮನೆಯಲ್ಲಿ ಮಂಗನ ಬರ್ತ್ ಡೇ, ಸಚಿವರು, ಸ್ವಾಮೀಜಿಗಳು ಭಾಗಿ, ಮಂಗಕ್ಕೆ ಭರ್ಜರಿ ಡ್ರೆಸ್ಸಿಂಗ್

 

 

ಸುದ್ದಿ‌ ಕಣಜ.ಕಾಂ | DISTRICT | HUMAN INTEREST
ಶಿವಮೊಗ್ಗ: ಮನೆಯಲ್ಲಿ‌ ಶ್ವಾನ, ಬೆಕ್ಕು, ಗಿಣಿ‌ ಇತ್ಯಾದಿಗಳನ್ನು ಸಾಕುವುದು ಇತ್ತೀಚೆನ ಟ್ರೆಂಡ್. ಆದರೆ, ಇಲ್ಲೊಬ್ಬರು ಮಂಗ (monkey)ವನ್ನು ಸಾಕಿದ್ದಾರೆ. ಇನ್ನೂ‌ ವಿಶಿಷ್ಟವೆಂದರೆ ಇದರ ಆರನೇ ವರ್ಷದ ಬರ್ತ್ ಡೇ‌ (birth day) ಆಚರಣೆ ಮಾಡಿರುವುದು.
ಹೌದು, ಇಂತಹದ್ದೊಂದು ವಿಶಿಷ್ಟ ಘಟನೆ ಎನ್.ಟಿ.ರಸ್ತೆಯ ಮನೆಯೊಂದರಲ್ಲಿ ಭಾನುವಾರ ಜರುಗಿದೆ. ಈ ವಿಶಿಷ್ಟ ಗಳಿಗೆಗೆ ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್.ಈಶ್ವರಪ್ಪ ದಂಪತಿ ಹಾಗೂ ಚಿಕ್ಕಮಗಳೂರಿನ ತಾವರೆಕೆರೆಯ ಶಿಲಾಮಠದ ಶ್ರೀ ಅಭಿನವ ಸಿದ್ದಲಿಂಗ ಶಿವಾಚಾರ್ಯ ಕಿರಿಯ ಶ್ರೀಗಳು ಸಾಕ್ಷಿಯಾದರು.

READ | ಮನೆಯಿಂದಲೇ ನಾಯಿ ಕಳವು, ಕೆಲವೇ ಗಂಟೆಗಳಲ್ಲಿ ಪತ್ತೆ ಹಚ್ಚಿದ ಪೊಲೀಸ್‌

ಚಿತ್ರ ವೈರಲ್, ವ್ಯಕ್ತವಾದ ಮೆಚ್ಚುಗೆ
ಪಾರ್ವತಮ್ಮ ಅವರ ಮನೆಯಲ್ಲಿ ಮಂಗನ ಜನ್ಮ ದಿನವನ್ನು ಅದ್ಧೂರಿಯಾಗಿ ಆಚರಣೆ ಮಾಡಲಾಗಿದ್ದು, ಈ‌ ಖುಷಿಯ ಕ್ಷಣಗಳಲ್ಲಿ ಈಶ್ವರಪ್ಪ ದಂಪತಿ ಭಾಗಿಯಾಗಿದ್ದಾರಲ್ಲದೇ ಕುಟುಂಬದವರ ಕಾರ್ಯಕ್ಕೆ ಶ್ಲಾಘನೆ ವ್ಯಕ್ತಪಡಿಸಿದ್ದಾರೆ.

IMG 20211206 WA0017
ಶಿವಮೊಗ್ಗದ ಎನ್.ಟಿ.ರಸ್ತೆಯಲ್ಲಿ ನಡೆದ ಮಾರುತಿಯ ಜನ್ಮ ದಿನಾಚರಣೆ ಕಾರ್ಯಕ್ರಮದಲ್ಲಿ ಸಚಿಚ ಈಶ್ವರಪ್ಪ ದಂಪತಿ ಭಾಗಿ. ಸ್ವಾಮೀಜಿಗಳೂ ಇದ್ದರು.

ಮಂಗವೀಗ ಫ್ಯಾಮಿಲಿ ಮೆಂಬರ್
ಮಂಗಕ್ಕೆ ನಾಲ್ಕು ತಿಂಗಳಿದ್ದಾಗ ಕೆಲವರು ತಂದು ಪರ್ವತಮ್ಮ ಅವರು ಕೊಟ್ಟಿದ್ದಾರೆ. ಅದನ್ನು ಪಡೆದ ಅವರು ಸಾಕುತಿದ್ದು, ಅದೀಗ ಫ್ಯಾಮಿಲಿ ಮೆಂಬರ್ ಆಗಿಯೇ ಮಾರ್ಪಟ್ಟಿದೆ. ಬರ್ತ್ ಡೇ ದಿನ ಮಂಗಕ್ಕೂ ಭರ್ಜರಿ ಕಾರ್ಯಕ್ರಮ ಮಾಡಲಾಗುತ್ತದೆ.‌ ಬಟ್ಟೆ ತೊಡಿಸಿ, ಕೇಕ್ ಕತ್ತರಿಸಿ ಸಂಭ್ರಮಿಸಲಾಗುತ್ತದೆ.
ಪಾರ್ವತಮ್ಮ ಅವರಿಗೆ ನಾಲ್ಕು‌ ಜನ‌ ಮಕ್ಕಳಿದ್ದಾರೆ. ಮಂಗಕ್ಕೆ ‘ಮಾರುತಿ’ ಎಂದು ನಾಮಕರಣ ಮಾಡಿದ್ದು, ಈತನೂ ಕುಟುಂಬದ ಎಲ್ಲ‌ ಕ್ಷಣಗಳಲ್ಲೂ ಭಾಗಿಯಾಗುತ್ತಾನೆ.
ಮಂಗಗಳನ್ನು ಕಂಡರೆ ಮಾರುದ್ದ ಓಡುವ ಈ ಕಾಲದಲ್ಲಿ ಅದನ್ನು ಮನೆಯಲ್ಲಿಟ್ಟುಕೊಂಡು ಕುಟುಂಬದ ಸದಸ್ಯರಂತೆಯೇ ಕಾಣುತ್ತಿರುವ ಔದಾರ್ಯಕ್ಕೆ ಜನ ಫಿದಾ ಆಗಿದ್ದಾರೆ. ಮಂಗಕ್ಕೆ ಬಟ್ಟೆ ತೊಡಿಸಿ ಕೇಕ್ ಕತ್ತರಿಸುವ ಫೋಟೊ ವೈರಲ್ ಆಗಿದ್ದು, ಜನ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

https://www.suddikanaja.com/2021/06/08/accused-arrested-2/

error: Content is protected !!