ಸುದ್ದಿ ಕಣಜ.ಕಾಂ | KARNATAKA | ELECTION NEWS
ಶಿವಮೊಗ್ಗ: ಬೆಂಗಳೂರು ರಾಜ್ಯ ಒಕ್ಕಲಿಗರ ಸಂಘದ ಕಾರ್ಯಕಾರಿ ಸಮಿತಿಗೆ ಚುನಾವಣೆ (Karnataka Vokkaligara sangha) ಯನ್ನು ಡಿಸೆಂಬರ್ 12ರಂದು ನಡೆಸಲು ರಾಜ್ಯ ಚುನಾವಣಾಧಿಕಾರಿಗಳು ತೀರ್ಮಾನಿಸಿದ್ದು, ಶಿವಮೊಗ್ಗ(shivamogga) ಮತ್ತು ಉತ್ತರ ಕನ್ನಡ (uttara kannada) ಜಿಲ್ಲೆಯ ಒಂದು ಸ್ಥಾನಕ್ಕೆ ಒಟ್ಟು 9 ಜನ ಅಭ್ಯರ್ಥಿಗಳು (candidates) ಕಣದಲ್ಲಿ ಉಳಿದಿರುತ್ತಾರೆ.
READ | 7 ದಿನಗಳಲ್ಲಿ 3,350 ಕಿ.ಮೀ ಸೈಕ್ಲಿಂಗ್ ಪಯಣಿಸಿ ಇತಿಹಾಸ ಸೃಷ್ಟಿಸಿದ ಶಿವಮೊಗ್ಗ ಪ್ರತಿಭೆ
ಮತಗಟ್ಟೆಗಳ ವಿವರ
ಶಿವಮೊಗ್ಗ ಜಿಲ್ಲೆಯವರಿಗೆ ಶಿವಮೊಗ್ಗ ನಗರದ ಡಿ.ವಿ.ಎಸ್. ಸಂಯುಕ್ತ ಪ್ರೌಢ ಶಾಲೆ, ಭದ್ರಾವತಿ ತಾಲೂಕಿನ ಮತದಾರರಿಗೆ ಭದ್ರಾವತಿಯ ಎಸ್.ಎ.ವಿ. ಇಂಗ್ಲೀಷ್ ಪ್ರೈಮರಿ ಸ್ಕೂಲ್, ತೀರ್ಥಹಳ್ಳಿ ತಾಲೂಕಿನ ಮತದಾರರಿಗೆ ತೀರ್ಥಹಳ್ಳಿಯ ಬೆಟ್ಟಮಕ್ಕಿಯ ಯಡೆಹಳ್ಳಿಯಲ್ಲಿರುವ ಸಹ್ಯಾದ್ರಿ ಸ್ಕೂಲ್ (ಐಸಿಎಸ್ಇ) ಯಡೆಹಳ್ಳಿ, ಹೊಸನಗರ ತಾಲೂಕಿನ ಮತದಾರರಿಗೆ ಹೊಸನಗರದ ಮಲೆನಾಡು ಪ್ರೌಢ ಶಾಲೆ, ಹೊನ್ನಾವರ (ಉ.ಕ.ಜಿಲ್ಲೆ) ಕಾರವಾರ, ಯಲ್ಲಾಪುರ, ಶಿರಸಿ, ಅಂಕೋಲ, ಕುಮುಟ, ಸಿದ್ಧಾಪುರ, ಹೊನ್ನಾವರ, ಭಟ್ಕಳ ತಾಲೂಕುಗಳ ಮತದಾರರಿಗೆ ಹೊನ್ನಾವರದ ಸರ್ಕಾರಿ ಪ್ರೌಢ ಶಾಲೆ, ಪ್ರಭಾತ್ ನಗರ 5 ಕೇಂದ್ರಗಳಲ್ಲಿ ಒಟ್ಟು 28 ಬೂತ್ಗಳನ್ನು ಸಿದ್ಧಪಡಿಸಲಾಗಿದೆ.
ಒಟ್ಟು 13,440 ಮತದಾರರು, ಏನೇನು ಕಂಡಿಷನ್ಸ್?
ಶಿವಮೊಗ್ಗ ಜಿಲ್ಲೆಯಿಂದ 12,167 ಮತದಾರರು ಹಾಗೂ ಉ.ಕ. ಜಿಲ್ಲೆಯಿಂದ 1,273 ಮತದಾರರು ಒಟ್ಟು 13,440 ಮತದಾರರು ಇರುತ್ತಾರೆ. ಮತದಾನವು ಡಿ. 12 ರಂದು ಬೆಳಗ್ಗೆ 7 ರಿಂದ ಸಂಜೆ 5 ರವರೆಗೆ ನಡೆಯುತ್ತಿದ್ದು, ಮತದಾನಕ್ಕೆ ಸಂಬಂಧಿಸಿದಂತೆ ರಾಜ್ಯ ಒಕ್ಕಲಿಗರ ಸಂಘದ ಕೇಂದ್ರ ಕಾರ್ಯಾಲಯವು ನೀಡಿರುವ ಗುರುತಿನ ಚೀಟಿಯನ್ನು ಮಾತ್ರ ಮಾನ್ಯ ಮಾಡಲಾಗುವುದು.
READ | KSRTC ಕರ್ತವ್ಯಕ್ಕೆ ಹಾಜರಾಗಲು ಬಂದಿದ್ದ ಇಬ್ಬರು ಅರೆಸ್ಟ್, ಕಾರಣವೇನು?
ಮತದಾನದ ಕೇಂದ್ರದ 100 ಮೀ. ಒಳಗೆ ಯಾವುದೇ ರೀತಿಯ ಚುನಾವಣಾ ಪ್ರಚಾರವನ್ನು ಮಾಡತಕ್ಕದಲ್ಲ. ಮತದಾನ ಕೇಂದ್ರದಲ್ಲಿ ಅಭ್ಯರ್ಥಿಯು ಹಾಜರಿರಬಹುದು ಅಥವಾ ಅವರ ಪರವಾಗಿ ಏಜೆಂಟರು ಹಾಜರಿರಬಹುದು. ಒಬ್ಬ ಅಭ್ಯರ್ಥಿಯ ಪರವಾಗಿ ಒಂದು ಮತದಾನ ಕೇಂದ್ರಕ್ಕೆ ಒಬ್ಬ ಏಜೆಂಟರು ಮಾತ್ರ ಇರತಕ್ಕದ್ದು ಎಂದು ಸೂಚನೆ ನೀಡಲಾಗಿದೆ.
ಮತ ಎಣಿಕೆಯನ್ನು ಶಿವಮೊಗ್ಗದ ಜಿಪಂ ಕಚೇರಿ ಮುಂಭಾಗದಲ್ಲಿರುವ ಶ್ರೀರಾಮ ಆರ್ಯವೈಶ್ಯ ಸಹಕಾರ ಸಂಘದಲ್ಲಿ ಡಿ. 15ರಂದು ಬೆಳಗ್ಗೆ 9ಕ್ಕೆ ಪ್ರಾರಂಭ ಮಾಡಲಾಗುವುದು ಎಂದು ಶಿವಮೊಗ್ಗ ಜಿಲ್ಲೆಯ ಸಹಕಾರ ಸಂಘಗಳ ಉಪ ನಿಬಂಧಕರು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.
https://www.suddikanaja.com/2021/11/03/bride-grooms-convention/